ETV Bharat / business

RBI ಎಂಪಿಸಿ ಸಭೆ ಆರಂಭ: ಫೆ.8 ರಂದು ಹೊಸ ರೆಪೋ ದರ ಘೋಷಣೆ ಸಾಧ್ಯತೆ - ಫೆಬ್ರವರಿ 8 ರಂದು ರೆಪೋ ದರ

ಚಿಲ್ಲರೆ ಹಣದುಬ್ಬರ ಇಳಿಮುಖವಾಗಿರುವುದರಿಂದ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ಹಣಕಾಸು ನೀತಿ ಸಮಿತಿ (MPC)ಯು ನೀತಿ ದರಗಳನ್ನು ಹೆಚ್ಚಿಸುವುದೇ ಅಥವಾ ಇದ್ದಂತೆಯೇ ಕಾಯ್ದುಕೊಳ್ಳಲಿದೆಯಾ ಎಂಬುದು ಫೆಬ್ರವರಿ 8 ರಂದು ಗೊತ್ತಾಗಲಿದೆ.

Will RBI hike policy rates, or pause
Will RBI hike policy rates, or pause
author img

By

Published : Feb 6, 2023, 2:29 PM IST

ಚೆನ್ನೈ(ತಮಿಳುನಾಡು): ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆ ಫೆಬ್ರವರಿ 8 ರಂದು ರೆಪೋ ದರವನ್ನು ಪ್ರಕಟಿಸಲಿದೆ. ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ನೀತಿ ದರ ಏರಿಕೆಗೆ ವಿರಾಮ ನೀಡಲಿದೆಯಾ ಅಥವಾ ಅದನ್ನು 25 ಮೂಲ ಅಂಕಗಳಿಂದ ಶೇಕಡಾ 6.50 ಕ್ಕೆ ಹೆಚ್ಚಿಸಲಿದೆಯಾ ಎಂಬುದು ಫೆಬ್ರವರಿ 8 ರಂದು ತಿಳಿಯಲಿದೆ.

ಡೇಟಾ ಕಡೆಗೆ ಗಮನಹರಿಸದೇ ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಒಂದು ವರ್ಷದ ಕನಿಷ್ಠ 5.72 ಪ್ರತಿಶತದಷ್ಟಿತ್ತು. ಮುಖ್ಯವಾಗಿ ಆಹಾರದ ಬೆಲೆಗಳಲ್ಲಿನ ಇಳಿಕೆ, ಅದರಲ್ಲೂ ವಿಶೇಷವಾಗಿ ಹಣ್ಣು ಮತ್ತು ತರಕಾರಿಗಳ ಬೆಲೆ ಇಳಿಕೆಯಿಂದ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಹಣದುಬ್ಬರ ದರವು ಆರ್‌ಬಿಐನ ಸಹಿಷ್ಣುತೆಯ ಮಟ್ಟವಾದ 2 ರಿಂದ 6 ಪ್ರತಿಶತದೊಳಗೆ ಉಳಿಯುವುದು ಇದು ಸತತ ಎರಡನೇ ತಿಂಗಳು. ಆದಾಗ್ಯೂ ಮುಖ್ಯ ಹಣದುಬ್ಬರ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಇರುವುದರಿಂದ ಅರ್ಥಶಾಸ್ತ್ರಜ್ಞರು ಚಿಂತಿತರಾಗಿದ್ದಾರೆ.

ಅಂಕಿ - ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಗುರುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 2022 ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು 5.88 ಶೇಕಡಾ ಆಗಿದ್ದು, ಅಕ್ಟೋಬರ್ 2022 ರಲ್ಲಿ ಇದು ಶೇಕಡಾ 6.77 ರ ಮೇಲಿನ ಮಟ್ಟದಲ್ಲಿತ್ತು. ಅಧಿಕೃತ ಮಾಹಿತಿ ಪ್ರಕಾರ ಆಹಾರ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಶೇಕಡಾ 4.19 ರಷ್ಟಿತ್ತು. ಇದು ನವೆಂಬರ್ 2022 ರಲ್ಲಿದ್ದ ಶೇಕಡಾ 4.67 ರ ಮಟ್ಟಕ್ಕಿಂತ ಕಡಿಮೆಯಾಗಿದೆ. ಹಣ್ಣುಗಳು ಮತ್ತು ತರಕಾರಿಗಳ ಹೊರತಾಗಿ, ತೈಲಗಳು ಮತ್ತು ಕೊಬ್ಬುಗಳು ಮತ್ತು ಮಾಂಸ ಮತ್ತು ಮೀನಿನ ಬೆಲೆಗಳು ನವೆಂಬರ್ 2022 ಕ್ಕೆ ಹೋಲಿಸಿದರೆ ಡಿಸೆಂಬರ್ 2022 ರಲ್ಲಿ ಇಳಿಮುಖವಾಗಿದೆ.

ಕಳೆದ ಮೂರು ತಿಂಗಳಲ್ಲಿ ಹಣದುಬ್ಬರವು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಜ್ಞರು ಏನು ಹೇಳುತ್ತಾರೆ. ಕ್ವಾಂಟಮ್ ಎಎಂಸಿಯ ಫಿಕ್ಸೆಡ್ ಇನಕಮ್ ಫಂಡ್ ಮ್ಯಾನೇಜರ್ ಪಂಕಜ್ ಪಾಠಕ್ ಹೇಳುವ ಪ್ರಕಾರ - ಅಮೆರಿಕದಲ್ಲಿನ ದರಗಳು ಸ್ವಲ್ಪಮಟ್ಟಿಗೆ ಏರುವುದರೊಂದಿಗೆ ಬಾಹ್ಯ ಪರಿಸ್ಥಿತಿಗಳು ಸುಧಾರಿಸಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಆರ್‌ಬಿಐನ ವಿದೇಶಿ ವಿನಿಮಯ ಸಂಗ್ರಹವೂ ಹೆಚ್ಚಾಗಿದೆ. ಫೆಬ್ರವರಿ ಸಭೆಯಲ್ಲಿ ಆರ್‌ಬಿಐ ದರ ಏರಿಕೆಯ ಚಕ್ರವನ್ನು ನಿಲ್ಲಿಸುತ್ತದೆ ಮತ್ತು ರೆಪೋ ದರವನ್ನು ಶೇಕಡಾ 6.25 ನಲ್ಲಿ ಇರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಾಂಡ್ ಮಾರುಕಟ್ಟೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಆಗ ಬಾಂಡ್ ಇಳುವರಿಯು ಕ್ರಮೇಣ ಕೆಳಗಿಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದಾಗ್ಯೂ ಹೆಚ್ಚಿನ ಬಾಂಡ್ ಪೂರೈಕೆ ಇಳುವರಿಗಳಿಗೆ ತೊಂದರೆಯನ್ನು ಮಿತಿಗೊಳಿಸುತ್ತದೆ.

ಹಣದುಬ್ಬರ ಅಂಕಿ - ಅಂಶಗಳ ಕುರಿತು ಮಾತನಾಡಿದ ಕೇರ್ ರೇಟಿಂಗ್ಸ್ ಮುಖ್ಯ ಅರ್ಥಶಾಸ್ತ್ರಜ್ಞ ರಜನಿ ಸಿನ್ಹಾ ಮಾತನಾಡಿ, ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚು ಕಡಿಮೆಯಾಗಿದೆ, ಇದು RBI ಯನ ಮೇಲ್ಮಟ್ಟದ ಸಹಿಷ್ಣುತೆಗಿಂತ ಕಡಿಮೆಯಾಗಿದೆ. ಇಳಿಕೆಯು ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ಕುಸಿತದಿಂದಾಗಿ ಉಂಟಾಗಿದೆ. ಇದು ಧಾನ್ಯಗಳು, ಹಾಲು ಮತ್ತು ಮಾಂಸದಂತಹ ಇತರ ಆಹಾರ ವಸ್ತುಗಳ ಬೆಲೆಗಳ ಏರಿಕೆಯನ್ನು ಸರಿದೂಗಿಸಲು ಸಹಾಯ ಮಾಡಿದೆ. ಆದಾಗ್ಯೂ, ಕೋರ್ ಸಿಪಿಐ ಹಣದುಬ್ಬರವು ಸೇವಾ ವಲಯದಲ್ಲಿ ಹೆಚ್ಚಿನ ಹಣದುಬ್ಬರದೊಂದಿಗೆ ಶೇಕಡಾ 6 ಕ್ಕಿಂತ ಹೆಚ್ಚಾಗಿರುವುದು ಚಿಂತೆಯ ವಿಷಯವಾಗಿದೆ ಎಂದರು.

ಇದನ್ನೂ ಓದಿ: ಜನಪ್ರಿಯ ಬಜೆಟ್​​ಗಾಗಿ ಸಿಎಂ ಬೊಮ್ಮಾಯಿ ಸಿದ್ಧತೆ; ಹಣ ಹೊಂದಿಸಲು ರಾಜಸ್ವಗಳ ಮೇಲೆ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.