ETV Bharat / business

ರಷ್ಯಾದಿಂದ ಭಾರತಕ್ಕೆ ದಾಖಲೆ ಪ್ರಮಾಣದ ಕಚ್ಚಾತೈಲ ಪೂರೈಕೆ: ಇರಾಕ್​ಗಿಂತ ದುಪ್ಪಟ್ಟು!

ಭಾರತವು ರಷ್ಯಾದಿಂದ ದಾಖಲೆ ಪ್ರಮಾಣದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇಷ್ಟು ದಿನ ಭಾರತಕ್ಕೆ ಅತಿ ಹೆಚ್ಚು ಕಚ್ಚಾತೈಲ ಪೂರೈಸುತ್ತಿದ್ದ ಇರಾಕ್​ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ರಷ್ಯಾ ಪ್ರತಿದಿನ ಭಾರತಕ್ಕೆ ಕಚ್ಚಾತೈಲ ನೀಡುತ್ತಿದೆ.

India's Russian Oil Imports Now Double Of Iraq

author img

By

Published : Apr 9, 2023, 4:56 PM IST

ನವ ದೆಹಲಿ: ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದುಗಳು ಮಾರ್ಚ್‌ನಲ್ಲಿ ದಿನಕ್ಕೆ 1.64 ಮಿಲಿಯನ್ ಬ್ಯಾರೆಲ್‌ಗಳ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಇದು ಇಲ್ಲಿಯವರೆಗೆ ಭಾರತಕ್ಕೆ ಸಾಂಪ್ರದಾಯಿಕವಾಗಿ ಅತ್ಯಧಿಕ ಕಚ್ಚಾತೈಲ ಪೂರೈಸುತ್ತ ಬಂದಿರುವ ಇರಾಕ್​ನಿಂದಾಗುತ್ತಿದ್ದ ಆಮದಿನ ದುಪ್ಪಟ್ಟಾಗಿದೆ. ಆದರೆ ಒಟ್ಟಾರೆ ಖರೀದಿಯಲ್ಲಿ ಇಳಿಕೆ ಕಂಡುಬಂದಿದೆ. ಎನರ್ಜಿ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ಪ್ರಕಾರ, ಭಾರತ ಆಮದು ಮಾಡಿಕೊಳ್ಳುವ ಮೂರನೇ ಒಂದು ಭಾಗದಷ್ಟು ತೈಲವನ್ನು ಪೂರೈಸುವ ಮೂಲಕ ಸತತ ಆರನೇ ತಿಂಗಳಿಗೆ ರಷ್ಯಾ ಕಚ್ಚಾ ತೈಲದ ಏಕೈಕ ಅತಿದೊಡ್ಡ ಪೂರೈಕೆದಾರನಾಗಿ ಮುಂದುವರೆದಿದೆ. ರಷ್ಯಾ ಪ್ರಮುಖವಾಗಿ ತೈಲ ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತನೆಯಾಗುವ ಕಚ್ಚಾ ತೈಲವನ್ನು ಭಾರತಕ್ಕೆ ನೀಡುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತಿರುವ ರಷ್ಯಾ ತೈಲವನ್ನು ಭಾರತದ ರಿಫೈನರಿಗಳು ಹೇರಳವಾಗಿ ಸಂಗ್ರಹ ಮಾಡುತ್ತಿವೆ.

ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾಗುವ ಮೊದಲು ಭಾರತದ ಆಮದಿನಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮಾರುಕಟ್ಟೆ ಪಾಲನ್ನು ಹೊಂದಿದ್ದ ರಷ್ಯಾದ ಪಾಲು ಈಗ ದಿನಕ್ಕೆ 1.64 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗಿದೆ. ಇದು ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 34 ರಷ್ಟಾಗಿದೆ. 2017-18 ರಿಂದ ಇಲ್ಲಿಯವರೆಗೆ ಇರಾಕ್​ ಬಾರತಕ್ಕೆ ಪ್ರಮುಖ ತೈಲ ಪೂರೈಕೆದಾರನಾಗಿತ್ತು. ಇರಾಕ್​ನಿಂದ ಬಂದ 0.82 ಮಿಲಿಯನ್​ ಬ್ಯಾರೆಲ್​ ತೈಲಕ್ಕೆ ಹೋಲಿಸಿದರೆ ರಷ್ಯಾ ತೈಲ ಆಮದುಗಳು ದುಪ್ಪಟ್ಟಾಗಿವೆ.

ಭಾರತವು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ನಂತರ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದು ರಾಷ್ಟ್ರವಾಗಿದೆ. ಉಕ್ರೇನ್ ಮೇಲೆ ಯುದ್ಧ ಸಾರಿದ ಕಾರಣಕ್ಕೆ ಮಾಸ್ಕೋವನ್ನು ಶಿಕ್ಷಿಸುವ ಗುರಿಯಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುತ್ತಿಲ್ಲ. ಆದರೆ ಇದನ್ನೇ ಅವಕಾಶವಾಗಿ ಬಳಸಿಕೊಂಡ ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ಹೇರಳವಾಗಿ ಕಚ್ಚಾತೈಲ ತರಿಸಿಕೊಳ್ಳುತ್ತಿದೆ. ತಿಂಗಳಿನಿಂದ ತಿಂಗಳಿಗೆ ನೋಡಿದರೆ, ಫೆಬ್ರವರಿಯಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳಲಾದ 1.62 ಮಿಲಿಯನ್ ಬಿಪಿಡಿ ತೈಲಕ್ಕೆ ಹೋಲಿಸಿದರೆ ಇದರ ಪ್ರಮಾಣ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.

ವೋರ್ಟೆಕ್ಸಾ ಪ್ರಕಾರ, ಸೌದಿ ಅರೇಬಿಯಾ ಮಾರ್ಚ್‌ನಲ್ಲಿ 9,86,288 ಬಿಪಿಡಿ (ಬ್ಯಾರೆಲ್ ಪರ್ ಡೇ) ತೈಲ ಮಾರಾಟ ಮಾಡುವ ಮೂಲಕ ಭಾರತದ ಎರಡನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿದೆ. 8,21,952 ಬಿಪಿಡಿ ಮಾರಾಟದೊಂದಿಗೆ ಇರಾಕ್ ಮೂರನೇ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. 3,13,002 ಬಿಪಿಡಿ ತೈಲ ಪೂರೈಸುವ ಮೂಲಕ ಯುಎಇ ಅಮೆರಿಕವನ್ನು ಹಿಂದಿಕ್ಕಿದೆ. ಅಮೆರಿಕ 1,36,464 ಬಿಪಿಡಿ ತೈಲವನ್ನು ಭಾರತಕ್ಕೆ ನೀಡಿದೆ. ಫೆಬ್ರವರಿಯಲ್ಲಿ ಇದ್ದ 2,48,430 ಬಿಪಿಡಿಗೆ ಹೋಲಿಸಿದರೆ ಅಮೆರಿಕದ ಪೂರೈಕೆ ಕಡಿಮೆಯಾಗಿದೆ. ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ರಷ್ಯಾದ ಕಚ್ಚಾ ತೈಲಕ್ಕೆ ನಿರ್ಬಂಧ ಹೇರಿದ ನಂತರ ತನ್ನ ಇಂಧನ ರಫ್ತಿನಲ್ಲಿನ ವ್ಯತ್ಯಾಸವನ್ನು ಸರಿಪಡಿಸಲು ರಷ್ಯಾ ಭಾರತಕ್ಕೆ ದಾಖಲೆ ಪ್ರಮಾಣದ ಕಚ್ಚಾ ತೈಲವನ್ನು ಮಾರಾಟ ಮಾಡುತ್ತಿದೆ.

ಇದನ್ನೂ ಓದಿ : ಮಂಗಳೂರು: ಕಚ್ಚಾ ತೈಲ ಸಂಸ್ಕರಿಸುವ MRPL​ಗೆ 2,955 ಕೋಟಿ ರೂ. ಲಾಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.