ನವದೆಹಲಿ: ವಿತ್ತೀಯ ನೀತಿ ಸಮಿತಿಯು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಈಗಿರುವ ಶೇ 6.5ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು. ದ್ವೈಮಾಸಿಕ ಹಣಕಾಸು ನೀತಿ ಬಗ್ಗೆ ಮಾಹಿತಿ ನೀಡಿದ ಅವರು, ದೇಶದ ಆರ್ಥಿಕತೆಯು ಉತ್ತಮ ವೇಗದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ನಮ್ಮದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕ ಬೆಳವಣಿಗೆಗೆ ಸುಮಾರು 15% ಕೊಡುಗೆ ನೀಡಿದೆ ಎಂದು ದಾಸ್ ತಿಳಿಸಿದರು.
-
#WATCH | RBI Governor Shaktikanta Das says "Monetary Policy Committee decided unanimously to keep the Repo Rate unchanged at 6.50%" pic.twitter.com/138ppkCarB
— ANI (@ANI) August 10, 2023 " class="align-text-top noRightClick twitterSection" data="
">#WATCH | RBI Governor Shaktikanta Das says "Monetary Policy Committee decided unanimously to keep the Repo Rate unchanged at 6.50%" pic.twitter.com/138ppkCarB
— ANI (@ANI) August 10, 2023#WATCH | RBI Governor Shaktikanta Das says "Monetary Policy Committee decided unanimously to keep the Repo Rate unchanged at 6.50%" pic.twitter.com/138ppkCarB
— ANI (@ANI) August 10, 2023
ಗ್ರಾಹಕರ ಮೇಲೆ ಇಲ್ಲ ಹೆಚ್ಚುವರಿ ಬಡ್ಡಿಯ ಹೊರೆ: ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಗ್ರಾಹಕರ ಮೇಲೆ EMI ಯ ಹೆಚ್ಚುವರಿ ಹೊರೆ ಇರುವುದಿಲ್ಲ. ಈ ವರ್ಷದ ಫೆಬ್ರವರಿಯಿಂದ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯಲ್ಲಿ ರೆಪೋ ದರವನ್ನು ಹೆಚ್ಚಿಸಿಲ್ಲ. ಕಳೆದ ವರ್ಷ, ಮೇ 2022 ರಿಂದ, ರೆಪೋ ದರವನ್ನು ಸತತವಾಗಿ ಒಂಬತ್ತು ಬಾರಿ ಹೆಚ್ಚಳ ಮಾಡಲಾಗಿತ್ತು.
’’ನಮ್ಮ ಆರ್ಥಿಕತೆಯು ಸಮಂಜಸವಾದ ವೇಗದಲ್ಲಿ ಬೆಳೆಯುತ್ತಿದೆ ಮತ್ತು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಜಾಗತಿಕ ಬೆಳವಣಿಗೆಗೆ ಸುಮಾರು ಶೇ 15ರಷ್ಟು ಕೊಡುಗೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷ 2023-24ನೇ ಸಾಲಿನ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.4 ಕ್ಕೆ ಹೆಚ್ಚಿಸಲಾಗಿದೆ‘‘ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಮಂಗಳವಾರ ಆರಂಭವಾದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತು ಮಾಹಿತಿ ನೀಡಿದ ಶಕ್ತಿಕಾಂತ ದಾಸ್, ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಯ ಹೊರತಾಗಿಯೂ ಭಾರತದ ಆರ್ಥಿಕತೆಯು ಬಲಿಷ್ಠವಾಗಿದೆ ಎಂದು ಘೋಷಿಸಿದರು. ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಣದುಬ್ಬರ ಪಥದ ಮೇಲೆ ನಾವು ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿರುವುದು ಅಗತ್ಯವಾಗಿದೆ. ದೇಶೀಯ ಆರ್ಥಿಕ ಚಟುವಟಿಕೆಯು ಉತ್ತಮ ಹಾದಿಯಲ್ಲಿ ಸಾಗುತ್ತಿದ್ದು, ಆವೇಗವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಶಕ್ತಿಕಾಂತ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
RBI ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ದರವನ್ನು ಶೇ 6.5ನಲ್ಲೇ ಮುಂದುವರಿಸಿದೆ. ಇನ್ನು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿಜವಾದ GDP ಬೆಳವಣಿಗೆಯನ್ನು ಶೇ. 6.6ರಷ್ಟು ಆಗಲಿದೆ ಎಂದು ಅಂದಾಜು ಮಾಡಿದೆ. ವಿತ್ತೀಯ ನೀತಿ ಬಿಗಿಗೊಳಿಸುವಿಕೆಯ ವೇಗವು ನಿಧಾನವಾಗಿದ್ದರೂ, ಆರ್ಬಿಐನ ನೀತಿ ದರಗಳು ದೀರ್ಘ ಕಾಲದವರೆಗೆ ಹೆಚ್ಚಾಗಬಹುದು ಎಂಬ ಮುನ್ಸೂಚನೆಯನ್ನೂ ಆರ್ಬಿಐ ಗವರ್ನರ್ ನೀಡಿದ್ದಾರೆ.
ಇದನ್ನೂ ಓದಿ: ಅವಿಶ್ವಾಸ ನಿಲುವಳಿ: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ, ಮಣಿಪುರ ವಿಚಾರವಾಗಿ ವಿಪಕ್ಷಗಳ 'ಸಂಘರ್ಷ'