ETV Bharat / business

ಹಣದುಬ್ಬರ ನಿಯಂತ್ರಣಕ್ಕೆ ಎಲ್ಲ ಕ್ರಮ.. ರೂಪಾಯಿ ಕುಸಿಯದಂತೆಯೂ ತಡೆ.. ಡಿಜಿಟಲ್​ ಕರೆನ್ಸಿ ಗೇಮ್​ ಚೇಂಜರ್​ ಎಂದ ದಾಸ್​ - ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಕುರಿತು ಮಾತನಾಡಿದ ದಾಸ್, ಆರ್‌ಬಿಐ ಬಿಡುಗಡೆಯ ಮೊದಲು ಅದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲನೆ ಹಾಗೂ ಆಗು -ಹೋಗುಗಳ ಬಗ್ಗೆ ಚಿಂತಿಸಿ ಮುಂದಡಿ ಇಟ್ಟಿದೆ ಎಂದು​ ಹೇಳಿದ್ದಾರೆ.

Rupee has behaved in an orderly manner, says RBI Governor
ಹಣದುಬ್ಬರ ನಿಯಂತ್ರಣಕ್ಕೆ ಎಲ್ಲ ಕ್ರಮ.. ರೂಪಾಯಿ ಕುಸಿಯದಂತೆಯೂ ಕ್ರಮ
author img

By

Published : Nov 2, 2022, 3:49 PM IST

ನವದೆಹಲಿ: ಕಳೆದ ಹಲವು ವಾರಗಳಿಂದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಲೇ ಸಾಗುತ್ತಿದೆ. ಅಮೆರಿಕ ಡಾಲರ್ ಎದುರು 83ರ ಗಡಿ ದಾಟಿದೆ. ಇದು ಕಳವಳಕ್ಕೂ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಆರ್​ಬಿಐ ಗವರ್ನರ್​​​ ಶಕ್ತಿಕಾಂತ ದಾಸ್, ಭಾರತೀಯ ಕರೆನ್ಸಿ ಕ್ರಮಬದ್ಧವಾಗಿ ನಡೆದುಕೊಂಡಿದ್ದು, ಅದರ ಪಥವನ್ನು ಭಾವನಾತ್ಮಕವಾಗಿ ನೋಡಬಾರದು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ FICCI ಯ ಬ್ಯಾಂಕಿಂಗ್ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಶಕ್ತಿಕಾಂತ್​ ದಾಸ್, ಅಮೆರಿಕ ಫೆಡರಲ್ ರಿಸರ್ವ್ ದೀರ್ಘಕಾಲದವರೆಗೆ ದರಗಳನ್ನು ಬಿಗಿಗೊಳಿಸುವುದಿಲ್ಲವಾದ್ದರಿಂದ ಬಂಡವಾಳ ಹರಿವು ಪುನಾರಂಭವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಫೆಡರಲ್​​ ಬ್ಯಾಂಕ್​ ಬಡ್ಡಿದರಗಳನ್ನು ಏರಿಕೆ ಮಾಡಿದ ಬಳಿಕ ರೂಪಾಯಿ ಮೌಲ್ಯ ಕುಸಿತ ಕಂಡಿತ್ತು ಈ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಸ್ಪಷ್ಟನೆ ನೀಡಿದ್ದಾರೆ. ಏರುತ್ತಿರುವ ಹಣದುಬ್ಬರವನ್ನು ತಡೆಯಲು ಫೆಡರಲ್ ಬ್ಯಾಂಕ್​ ರಿಸರ್ವ್ ದರಗಳನ್ನು ಹೆಚ್ಚಿಸಿತ್ತು.

ಜಾಗತಿಕ ಆರ್ಥಿಕ ಸ್ಥಿತಿಗತಿ ಹಾಗೂ ಫೆಡರಲ್​ ಬ್ಯಾಂಕ್​ ಬಡ್ಡಿದರ ಏರಿಕೆ, ಉಕ್ರೇನ್​ ಯುದ್ಧ ಹಾಗೂ ಇನ್ನಿತರ ಕಾರಣಗಳಿಂದ ಹಣದುಬ್ಬರ ಏರಿಕೆ ಕಾಣುತ್ತಿದ್ದು, ಶೇಕಡಾ 4 ಕ್ಕಿಂತ ಕಡಿಮೆ ಮಿತಿಯಲ್ಲಿ ಇರಿಸಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿತ್ತು. ಈ ಕಾರಣದಿಂದ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿ ಬಿದ್ದಿವೆ.

ತಕ್ಷಣಕ್ಕೆ ಏರುತ್ತಿರುವ ಹಣದುಬ್ಬರ ನಿಯಂತ್ರಣ ಅಸಾಧ್ಯ ಎಂದಿರುವ ಶಕ್ತಿಕಾಂತ್​ ದಾಸ, ಈ ಸಂಬಂಧ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಅವರು, ಸಭೆಯ ವಿವರಗಳನ್ನು ನೀಡಲು ನಿರಾಕರಿಸಿದರು. ಅಲ್ಲದೇ ಈ ವಿವರಗಳನ್ನು ಬಿಡುಗಡೆ ಮಾಡುವ ಅಧಿಕಾರ ಆರ್‌ಬಿಐಗೆ ಇಲ್ಲ ಎಂದರು.

ಹಣದುಬ್ಬರವನ್ನು 2 ರಿಂದ 4 ಪರ್ಸೆಂಟ್ ಮಿತಿಯೊಳಗೆ ಇರಿಸಲು ಕೇಂದ್ರೀಯ ಬ್ಯಾಂಕ್ ಉತ್ಸುಕವಾಗಿದೆ. ಆದರೆ, ಕಳೆದ ಒಂಬತ್ತು ತಿಂಗಳಿಂದ ಅದರ ನಿಯಂತ್ರಣ ಅಂದುಕೊಂಡಷ್ಟು ಪ್ರಮಾಣದಲ್ಲಿ ಮಾಡಲಾಗಿಲ್ಲ. ಆರ್‌ಬಿಐ ಬೆಲೆ ಏರಿಕೆಯ ನಿರ್ವಹಣೆ ಸಮರ್ಥಿಸಿಕೊಂಡ ದಾಸ್, ಬೇರೆ ಬೇರೆ ಸನ್ನಿವೇಶಗಳಲ್ಲಿ ಅಕಾಲಿಕವಾಗಿ ಬಂದ ಹಣದುಬ್ಬರವನ್ನು ತಕ್ಷಣವೇ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂದರು.

ಎಲ್ಲ ಅಂಶಗಳನ್ನು ಪರಿಶೀಲಿಸಿ ಇ - ರುಪಿ ಜಾರಿ: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಕುರಿತು ಮಾತನಾಡಿದ ದಾಸ್, ಆರ್‌ಬಿಐ ಬಿಡುಗಡೆಯ ಮೊದಲು ಅದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲನೆ ಹಾಗೂ ಆಗು - ಹೋಗುಗಳ ಬಗ್ಗೆ ಚಿಂತಿಸಿ ಮುಂದಡಿ ಇಡುತ್ತದೆ ಎಂದು ಹೇಳಿದ್ದಾರೆ.

ಇ-ರೂಪಾಯಿ ಬಿಡುಗಡೆ ದೇಶದ ಕರೆನ್ಸಿಯ ಇತಿಹಾಸದಲ್ಲಿ ಐತಿಹಾಸಿಕ ನಿರ್ಧಾರ. ಡಿಜಿಟಲ್​ ಕರೆನ್ಸಿ ಗೇಮ್​ ಚೇಂಜರ್​ ಆಗಿದ್ದು, ಇದು ವ್ಯವಹಾರ ಮಾಡುವ ವಿಧಾನ ಮತ್ತು ವಹಿವಾಟು ನಡೆಸುವ ವಿಧಾನದಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ಆರ್​​​ಬಿಐ ಗವರ್ನರ್​​​ ಹೇಳಿದ್ದಾರೆ. ನವೆಂಬರ್​ 1 ರಿಂದ ಪ್ರಾಯೋಜಿಕವಾಗಿ ಆರ್​ಬಿಐ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದೆ. ಎಂಟು ಸ್ಥಳಗಳಲ್ಲಿ ಇದು ಲಭ್ಯ ಇರಲಿದೆ.

ಇದನ್ನು ಓದಿ:ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಕರೆನ್ಸಿ ಕಾರ್ಯಾರಂಭ ಶೀಘ್ರ: ಆರ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.