ETV Bharat / business

ದೇಶದ ವಾಯುವ್ಯ ಭಾಗ ಹೊರತುಪಡಿಸಿ ಎಲ್ಲೆಡೆ ಮಳೆ ಕೊರತೆ: ಅಕ್ಕಿ, ಧಾನ್ಯಗಳ ಬೆಲೆ ಹೆಚ್ಚಳ

Rainfall deficiency : ಭಾರತದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಾಗಿರುವುದರಿಂದ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಲೆ ಹೆಚ್ಚಾಗುತ್ತಿದೆ.

Apart from India's northwestern region, all others witnessed deficient rainfall

author img

By

Published : Aug 21, 2023, 12:31 PM IST

ನವದೆಹಲಿ: ಆಗಸ್ಟ್​​ ತಿಂಗಳಲ್ಲಿ ಮುಂಗಾರು ದೀರ್ಘಾವಧಿಯ ಸರಾಸರಿಗಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಶೇ 30ರಷ್ಟು ಕೊರತೆಯನ್ನು ದಾಖಲಿಸಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿಯಲ್ಲಿ ತಿಳಿಸಿದೆ. ದಕ್ಷಿಣ ಭಾರತದ ಪ್ರದೇಶಗಳಲ್ಲಿ ಗಮನಾರ್ಹವಾಗಿ ಶುಷ್ಕ ಪರಿಸ್ಥಿತಿ ಕಾಣಿಸಿಕೊಂಡಿದೆ. ಜುಲೈನಲ್ಲಿ ಶೇಕಡಾ 5 ರಷ್ಟು ಹೆಚ್ಚುವರಿ ಮುಂಗಾರು ಮಳೆಯಾಗಿತ್ತು. ಆದರೆ, ಆಗಸ್ಟ್​​ನಲ್ಲಿ ಮುಂಗಾರು ತೀವ್ರ ಇಳಿಕೆಯಾಯಿತು. ಆಗಸ್ಟ್ 20 ರ ವೇಳೆಗೆ ಒಟ್ಟಾರೆ ಶೇಕಡಾ 7 ರಷ್ಟು ಮುಂಗಾರು ಮಳೆ ಕೊರತೆಯಾಗಿದೆ ಎಂದು ವರದಿ ತಿಳಿಸಿದೆ.

ವಾಯುವ್ಯದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 6 ರಷ್ಟು ಹೆಚ್ಚು, ಮಧ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 2 ರಷ್ಟು ಕಡಿಮೆ, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಶೇಕಡಾ 13 ಕಡಿಮೆ ಮತ್ತು ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಶೇಕಡಾ 20ರಷ್ಟು ಕಡಿಮೆ ಮಳೆಯಾಗಿದೆ. ಕಡಿಮೆ ಮಳೆ ಹಾಗೂ ಹೆಚ್ಚಿನ ಬಿಸಿಲಿಗೆ ಕಾರಣವಾಗುವ ಎಲ್​ ನಿನೊ ಅಲೆಯ ಪರಿಣಾಮ ಆರಂಭದಲ್ಲಿ ತುಂಬಾ ಕಡಿಮೆಯಾಗಿತ್ತು. ನಂತರ ಇದು ಮಧ್ಯಮ ಗತಿಗೆ ತಿರುಗಿತ್ತು. ಪ್ರಸ್ತುತ ಅಮೆರಿಕದ ಹವಾಮಾನ ಮುನ್ಸೂಚನಾ ಇಲಾಖೆಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಎಲ್​ ನಿನೊ ಶೇ 66 ರಷ್ಟು ಪ್ರಬಲವಾಗಲಿದೆ.

ಆಗಸ್ಟ್ 18 ರ ವೇಳೆಗೆ ಖಾರಿಫ್ ಹಂಗಾಮಿನ ಬಿತ್ತನೆ ಕಳೆದ ವರ್ಷಕ್ಕಿಂತ ಶೇಕಡಾ 0.1 ರಷ್ಟು ಹೆಚ್ಚಾಗಿದೆ. ಭತ್ತದ ಕೃಷಿಯ ಪ್ರದೇಶವು ಕಳೆದ ವರ್ಷಕ್ಕಿಂತ ಈಗ ಶೇಕಡಾ 4.3 ರಷ್ಟು ಹೆಚ್ಚಾಗಿದೆ. ಆದರೆ ಬೇಳೆಕಾಳು ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಶೇಕಡಾ 9.2 ರಷ್ಟು ಕಡಿಮೆಯಾಗಿದೆ. ಸೆಣಬು, ಹತ್ತಿ ಮತ್ತು ಎಣ್ಣೆಕಾಳುಗಳ ಉತ್ಪಾದನೆಯೂ ಕಡಿಮೆಯಾಗಿದೆ. ಒರಟು ಧಾನ್ಯಗಳ ಉತ್ಪಾದನೆ ವರ್ಷದಿಂದ ವರ್ಷಕ್ಕೆ 1.6 ಪ್ರತಿಶತ ಮತ್ತು ಕಬ್ಬು ಉತ್ಪಾದನೆ 1.3 ಪ್ರತಿಶತ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ತೆಲಂಗಾಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿರುವುದರಿಂದ ಭತ್ತದ ಬಿತ್ತನೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಆದಾಗ್ಯೂ, ಭತ್ತ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ (ಶೇ 14), ಉತ್ತರ ಪ್ರದೇಶ (ಶೇ 22), ಆಂಧ್ರಪ್ರದೇಶ (ಶೇ 14), ಛತ್ತೀಸಗಢ (ಶೇ 13), ಬಿಹಾರ (ಶೇ 31), ಒಡಿಶಾ (ಶೇ 8), ತಮಿಳುನಾಡು (ಶೇ 5) ಮತ್ತು ಅಸ್ಸಾಂ (ಶೇ 19) ರಾಜ್ಯಗಳಲ್ಲಿ ಮಳೆಯ ಕೊರತೆ ಕಳವಳಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ಹೆಚ್ಚಿನ ನೀರಾವರಿ ವ್ಯಾಪ್ತಿಯನ್ನು ಹೊಂದಿರುವ ರಾಜ್ಯಗಳು ಮಾನ್ಸೂನ್ ಕೊರತೆಯಿಂದ ಅಷ್ಟೊಂದು ಪ್ರಭಾವಿತವಾಗದೆ ಇರಬಹುದು. ಮಧ್ಯಪ್ರದೇಶ (ಶೇ 5), ಮಹಾರಾಷ್ಟ್ರ (ಶೇ 5), ಉತ್ತರ ಪ್ರದೇಶ (ಶೇ 22), ಕರ್ನಾಟಕ (ಶೇ 15), ಆಂಧ್ರಪ್ರದೇಶ (ಶೇ 14) ಮತ್ತು ಜಾರ್ಖಂಡ್ (ಶೇ 36) ಕಡಿಮೆ ಮಳೆ ಆದರೆ, ಗುಜರಾತ್ (ಶೇ 24) ಮತ್ತು ರಾಜಸ್ಥಾನ (ಶೇ 27) ರಾಜ್ಯಗಳಲ್ಲಿ ಅತಿಯಾದ ಮಳೆಯಾಗಿರುವುದು ದ್ವಿದಳ ಧಾನ್ಯಗಳ ಬಿತ್ತನೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ.

ಪ್ರಮುಖ ರಾಜ್ಯಗಳಾದ್ಯಂತ ಕಡಿಮೆ ನೀರಾವರಿ ಪ್ರದೇಶವು ದ್ವಿದಳ ಧಾನ್ಯಗಳ ಉತ್ಪಾದನೆಯ ಮೇಲೆ ಹೆಚ್ಚು ಸ್ಪಷ್ಟವಾದ ಪರಿಣಾಮ ಬೀರುತ್ತದೆ. ಕಳೆದ ಐದು ತಿಂಗಳಲ್ಲಿ ಬೇಳೆಕಾಳುಗಳ ಹಣದುಬ್ಬರ ದ್ವಿಗುಣಗೊಂಡಿದೆ. ಮಳೆ ಕೊರತೆಯಿಂದಾಗಿ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಲೆ ಹೆಚ್ಚಾಗುತ್ತಿವೆ.

ಇದನ್ನೂ ಓದಿ : ಈರುಳ್ಳಿ ಬಫರ್​ ಸ್ಟಾಕ್ 5 ಲಕ್ಷ ಮೆಟ್ರಿಕ್​ ಟನ್​ಗೆ ಹೆಚ್ಚಿಸಿದ ಕೇಂದ್ರ; ಬೆಲೆಯೇರಿಕೆ ತಡೆಗೆ ತುರ್ತುಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.