ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ತಿಂಗಳ ಆ ಮಾಸದ ರಜಾ ದಿನಗಳ ಪಟ್ಟಿಯನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ತಿಂಗಳ ರಜೆ ಪಟ್ಟಿ ಕೂಡ ಬಿಡುಗಡೆಯಾಗಿದ್ದು, ಬ್ಯಾಂಕ್ ಉದ್ಯೋಗಿಗಳಿಗೆ ಬಂಪರ್ ರಜೆಗಳ ಆಫರ್ ಸಿಕ್ಕಿದೆ. ಆದರೆ, ಇದರಿಂದ ಗ್ರಾಹಕರಿಗೆ ತಮ್ಮ ಬ್ಯಾಂಕ್ ಕಾರ್ಯ ನಿರ್ವಹಣೆಗೆ ಕೊಂಚ ಅಡಚಣೆ ಉಂಟಾಗಲಿದೆ. ಸೆಪ್ಟೆಂಬರ್ ಮಾಸದಲ್ಲಿ ಸಿಕ್ಕಿರುವ ರಜೆಗಳ ಪಟ್ಟಿಯ ವಿವರ ಹೀಗಿದೆ.
ರಜೆ ಪಟ್ಟಿ ಬಿಡುಗಡೆ ಮಾಡಿದ ಸೆಂಟ್ರಲ್ ಬ್ಯಾಂಕ್: ವೆಬ್ಸೈಟ್ ಪ್ರಕಾರ, ಈ ತಿಂಗಳ ಅರ್ಧಕ್ಕಷ್ಟು ರಜೆಗಳು ಉದ್ಯೋಗಿಗಳಿಗೆ ಲಭಿಸಲಿದೆ. ಅಂದರೆ, ಒಟ್ಟಾರೆ 16 ರಜೆಗಳು ಸೆಪ್ಟೆಂಬರ್ನಲ್ಲಿ ಬ್ಯಾಂಕ್ ಉದ್ಯೋಗಿಗಳು ಪಡೆಯಲಿದ್ದಾರೆ. ಈ ರಜೆ ಪಟ್ಟಿಯಲ್ಲಿನ ಕೆಲವು ಹಬ್ಬ ಮತ್ತು ಇನ್ನಿತರ ಕಾರ್ಯಕ್ರಮಗಳು ಸೇರ್ಪಡನೆಯಾಗಿದೆ. ಇದರ ಜೊತೆಗೆ ಭಾನುವಾರ ಸೇರಿದಂತೆ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಕೂಡ ಸೇರಿದೆ. ಪ್ರತಿ ರಾಜ್ಯದಲ್ಲಿ ಹಬ್ಬಗಳು ವಿಭಿನ್ನವಾಗಿದ್ದು, ಇದರ ಪಟ್ಟಿ ಕೂಡ ಸೇರಿರುವ ಹಿನ್ನೆಲೆಯಲ್ಲಿ ಇಷ್ಟೊಂದು ರಜೆ ಲಭ್ಯವಾಗಿದೆ.
ಈ ದಿನಗಳಲ್ಲಿ ಬ್ಯಾಂಕ್ ರಜೆ: ಸೆಪ್ಟೆಂಬರ್ನ ಮೊದಲ ರಜೆ ಜನ್ಮಾಷ್ಠಮಿಯದ್ದಾಗಿದೆ ಆಗಿದೆ. ಇದಾದ ಬಳಿಕ ಗಣೇಶ ಚತುರ್ಥಿ, ಈದ್ ಇ ಮಿಲಾದ್ ರಜೆಗಳು ಬರಲಿವೆ. ಸಾಮಾನ್ಯ ರಜೆಗಳಾದ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಕಾರ್ಯನಿರ್ವಹಣೆ ಇರುವುದಿಲ್ಲ.
ಆನ್ಲೈನ್ ಸೇವೆಗೆ ಇಲ್ಲ ಅಡ್ಡಿ: ಬ್ಯಾಂಕ್ ರಜೆ ಆದರೂ ಗ್ರಾಹಕರು ಚಿಂತೆ ಪಡಬೇಕಿಲ್ಲ. ಕಾರಣ ಬ್ಯಾಂಕ್ನ ಆನ್ ಲೈನ್ ಸೇವೆಗಳು ಮುಂದುವರೆಯಲಿದೆ. ಇದರಿಂದಾಗಿ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ವಹಿವಾಟು ನಡೆಸಬಹುದು. ನೆಟ್ ಬ್ಯಾಂಕಿಂಗ್ ನಡೆಸಲು ಕೂಡ ಅವಕಾಶವಿದೆ
ಬ್ಯಾಂಕ್ ರಜೆ ಪಟ್ಟಿ ಇಂತಿದೆ.
ದಿನಾಂಕ | ದಿನ | ರಜೆ ಕಾರಣ | ಯಾವ ರಾಜ್ಯದಲ್ಲಿ ಬ್ಯಾಂಕ್ ರಜೆ |
3 ಸೆಪ್ಟೆಂಬರ್ | ಭಾನುವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
6 ಸೆಪ್ಟೆಂಬರ್ | ಬುಧವಾರ | ಜನ್ಮಾಷ್ಠಮಿ | ಭುವನೇಶ್ವರ್, ಚೆನ್ನೈ, ಹೈದ್ರಾಬಾದ್, ಪಾಟ್ನಾದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
7 ಸೆಪ್ಟೆಂಬರ್ | ಗುರುವಾರ | ಜನ್ಮಾಷ್ಠಮಿ | ಅಹಮದಾಬಾದ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
9 ಸೆಪ್ಟೆಂಬರ್ | ಎರಡನೇ ಶನಿವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
10 ಸೆಪ್ಟೆಂಬರ್ | ಭಾನುವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
17 ಸೆಪ್ಟೆಂಬರ್ | ಭಾನುವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
18 ಸೆಪ್ಟೆಂಬರ್र | ಸೋಮವಾರ | ವಿನಾಯಕ ಚತುರ್ಥಿ | ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
19 ಸೆಪ್ಟೆಂಬರ್ | ಮಂಗಳವಾರ | ಗಣೇಶ ಚತುರ್ಥಿ | ಅಹಮದಾಬಾದ್, ಬೇಲಾಪುರ, ಭುವನೇಶ್ವರ, ಮುಂಬೈ, ನಾಗ್ಪುರ, ಪಣಜಿಯಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
20 ಸೆಪ್ಟೆಂಬರ್ | ಬುಧವಾರ | ಗಣೇಶ ಚತುರ್ಥಿ, ನುಕುಹಲ್ | ಕೊಚ್ಚಿ ಮತ್ತು ಭುವನೇಶ್ವರ್ನಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
22 ಸೆಪ್ಟೆಂಬರ್ | ಶುಕ್ರವಾರ | ಗಣೇಶ ಚತುರ್ಥಿ | ಕೊಚ್ಚಿ, ಪಣಜಿ, ತಿರುವನಂತಪುರಂನಲ್ಲಿ ಬ್ಯಾಂಕ್ ಕಾರ್ಯ ನಿರ್ವಹೆ ಇಲ್ಲ |
23 ಸೆಪ್ಟೆಂಬರ್ | ನಾಲ್ಕನೇ ಶನಿವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
24 ಸೆಪ್ಟೆಂಬರ್ | ಭಾನುವಾರ | ಸಾಪ್ತಾಹಿಕ ರಜೆ | ಎಲ್ಲಾ ರಾಜ್ಯಗಳಿಗೆ |
25 ಸೆಪ್ಟೆಂಬರ್ | ಸೋಮವಾರ | ಶ್ರೀಮಂತ ಶಂಕರ ದೇವ್ ಜಯಂತಿ | ಗುವಾಹಟಿಯಲ್ಲಿ ಬ್ಯಾಂಕ್ ರಜೆ |
27 ಸೆಪ್ಟೆಂಬರ್ | ಬುಧವಾರ | ಮಿಲಾದ್- ಇ-ಶರೀಫ್ | ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂ |
28 ಸೆಪ್ಟೆಂಬರ್ | ಗುರುವಾರ | ಈದ್-ಎ-ಮಿಲಾದ್-ಉನ್-ನಬಿ | ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಡೆಹ್ರಾಡೂನ್, ತೆಲಂಗಾಣ, ಇಂಫಾಲ್, ಕಾನ್ಪುರ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್ ಮತ್ತು ರಾಂಚಿಯಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
29 ಸೆಪ್ಟೆಂಬರ್ | ಶುಕ್ರವಾರ | ಈದ್-ಎ-ಮಿಲಾದ್-ಉನ್-ನಬಿ | ಗ್ಯಾಂಗ್ಟಾಕ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಣೆ ಇಲ್ಲ |
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಲ್ಲಿ ಏನೆಲ್ಲಾ ಬದಲಾವಣೆ? ಯಾವ ರೂಲ್ಸ್ ಚೇಂಜ್.. ಹೀಗಿದೆ ಡೀಟೇಲ್ಸ್