ಹೈದರಾಬಾದ್: ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ಅರಿವು ಈಗ ಹೆಚ್ಚಾಗಿದೆ. ಇತ್ತೀಚಿಗೆ, ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಆರ್ಜಿಐಸಿಎಲ್) ಹೊಸ ಆರೋಗ್ಯ ವಿಮಾ ಪಾಲಿಸಿಯನ್ನು ಪರಿಚಯಿಸಿದೆ. ಈ ವಿಮೆ ಪಡೆದ ಗ್ರಾಹಕರು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ. ಜಾಗತಿಕ ಮಾನ್ಯತೆ ಇರುವ ಈ ವಿಮೆಗೆ 'ರಿಲಯನ್ಸ್ ಹೆಲ್ತ್ ಇನ್ಫಿನಿಟಿ ಪಾಲಿಸಿ' ಎಂದು ಹೆಸರಿಸಲಾಗಿದೆ.
ವಿಮೆ ಕನಿಷ್ಠ 5 ಲಕ್ಷ ರೂಪಾಯಿಗಳಿಂದ ಗರಿಷ್ಠ 5 ಕೋಟಿ ರೂಪಾಯಿಗಳವರೆಗೆ ಇದೆ. 1.5 ಕೋಟಿಯ ಹೆಚ್ಚುವರಿಯಾಗಿಯೂ ಪಾಲಿಸಿಗಳನ್ನು ಪಡೆಯಬಹುದು. ಇದರಿಂದ ಹೆರಿಗೆ ವೆಚ್ಚ, ಹೊರರೋಗಿ ಚಿಕಿತ್ಸೆ, ಯಾವುದೇ ಮಿತಿಯಿಲ್ಲದೇ ಕೊಠಡಿ ಬಾಡಿಗೆ ಪಾವತಿ, ಏರ್ ಆಂಬ್ಯುಲೆನ್ಸ್ ಸೇರಿದಂತೆ ಮುಂತಾದ ಪ್ರಯೋಜನಗಳನ್ನು ಈ ವಿಮೆ ಒದಗಿಸುತ್ತದೆ.
ರಿಲಯನ್ಸ್ ಹೆಲ್ತ್ ಇನ್ಫಿನಿಟಿ ಪಾಲಿಸಿಯು ಕುಟುಂಬದ 8 ಸದಸ್ಯರು ಒಂದೇ ವಿಮೆಯಲ್ಲಿ ಸೇರಿಸಿಕೊಳ್ಳಬಹುದು. 18 ರಿಂದ 65 ವರ್ಷ ವಯಸ್ಸಿನವರು ಒಂದರಿಂದ ಮೂರು ವರ್ಷಗಳ ಅವಧಿಗೆ ಇದನ್ನು ತೆಗೆದುಕೊಳ್ಳಬಹುದು. 91 ದಿನದ ಅಂದರೆ ಮೂರು ತಿಂಗಳ ಮಗು ಕೂಡ ಪಾಲಿಸಿ ಪ್ರಯೋಜನ ಪಡೆಯಲು ಅರ್ಹವಾಗಿರುತ್ತದೆ. 55 ವರ್ಷ ಮೇಲ್ಪಟ್ಟವರಿಗೆ ವೈದ್ಯಕೀಯ ಪೂರ್ವ ತಪಾಸಣೆಯ ನಂತರವೇ ಪಾಲಿಸಿ ನೀಡಲಾಗುತ್ತದೆ. 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್, ಬಿಎಂಐ ಮತ್ತು ಮಹಿಳಾ ಪಾಲಿಸಿದಾರರಿಗೆ ಪ್ರೀಮಿಯಂನಲ್ಲಿ ರಿಯಾಯಿತಿ ಕೂಡ ಲಭ್ಯವಿದೆ.
ಆರ್ಥಿಕ ಭದ್ರತೆಗೆ ಹೂಡಿಕೆ: ಆರೋಗ್ಯ ವಿಮೆಯ ಜೊತೆಗೆ ಜನರು ಆರ್ಥಿಕವಾಗಿ ಸಬಲರಾಗಿರಲು ಅಪಾಯಮುಕ್ತ ಹೂಡಿಕೆಗಳನ್ನು ಜನರು ಹುಡುಕುತ್ತಾರೆ. ಇದಕ್ಕಾಗಿ ತಜ್ಞರು ಸರ್ಕಾರಿ ಭದ್ರತೆಗಳನ್ನು ಅತ್ಯುತ್ತಮ ಆಯ್ಕೆಗಳಾಗಿ ಸೂಚಿಸುತ್ತಾರೆ. ಕ್ವಾಂಟ್ ಮ್ಯೂಚುವಲ್ ಫಂಡ್ ಹೊಸ ಹೂಡಿಕಾ ಯೋಜನೆಯನ್ನು ಪ್ರಾರಂಭಿಸಿದೆ. ಹೊಸ ನಿಧಿಯ ಹೂಡಿಕೆ(NFO) ಎಂದು ಆರಂಭಿಸಿದ್ದು, ಡಿಸೆಂಬರ್ 19 ಇದರ ಅಂತಿಮ ದಿನವಾಗಿತ್ತು. ಇದರಲ್ಲಿ ಕನಿಷ್ಠ 5 ಸಾವಿರ ರೂಪಾಯಿಯಿಂದ ಹೂಡಿಕೆ ಆರಂಭವಾಗಲಿದೆ. ಇದು ಸರ್ಕಾರಿ ಭದ್ರತೆಯ ಹೂಡಿಯಾಗಿದೆ.
ಎಸ್‌ಬಿಐ ಮ್ಯೂಚುಯಲ್ ಫಂಡ್ 'ಡೆಟ್ ಸ್ಕೀಮ್' ಅಡಿ ಹೊಸ ಮ್ಯೂಚುವಲ್ ಫಂಡ್ ಯೋಜನೆಯನ್ನು ಪ್ರಾರಂಭಿಸಿದೆ. 'ದೀರ್ಘಾವಧಿ' ಎಂಬ ಈ ಯೋಜನೆಯು ಡಿಸೆಂಬರ್ 20ಕ್ಕೆ ಕೊನೆಗೊಂಡಿತು. ಇದರಲ್ಲಿನ ಹೂಡಿಕೆ ಕನಿಷ್ಠ 5 ಸಾವಿರವಾಗಿದೆ.
ಈ ಯೋಜನೆಯ ಹೂಡಿಕೆಗಳು ಏಳು ವರ್ಷಗಳಿಗಿಂತ ಹೆಚ್ಚಿನ ಅವಧಿಯಯಾಗಿದ್ದು, ಬಾಂಡ್‌ಗಳಾಗಿ ಹಂಚಲಾಗುತ್ತದೆ. ಇದು ಭಾರತೀಯ ಕಂಪನಿಗಳು ನೀಡುವ ಅಮೆರಿಕನ್ ಡಿಪಾಸಿಟರಿ ರಿಸಿಪ್ಟ್ ಮತ್ತು ಜಾಗತಿಕ ಠೇವಣಿ ರಿಸಿಪ್ಟ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಇದು ಹೂಡಿಕೆದಾರರಿಗೆ ಕಡಿಮೆ ರಿಸ್ಕ್ ಮತ್ತು ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಬಡ್ಡಿದರಗಳು ಏರಿದಾಗ ಬಾಂಡ್‌ಗಳ ಮೇಲಿನ ಮೊತ್ತ ಕಡಿಮೆಯಾಗುತ್ತವೆ. ಒಂದು ವೇಳೆ ಬಡ್ಡಿದರ ಕುಸಿದರೆ, ಬಾಂಡ್ ರೇಟ್ ಹೆಚ್ಚುತ್ತದೆ. ದೀರ್ಘಾವಧಿಯಲ್ಲಿ ಬಡ್ಡಿದರಗಳು ಕಡಿಮೆಯಾದಲ್ಲಿ ಈ ಯೋಜನೆಯು ಉತ್ತಮ ಆದಾಯವನ್ನು ತರುತ್ತದೆ.
ಓದಿ: ಕೇರಳದಲ್ಲಿ ಮದ್ಯ ಮಾರಾಟ ಜೋರು..250 ಕೋಟಿ ಮೌಲ್ಯದ ಲಿಕ್ಕರ್ ಬಿಕರಿ