ETV Bharat / business

ಶೇ.6ರಷ್ಟು ಜಿಡಿಪಿ ಇದ್ದರೆ 2047ರಲ್ಲೂ ಭಾರತ ಕೆಳಮಧ್ಯಮ ಆರ್ಥಿಕತೆಯ ರಾಷ್ಟ್ರ: ರಘುರಾಮ್​ ರಾಜನ್​ - ಭಾರತ ಅಭಿವೃದ್ಧಿ ಶೀಲ ರಾಷ್ಟ್ರ

2047ರ ವೇಳೆಗೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಬೆಳೆಯುವ ಗುರಿ ಸಾಧಿಸಬೇಕಾದರೆ, ಈಗಿನ ಪ್ರಗತಿ ದರ ಇನ್ನಷ್ಟು ಹೆಚ್ಚಬೇಕು ಎಂದು ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಹೇಳಿದರು.

ರಘುರಾಮ್​ ರಾಜನ್​
ರಘುರಾಮ್​ ರಾಜನ್​
author img

By ETV Bharat Karnataka Team

Published : Dec 17, 2023, 7:17 PM IST

ಹೈದರಾಬಾದ್: 2047ರ ವೇಳೆಗೆ ಭಾರತ ಅಭಿವೃದ್ಧಿಶೀಲ ಮತ್ತು ಸಿರಿವಂತ ರಾಷ್ಟ್ರವಾಗಿ ಬೆಳೆಯಬೇಕಾದರೆ, ಈಗಿನ ಆರ್ಥಿಕ ಪ್ರಗತಿ ಸಾಕಾಗದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ​ ಮಾಜಿ ಗವರ್ನರ್​, ಅರ್ಥಶಾಸ್ತ್ರಜ್ಞ ರಘುರಾಮ್​ ರಾಜನ್​ ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆಯ (2047) ವೇಳೆಗೆ ಜನಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗದೆ, ಸಂಭಾವ್ಯ ಬೆಳವಣಿಗೆ ದರವು ವಾರ್ಷಿಕ ಶೇಕಡಾ 6 ರಷ್ಟಿದ್ದರೆ ದೇಶ ಕೆಳಮಧ್ಯಮ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ಜನಸಂಖ್ಯೆ ಬೆಳವಣಿಗೆಯು ದೇಶದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ವಯಸ್ಸಾದ ಜನಸಂಖ್ಯೆ ಹೊರೆಯಾಗುತ್ತದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7.5ರಷ್ಟು ದಾಖಲಾಗಿದೆ. ಈಗಿನ ಕಾರ್ಮಿಕ ಬಲ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ತಾಳೆ ಹಾಕಿದರೆ, ಇದು ತುಂಬಾ ಕಡಿಮೆ. ಇದು ಜಿ20 ರಾಷ್ಟ್ರಗಳಲ್ಲಿಯೇ ಅತ್ಯಂತ ಕಡಿಮೆ ಎಂದು ರಾಜನ್ ವಿವರಿಸಿದರು.

ತಲಾ ಆದಾಯದ ಲೆಕ್ಕಾಚಾರ: ಭಾರತದ ಜಿಡಿಪಿ ಬೆಳವಣಿಗೆ ದರ ಸದ್ಯ ವರ್ಷಕ್ಕೆ ಶೇ 6ರಷ್ಟಿದೆ. ಗಣಿತದ ಲೆಕ್ಕಾಚಾರಗಳ ಪ್ರಕಾರ, ವರ್ಷಕ್ಕೆ 6 ಪ್ರತಿಶತವಿದ್ದಾಗ 12 ವರ್ಷಕ್ಕೆ ಇದು ದ್ವಿಗುಣಗೊಳ್ಳುತ್ತದೆ. ಅಂದರೆ, ನಮ್ಮ ತಲಾದಾಯ ಹೆಚ್ಚಳವಾಗಲು 24 ವರ್ಷಗಳು ಬೇಕಾಗುತ್ತವೆ. ದೇಶದಲ್ಲಿ ಈಗ ತಲಾ ಆದಾಯ ಪ್ರತಿ ವ್ಯಕ್ತಿಗೆ 2,500 ಡಾಲರ್​ನಷ್ಟಿದೆ. ಅದನ್ನು ನಾಲ್ಕರಿಂದ ಗುಣಿಸಿದಾಗ, ಪ್ರತಿ ವ್ಯಕ್ತಿಗೆ 10,000 ಡಾಲರ್​ ಆಗುತ್ತದೆ. ಇದು ಸದ್ಯಕ್ಕೆ ಜಿ20 ರಾಷ್ಟ್ರಗಳಲ್ಲಿ ಅತ್ಯಧಿಕವಾಗುತ್ತದೆ. ಹಾಗಂತ ನಾವು ನಾವು ಶ್ರೀಮಂತರಾಗುವುದಿಲ್ಲ. 2047 ರವರೆಗೆ ನಾವು ಕೆಳಮಧ್ಯಮ ಆದಾಯವನ್ನೇ ಹೊಂದಿರುತ್ತೇವೆ ಎಂಬುದು ರಾಜನ್ ಲೆಕ್ಕಾಚಾರ.

ದಕ್ಷಿಣದ ಕೆಲ ರಾಜ್ಯಗಳಲ್ಲಿ ಸಂತಾನೋತ್ಪತ್ತಿ ದರಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ಇನ್ನೊಂದು ಪ್ರಕಾರವಾಗಿ ಹೇಳುವುದಾದರೆ, ಫಲವತ್ತತೆ ದರ ಸಂತಾನೋತ್ಪತ್ತಿ ದರಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಬೆಳವಣಿಗೆ ನಿಧಾನಗತಿಯಲ್ಲಿದೆ. ಇದು ವಯಸ್ಸಿನ ಅಂತರವನ್ನು ಹೆಚ್ಚಿಸುತ್ತದೆ. ಜೊತೆಗೆ ನಾವು ವೇಗವಾಗಿ ಬೆಳೆಯುವ ಹಾದಿಗೆ ತೊಡಕಾಗುತ್ತದೆ. ದೇಶದ ಜನರು ಶ್ರೀಮಂತರಾಗುವ ಮೊದಲೇ ಮುದುಕರಾಗುತ್ತೇವೆ. ಇದು ದೇಶಕ್ಕೆ ಹೊರೆಯಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಜಿಡಿಪಿ ಬೆಳವಣಿಗೆ ಅಭಿವೃದ್ಧಿಗೆ ಸಾಕಾಗದು: ಪ್ರಸ್ತುತ ಬೆಳವಣಿಗೆಯ ವೇಗ ವಯಸ್ಸಿಗೆ ಅನುಗುಣವಾಗಿ ಅಭಿವೃದ್ಧಿ ಕಾಣುತ್ತಿಲ್ಲ. ದೇಶವನ್ನು ಶ್ರೀಮಂತಗೊಳಿಸಲು ಇದು ಸಾಕಾಗುವುದಿಲ್ಲ. ಕಾರ್ಮಿಕ ವರ್ಗಕ್ಕೆ ಎಲ್ಲರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. 2047 ರ ವೇಳೆಗೆ 100 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅಮೃತಮಹೋತ್ಸವ ಎಂದು ಬಣ್ಣಿಸಿದ್ದಾರೆ. ಅಷ್ಟೊತ್ತಿಗಾಗಲೇ ದೇಶ ಸಿರಿವಂತವಾಗುವುದು ಕಷ್ಟ ಎಂಬುದು ರಾಜನ್ ಅಭಿಮತ.

ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶ್ರೀಮಂತವಾದ ನಂತರ ಉತ್ಪಾದಕ ವರ್ಗದಿಂದ ಸೇವಾ ವರ್ಗಕ್ಕೆ ಸಾಗಿವೆ. ಆ ದೇಶಗಳು ಹೆಚ್ಚಾಗಿ ಸೇವಾ ಆರ್ಥಿಕತೆ ಮೇಲೆ ಅವಲಂಬಿತವಾಗುತ್ತವೆ. ಶ್ರೀಮಂತ ರಾಷ್ಟ್ರಗಳಲ್ಲಿ 70 ಪ್ರತಿಶತದಷ್ಟು ಉದ್ಯೋಗಿಗಳು ಸೇವಾ ಉದ್ಯಮದಲ್ಲಿದ್ದರೆ, ಶೇಕಡಾ 20 ರಷ್ಟು ಉತ್ಪಾದನೆ, ಶೇ 5ರಷ್ಟು ನಿರ್ಮಾಣ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: GenAIನಿಂದ 2030ರ ವೇಳೆಗೆ ಭಾರತದ ಜಿಡಿಪಿಗೆ 1.5 ಟ್ರಿಲಿಯನ್ ಡಾಲರ್ ಆದಾಯ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.