ETV Bharat / business

ಆರ್ಥಿಕ ಸ್ಥಿರತೆಗಾಗಿ ವೈಯಕ್ತಿಕ ಸಾಲ ವಿತರಣೆಗೆ ಕಠಿಣ ನಿಯಮ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ - ಕಠಿಣ ನಿಯಮಗಳು ಆರ್ಥಿಕ ಸ್ಥಿರತೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡುತ್ತಾ, ವೈಯಕ್ತಿಕ ಸಾಲಗಳ ವಿತರಣೆಗೆ ಆರ್ಥಿಕ ಸ್ಥಿರತೆಗಾಗಿ ಕಠಿಣ ನಿಯಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

RBI Governor flags  interconnectedness between banks and NBFCs  RBI Governor shaktikanta das  ವೈಯಕ್ತಿಕ ಸಾಲಗಳ ವಿತರಣೆಗೆ ಕಠಿಣ ನಿಯಮ  ಕಠಿಣ ನಿಯಮಗಳು ಆರ್ಥಿಕ ಸ್ಥಿರತೆಗಾಗಿ  ಶಕ್ತಿಕಾಂತ ದಾಸ್  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ  ವೈಯಕ್ತಿಕ ಸಾಲಗಳ ವಿತರಣೆ  ಕಠಿಣ ನಿಯಮಗಳು ಆರ್ಥಿಕ ಸ್ಥಿರತೆ  ಬ್ಯಾಂಕೇತರ ಹಣಕಾಸು ಸಂಸ್ಥೆ
ಶಕ್ತಿಕಾಂತ ದಾಸ್
author img

By ETV Bharat Karnataka Team

Published : Nov 23, 2023, 1:09 PM IST

ನವದೆಹಲಿ: ವೈಯಕ್ತಿಕ ಸಾಲಗಳ ವಿತರಣೆಗೆ ಇತ್ತೀಚಿನ ಕಠಿಣ ನಿಯಮಗಳು ಆರ್ಥಿಕ ಸ್ಥಿರತೆಗಾಗಿ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠವಾಗಿದೆ. ತಕ್ಷಣ ಆತಂಕಪಡುವ ಅಗತ್ಯವಿಲ್ಲ. ಆದರೆ ಬ್ಯಾಂಕ್‌ಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಯಾವುದೇ ಅಪಾಯದ ಪ್ರವೃತ್ತಿಯನ್ನು ಆರಂಭದಲ್ಲೇ ಗುರುತಿಸಬೇಕು ಎಂದು ದಾಸ್ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ತಂದಿರುವ ನಿಯಮಗಳು ಎಷ್ಟು ದಿನ ಇರುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆರ್‌ಬಿಐ ಇತ್ತೀಚೆಗೆ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನೀಡುವ ಅಸುರಕ್ಷಿತ ವೈಯಕ್ತಿಕ ಸಾಲಗಳ ಮೇಲಿನ ಅಪಾಯದ ತೂಕವನ್ನು ಹೆಚ್ಚಿಸಿದೆ. ಅಂತಹ ಸಾಲಗಳಿಗೆ ಹಣಕಾಸು ಸಂಸ್ಥೆಗಳು ಹೆಚ್ಚಿನ ನಿಬಂಧನೆಗಳನ್ನು ಮಾಡಬೇಕು. ಆದ್ದರಿಂದ ವೈಯಕ್ತಿಕ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳು ಜನಪ್ರಿಯವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಮೀಸಲು ಇರಬೇಕು: ವ್ಯವಹಾರ ಕುಸಿತದ ಸಂದರ್ಭದಲ್ಲಿ ಹೆಚ್ಚುವರಿ ನಗದು ಮೀಸಲು ಇರುವುದನ್ನು ಖಚಿತಪಡಿಸಿಕೊಳ್ಳಲು ದಾಸ್ ಬ್ಯಾಂಕ್‌ಗಳಿಗೆ ಸಲಹೆ ನೀಡಿದರು. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಸಮಯದಲ್ಲಿ ನಾವು ನಮ್ಮ ಕಾರ್ಯವಿಧಾನಗಳನ್ನು ಮರುಪರಿಶೀಲಿಸಬೇಕು. ಎಲ್ಲಿ ನಷ್ಟದ ಅಪಾಯವಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಅವರು ತಿಳಿಸಿದರು.

ಬಡ್ಡಿದರಗಳು ಕಡಿಮೆಯಾಗಲಿವೆ ಎಂಬ ನಿರೀಕ್ಷೆಗಳ ನಡುವೆ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಅಮೆರಿಕದಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ತಮ್ಮ ಆಸ್ತಿ ನಿರ್ವಹಣೆಯನ್ನು ಬಲಪಡಿಸಬೇಕು. ಹಣದುಬ್ಬರವನ್ನು ನಿಗ್ರಹಿಸಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ತ್ವರಿತವಾಗಿ ಹೆಚ್ಚಿಸಿದ್ದಕ್ಕಾಗಿ ತಾನು ದೂಷಿಸುವುದಿಲ್ಲ. ಕಾಲಕಾಲಕ್ಕೆ ಸಾಲದ ಒತ್ತಡ ಪರೀಕ್ಷೆಗಳನ್ನು ನಡೆಸುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿದರು. ಕಾಲಕಾಲಕ್ಕೆ ಎನ್‌ಬಿಎಫ್‌ಸಿಗಳಿಗೆ ನೀಡಿರುವ ಸಾಲವನ್ನು ಮೌಲ್ಯಮಾಪನ ಮಾಡುವುದು ಅಗತ್ಯ ಎಂದು ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ ಎಂದರು.

ಬಡ್ಡಿದರಗಳ ಬಗ್ಗೆ ನ್ಯಾಯಯುತವಾಗಿರಿ: ಕೆಲವು ಎನ್‌ಬಿಎಫ್‌ಗಳು ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ಬಡ್ಡಿದರಗಳ ಮೇಲಿನ ನಿಯಂತ್ರಣದ ಕೊರತೆಯ ಹೊರತಾಗಿಯೂ, ಕೆಲವು ಸಂಸ್ಥೆಗಳು ಅತಿ ಹೆಚ್ಚಿನ ಬಡ್ಡಿದರಗಳಿಂದಾಗಿ ಭಾರಿ ನಿವ್ವಳ ಬಡ್ಡಿಯ ಅಂಚುಗಳನ್ನು ಪಡೆಯುತ್ತಿವೆ. ಇದು ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಆರ್‌ಬಿಐ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Market highlights: ಸೆನ್ಸೆಕ್ಸ್​ 92 ಪಾಯಿಂಟ್​ & ನಿಫ್ಟಿ 28 ಪಾಯಿಂಟ್ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.