ETV Bharat / business

RBI: ಸಾಲದ ದಂಡ ಶುಲ್ಕಕ್ಕೆ ಬಡ್ಡಿ ವಿಧಿಸುವಂತಿಲ್ಲ; ಆರ್​ಬಿಐ ಹೊಸ ಮಾರ್ಗಸೂಚಿ ಜ.1 ರಿಂದ ಜಾರಿ - ದಂಡ ಶುಲ್ಕ ವಿಧಿಸುವ ಕುರಿತಂತೆ ಸಮಗ್ರ ಮಾರ್ಗಸೂಚಿ

RBI has issued comprehensive guidelines: ಸಾಲಗಾರರಿಗೆ ವಿಧಿಸುವ ದಂಡಶುಲ್ಕಗಳ ಬಗ್ಗೆ ಆರ್​ಬಿಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಆರ್​ಬಿಐ ಹೊಸ ನಿಯಮಗಳನ್ನು ರೂಪಿಸಿದೆ.

RBI issues new guidelines for fair lending practices

author img

By

Published : Aug 18, 2023, 1:31 PM IST

ನವದೆಹಲಿ: ಹಣಕಾಸು ಸಂಸ್ಥೆಗಳು ಸಾಲ ನೀಡುವ ಪ್ರಕ್ರಿಯೆಗಳಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉತ್ತೇಜಿಸುವ ಪ್ರಯತ್ನವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಸಾಲ ಖಾತೆಗಳಿಗೆ ದಂಡ ಶುಲ್ಕ ವಿಧಿಸುವ ಕುರಿತಂತೆ ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿಗಳು ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಪ್ರಾಥಮಿಕ ನಗರ ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್​​ಬಿಎಫ್​ಸಿ) ಮತ್ತು ಅಖಿಲ ಭಾರತ ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತವೆ.

ಸಾಲಗಾರರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ದಂಡ ಶುಲ್ಕಗಳನ್ನು ವಿಧಿಸುವಾಗ ವಿಭಿನ್ನ ಮಾನದಂಡಗಳನ್ನು ಅನುಸರಿಸುವುದರಿಂದ ಉದ್ಭವಿಸುತ್ತಿರುವ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರ್​ಬಿಐ ಈ ಕ್ರಮ ಕೈಗೊಂಡಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ ಹಣಕಾಸು ಸಂಸ್ಥೆಗಳು ಹೊಸ ನಿಯಮಗಳಿಗೆ ಬದ್ಧವಾಗಿರುವುದು ಕಡ್ಡಾಯವಾಗಿದೆ. ಸಾಲ ಒಪ್ಪಂದದ ಭೌತಿಕ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸದಿದ್ದಕ್ಕಾಗಿ ವಿಧಿಸುವ ಯಾವುದೇ ದಂಡವನ್ನು 'ದಂಡದ ಬಡ್ಡಿ' (penal interest) ಎಂದು ಕರೆಯುವ ಬದಲು 'ದಂಡದ ಶುಲ್ಕಗಳು' (penal charges) ಎಂದು ಪರಿಗಣಿಸಲಾಗುವುದು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಇದರರ್ಥ ದಂಡ ಶುಲ್ಕಗಳನ್ನು ಬಡ್ಡಿಯ ಲೆಕ್ಕಕ್ಕೆ ಸೇರಿಸಬಾರದು ಮತ್ತು ಅಂಥ ಶುಲ್ಕಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಲೆಕ್ಕಹಾಕಬಾರದು.

ದಂಡದ ಶುಲ್ಕಗಳ ಪ್ರಮಾಣವು ಸಮಂಜಸವಾಗಿರಬೇಕು ಮತ್ತು ಅನುಸರಣೆಯ ಮಟ್ಟಕ್ಕೆ ಅನುಗುಣವಾಗಿರಬೇಕು. ಈ ಶುಲ್ಕಗಳ ಬಗ್ಗೆ ಸಾಲ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳಲ್ಲಿ ಮತ್ತು ಕೀ ಫ್ಯಾಕ್ಟ್ ಸ್ಟೇಟ್​​ಮೆಂಟ್​​ನಲ್ಲಿ (Key Fact Statement -KFS) ನಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಅವುಗಳನ್ನು ಹಣಕಾಸು ಸಂಸ್ಥೆಯ ವೆಬ್​ಸೈಟ್​ನ ಬಡ್ಡಿದರಗಳು ಮತ್ತು ಸೇವಾ ಶುಲ್ಕಗಳ ವಿಭಾಗದ ಅಡಿಯಲ್ಲಿ ಪ್ರಮುಖವಾಗಿ ಕಾಣುವಂತೆ ಪ್ರದರ್ಶಿಸಬೇಕು.

ಹಣಕಾಸು ಸಂಸ್ಥೆಗಳು ದಂಡದ ಶುಲ್ಕ ಅಥವಾ ಸಾಲಗಳ ಮೇಲಿನ ಇದೇ ರೀತಿಯ ಶುಲ್ಕಗಳ ಬಗ್ಗೆ ಮಂಡಳಿ ಅನುಮೋದಿತ ನೀತಿಯೊಂದನ್ನು ರೂಪಿಸಬೇಕು. ಈ ನೀತಿಯು ಶುಲ್ಕಗಳ ತಾರ್ಕಿಕತೆ, ಅವುಗಳ ಪ್ರಮಾಣವನ್ನು ನಿರ್ಧರಿಸುವ ಮಾನದಂಡಗಳು ಮತ್ತು ವಿವಿಧ ಸಾಲ / ಉತ್ಪನ್ನ ವಿಭಾಗಗಳಲ್ಲಿ ಅವುಗಳ ಅನ್ವಯವನ್ನು ವಿವರಿಸಬೇಕು.

ವೈಯಕ್ತಿಕ ಸಾಲಗಾರರಿಗೆ (ವ್ಯವಹಾರವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ) ಮಂಜೂರಾದ ಸಾಲದ ದಂಡ ಶುಲ್ಕಗಳು ವೈಯಕ್ತಿಕವಲ್ಲದ ಸಾಲಗಾರರಿಗೆ ಅನ್ವಯವಾಗುವ ಶುಲ್ಕಗಳಿಗಿಂತ ಹೆಚ್ಚಾಗಬಾರದು ಎಂದು ಕಡ್ಡಾಯಗೊಳಿಸುವ ಮೂಲಕ ಮಾರ್ಗಸೂಚಿಗಳು ನ್ಯಾಯಸಮ್ಮತತೆಯನ್ನು ಖಚಿತಪಡಿಸುತ್ತವೆ. ಭೌತಿಕ ನಿಯಮಗಳು ಮತ್ತು ಷರತ್ತುಗಳ ಪಾಲನೆಗಾಗಿ ಗ್ರಾಹಕರಿಗೆ ಜ್ಞಾಪನೆಗಳನ್ನು ಕಳುಹಿಸಿದಾಗಲೆಲ್ಲಾ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಅನ್ವಯವಾಗುವ ದಂಡ ಶುಲ್ಕಗಳನ್ನು ಸ್ಪಷ್ಟವಾಗಿ ತಿಳಿಸಬೇಕು.

ಹೆಚ್ಚುವರಿಯಾಗಿ, ದಂಡ ಶುಲ್ಕಗಳನ್ನು ವಿಧಿಸುವ ಯಾವುದೇ ಸಂದರ್ಭ ಮತ್ತು ಅವುಗಳನ್ನು ವಿಧಿಸಲು ಕಾರಣಗಳನ್ನು ಸಹ ತಿಳಿಸಬೇಕು. ಹೊಸ ಮಾರ್ಗಸೂಚಿಗಳು ಜನವರಿ 1, 2024 ರಿಂದ ಜಾರಿಗೆ ಬರಲಿವೆ. ಹಣಕಾಸು ಸಂಸ್ಥೆಗಳು ಅದಕ್ಕೆ ಅನುಗುಣವಾಗಿ ತಮ್ಮ ನೀತಿ ಚೌಕಟ್ಟುಗಳನ್ನು ಪರಿಷ್ಕರಿಸುವ ನಿರೀಕ್ಷೆಯಿದೆ ಮತ್ತು ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಪಡೆದ ಅಥವಾ ನವೀಕರಿಸಿದ ಎಲ್ಲ ಹೊಸ ಸಾಲಗಳಿಗೆ ಹೊಸ ಮಾರ್ಗಸೂಚಿಗಳ ಅಳವಡಿಕೆಯನ್ನು ಹಣಕಾಸು ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಸಾಲಗಳಿಗೆ ಮುಂದಿನ ಪರಿಶೀಲನೆ ಅಥವಾ ನವೀಕರಣ ದಿನಾಂಕದಂದು ಅಥವಾ ಹೊಸ ಮಾರ್ಗಸೂಚಿಗಳು ಜಾರಿಗೆ ಬಂದ ದಿನಾಂಕದಿಂದ ಆರು ತಿಂಗಳೊಳಗೆ ಹೊಸ ನಿಯಮಗಳ ಪ್ರಕಾರ ದಂಡ ಶುಲ್ಕಗಳನ್ನು ಆಕರಿಸಬೇಕಾಗುತ್ತದೆ. ಹಣಕಾಸು ಸಂಸ್ಥೆಗಳ ವಹಿವಾಟುಗಳನ್ನು ಗ್ರಾಹಕ-ಕೇಂದ್ರಿತ ತತ್ವಗಳಡಿ ನಡೆಯುವಂತೆ ಮಾಡುವುದು, ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ದಂಡದ ಶುಲ್ಕಗಳು ಆದಾಯ ವರ್ಧನೆ ಸಾಧನವಾಗುವ ಬದಲು ಸಾಲ ಶಿಸ್ತು ಬೆಳೆಸುವುದನ್ನು ಖಚಿತಪಡಿಸಿಕೊಳ್ಳುವುದು ಆರ್​ಬಿಐನ ಹೊಸ ಮಾರ್ಗಸೂಚಿಗಳ ಉದ್ದೇಶವಾಗಿದೆ.

ಇದನ್ನೂ ಓದಿ: Stock Market: ಹಿಂದಿನ ಸ್ವಾತಂತ್ರ್ಯೋತ್ಸವ ಸಂದರ್ಭಕ್ಕೆ ಹೋಲಿಸಿದರೆ ಸೆನ್ಸೆಕ್ಸ್-ನಿಫ್ಟಿ ಶೇ 10ರಷ್ಟು ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.