ETV Bharat / business

ಔಟ್​ಡೇಟ್​ ಆಯ್ತು ರೆಸ್ಯೂಮ್​​​; ಉದ್ಯೋಗ ನೇಮಕಾತಿಯಲ್ಲಿ ಮಹತ್ವ ಕಳೆದುಕೊಳ್ಳುತ್ತಿದ್ಯಾ ಈ ವಿಧಾನ? - ಅಭ್ಯರ್ಥಿ ಮತ್ತು ನೇಮಕ ಮಾಡುವವರ ನಡುವಿನ

ಇಷ್ಟು ವರ್ಷಗಳ ಕಾಲ ನೇಮಕಾತಿ ವೇಳೆ ರೆಸ್ಯೂಮ್​​ ಮಹತ್ವ ಪಡೆದುಕೊಂಡಿತ್ತು. ಆದರೆ, ಇನ್ಮುಂದೆ ಈ ರೆಸ್ಯೂಮ್​​ ತನ್ನ ಪಾತ್ರ ಕಳೆದುಕೊಳ್ಳಲಿದೆ ಎಂದರೆ ತಪ್ಪಾಗಲ್ಲ.

resume-lost-its-importance-in-employment

author img

By ETV Bharat Karnataka Team

Published : Nov 15, 2023, 4:43 PM IST

ಯಾವುದೇ ಉದ್ಯೋಗಕ್ಕಾಗಿ ಕೆಲಸಕ್ಕೆ ಅರ್ಜಿ ಹಾಕಲು ರೆಸ್ಯೂಮ್​​ ಪ್ರಮುಖ ಪಾತ್ರವಹಿಸುತ್ತದೆ. ಅಭ್ಯರ್ಥಿ ಮತ್ತು ನೇಮಕ ಮಾಡುವವರ ನಡುವಿನ ಸೇತುವೆಯಾಗಿ ರೆಸ್ಯೂಮ್​ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಿಯು ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ತಪ್ಪದೇ ತಮ್ಮ ರೆಸ್ಯೂಮ್​​​ನ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗುತ್ತಾರೆ. ಈ ರೆಸ್ಯೂಮ್​ ಗಮನಿಸಿ ಅನೇಕ ಕಂಪನಿಗಳು ಅಭ್ಯರ್ಥಿಗಳ ಬಗ್ಗೆ ಮೊದಲಿಗೆ ಒಂದು ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತವೆ. ಸಂದರ್ಶನದ ಬಳಿಕ ಆಯ್ಕೆ ಮಾಡಬೇಕೇ ಬೇಡವೇ ಎಂಬ ನಿರ್ಧಾರ ಮಾಡಲಾಗುತ್ತದೆ. ಇಷ್ಟು ವರ್ಷಗಳ ಕಾಲ ನೇಮಕಾತಿ ವೇಳೆ ರೆಸ್ಯೂಮ್​​ ಮಹತ್ವವನ್ನು ಹೊಂದಿತು. ಆದರೆ, ಇನ್ಮುಂದೆ ಈ ರೆಸ್ಯೂಮ್​​ ತನ್ನ ಪಾತ್ರ ಕಳೆದುಕೊಳ್ಳಲಿದೆ ಎಂದರೆ ತಪ್ಪಲ್ಲ.

ಇತ್ತೀಚಿನ ದಿನದಲ್ಲಿ ರೆಸ್ಯೂಮ್​ ಎಂಬುದು ಹಳಸಿದ ಅಂಶವಾಗಿದೆ. ಇದಕ್ಕೆ ಕಾರಣ ಹಲವು ಇದೆ. ಅದರಲ್ಲಿ ಮುಖ್ಯ ಅಂಶ ಎಂದರೆ ನೇಮಕಾತಿ ಏಜೆನ್ಸಿಗಳು ತಮ್ಮ ಅಭ್ಯರ್ಥಿಗಳು ಆಧುನಿಕ ಮಾದರಿಗಳ ಮೂಲಕ ಆಯ್ಕೆಗೆ ಒತ್ತು ನೀಡುತ್ತಿವೆ. ಇದಕ್ಕಾಗಿ ಕಂಪನಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಸಾಮಾಜಿಕ ಮಾಧ್ಯಮ ಫ್ಲಾಟ್​ಫಾರ್ಮ್​ ಬಳಕೆಯಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿವೆ.

'ನೋ ರೆಸ್ಯೂಮ್​‘ ಪಾಲಿಸಿ: ಟ್ಯಾಲೆಂಟ್​ ಸೆಟ್ರಿಕ್​ ರಿಕ್ರೂಟ್​ಮೆಂಟ್' ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಅನೇಕ ಡಿಜಿಟಲ್​ ಸಂಪನ್ಮೂಲಗಳು ಲಭ್ಯವಿದ್ದು, ಇದರ ಆಧಾರದ ಮೇಲೆ ಕಂಪನಿಗಳು ನಿರ್ಧಾರವನ್ನು ಕೈಗೊಳ್ಳುತ್ತಿವೆ. ಟಾಪ್​ ನೇಮಕಾತಿ ಚಾನೆಲ್​ಗಳು, ಆನ್​ಲೈನ್​ ಪೋರ್ಟಲ್​, ಎಂಪ್ಲಾಯಿ ರೆಫ್ರೆನ್ಸ್​ (ಉದ್ಯೋಗಿ ಸಲಹೆ) ಹೀಗೆ ಹಲವು ಹೊಸ ತಂತ್ರಜ್ಞಾನಗಳು ಇದೀಗ ನೇಮಕಾತಿ ಪ್ರಕ್ರಿಯೆ ಭಾಗವಾಗಿದೆ.

ರೆಸ್ಯೂಮ್​​ಗಳಲ್ಲಿ ಬದಲಾವಣೆ ಮಾಡಲು ಕಾರಣ ಎಂದರೆ, ಹೆಚ್ಚಿನ ಅಭ್ಯರ್ಥಿಗಳು ಈಗಾಗಲೇ ಲಭ್ಯವಿರುವ ರೆಸ್ಯೂಮ್ ಫಾರ್ಮ್ಯಾಟ್‌ಗಳನ್ನು ಬಳಸುತ್ತಿರುವುದಾಗಿದೆ. ರೆಸ್ಯೂಮ್​ ಬರೆಯುವುದಕ್ಕಾಗಿಯೇ ಅನೇಕ ಪ್ರೊಫೆಷನಲ್​ ರೆಸ್ಯೂಮ್​ ರೈಟರ್​ಗಳಿದ್ದಾರೆ. ಅಲ್ಲದೇ, ಚಾಟ್​ಜಿಪಿಟಿಯಂತಹ ಎಐ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದಾಗಿದೆ. ಶೇ 80ರಷ್ಟು ರೆಸ್ಯೂಮ್​​ಗಳಲ್ಲಿ ಜನರು ಸುಳ್ಳು ಹೇಳುತ್ತಾರೆ. 10 ವರ್ಷದ ಹಿಂದೆ ಇದರ ಪ್ರತಿಶತ ಶೇ 65 ರಷ್ಟಿತು.

ಮೂರು ಸಾವಿರಕ್ಕೂ ಹೆಚ್ಚಿನ ನೇಮಕಾತಿದಾರರನ್ನು ಇತ್ತೀಚಿಗೆ ಸಮೀಕ್ಷೆ ಮಾಡಲಾಗಿದ್ದು, ರೆಸ್ಯೂಮ್​​ ಅಲ್ಲಿರುವ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ನಂಬುವುದಿಲ್ಲ. ಅವರು ಅಭ್ಯರ್ಥಿಗಳು ಕೆಲಸ ನೀಡುವುದಕ್ಕೂ ಮುನ್ನ, ಅಭ್ಯರ್ಥಿಗಳ ನಡುವಳಿಕೆಗಳಿಂದ ಹೆಚ್ಚಿನದನ್ನು ತಿಳಿಯಲು ಬಯಸುತ್ತಾರೆ. ಆದಾಗ್ಯೂ, ಕೇವಲ ಶೇ 30ರಷ್ಟು ಮಾಹಿತಿಗಳನ್ನು ಮಾತ್ರ ಈ ರೆಸ್ಯೂಮ್​​ಗಳಿಂದ ತಿಳಿಯಲು ಸಾಧ್ಯ ಎಂದಿದ್ದಾರೆ. ಅಲ್ಲದೆ ಬಹತೇಕ ನೇಮಕದಾರರು, ಅಭ್ಯರ್ಥಿಗಳು ಸಮಸ್ಯೆ ಬಿಡಿಸುವ, ನಿರ್ಧಾರ ಕೈಗೊಳ್ಳುವ ಕೌಶಲ್ಯ, ನಿರಂತರ ಕಲಿಕೆಯಲ್ಲಿನ ಸಾವಧಾನ, ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಮತ್ತು ನಾಯಕತ್ವದ ಗುಣ ನೋಡಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರೆಸ್ಯೂಮ್​ ಮಾತ್ರ ಅವಲಂಬಿಸದೇ ಹೆಚ್ಚಾಗಿ ಆನ್‌ಲೈನ್‌ನಲ್ಲಿ ಪೋಸ್ಟ್‌ಗಳು ಮತ್ತು ನಡವಳಿಕೆಯ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ: ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ, ಲಾಭ - ನಷ್ಟ ಅಷ್ಟೇ ಅಲ್ಲ.. ಇಲ್ಲಿದೆ ಅಪಾರ ಪ್ರಮಾಣದ ಉದ್ಯೋಗಾವಕಾಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.