ETV Bharat / business

ಗಮ್ಯಸ್ಥಾನ ದಾಟದಂತೆ ರೈಲ್ವೆ ಪ್ರಯಾಣಿಕರ ಎಚ್ಚರ ಮಾಡಲು ಬಂದಿದೆ 'ವೇಕಪ್​ ಅಲಾರಂ' - Wakeup alarm for railway passengers

Wake up Alarm by railways: ರಾತ್ರಿ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ಇಲಾಖೆ ವೇಕಪ್​ ಅಲಾರಂ ಅನ್ನು ಪರಿಚಯಿಸಿದೆ. ಈ ಸಹಾಯವನ್ನು ಪಡೆದುಕೊಂಡಲ್ಲಿ ತಲುಪಬೇಕಾದ ಗಮ್ಯಸ್ಥಾನಕ್ಕೆ 20 ನಿಮಿಷ ಮುಂಚಿತವಾಗಿ ನಿಮಗೆ ಕರೆಗಂಟೆ ಬರಲಿದೆ.

wakeup-alert-facility
ಬಂದಿದೆ 'ವೇಕಪ್​ ಅಲಾರಂ'
author img

By

Published : Jun 5, 2022, 10:43 PM IST

ಹೈದರಾಬಾದ್​​: ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಬೆಳ್ಳಂಬೆಳಗ್ಗೆಯೇ ಇಳಿಯಬೇಕಾಗಿ ಬರುತ್ತದೆ. ನಮ್ಮ ಗಮ್ಯಸ್ಥಾನ ಕೊನೆಯ ನಿಲ್ದಾಣವಾಗಿದ್ದರೆ ಪರವಾಗಿಲ್ಲ. ಅದಕ್ಕೂ ಮೊದಲಾಗಿದ್ದರೆ ನಿದ್ದೆ ಮಾಡುವಾಗ ನಿಲ್ದಾಣ ದಾಟಿ ಹೋಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆ 'ವೇಕಪ್​ ಅಲರಾಂ' ಸೇವೆಯನ್ನು ಆರಂಭಿಸಿದೆ. ಇದು ಪ್ರಯಾಣಿಕರನ್ನು ಎಚ್ಚರಿಸುವ ಕರೆಗಂಟೆಯಂತೆ ಕೆಲಸ ಮಾಡುತ್ತದೆ.

ಬೋರ್ಡಿಂಗ್​ ನಿಲ್ದಾಣವನ್ನು ದಾಟದಂತೆ ಪ್ರಯಾಣಿಕರ ನೆರವಿಗಾಗಿ ಐಆರ್​ಸಿಟಿಸಿ 139 ಎಂಬ ಸಹಾಯವಾಣಿ ಮಾದರಿಯ ಸೇವೆಯನ್ನು ಪ್ರಾರಂಭಿಸಿದೆ. ಇದಕ್ಕೆ ಮೊದಲೇ ಕರೆ ಮಾಡಿ ತಾವು ಇಳಿಯಬೇಕಾದ ನಿಲ್ದಾಣದ ಬಗ್ಗೆ ನಮೂದಿಸಿದರೆ, ಅವರ ಮೊಬೈಲ್​ಗೆ ಕರೆ ರೀತಿಯ ಗಂಟೆ​ ಮೊಳಗಿ 20 ನಿಮಿಷಗಳ ಮುಂಚೆಯೇ ಎಚ್ಚರ ಮಾಡುತ್ತದೆ.

ಈ ಅಲರ್ಟ್​ ಪಡೆಯುವುದು ಹೇಗೆ?: ವೇಕಪ್ ಅಲಾರಂ ವೈಶಿಷ್ಟ್ಯವನ್ನು ಪಡೆಯಲು ಪ್ರಯಾಣಿಕರು ಮೊದಲು ತಮ್ಮ ಫೋನ್‌ನಿಂದ ಐಆರ್​ಸಿಟಿಸಿ ಸಂಖ್ಯೆ 139 ಗೆ ಕರೆ ಮಾಡಬೇಕು. ಬಳಿಕ ಗಮ್ಯಸ್ಥಾನದ ಎಚ್ಚರಿಕೆಯನ್ನು ನಮೂದಿಸಬೇಕು. ನಂತರ ಅದು ನಿಮ್ಮ 10 ಅಂಕಿಗಳ ಪಿಎನ್​ಆರ್​ ಸಂಖ್ಯೆಯನ್ನು ಕೇಳುತ್ತದೆ. PNR ಅನ್ನು ಪರಿಶೀಲಿಸಲು 1 ಅನ್ನು ಡಯಲ್ ಮಾಡಬೇಕಾಗಿದೆ.

ಈ ಪ್ರಕ್ರಿಯೆ ಪೂರ್ಣಗೊಂಡಾಗ, ಪಿಎನ್​ಆರ್​ ಸಂಖ್ಯೆ ಮತ್ತು ಗಮ್ಯಸ್ಥಾನದ ಎಚ್ಚರಿಕೆಯನ್ನು ದೃಢೀಕರಿಸುವ ಸಂದೇಶವನ್ನು ಕಳುಹಿಸಲಾಗುತ್ತದೆ. ನೀವು ಗಮ್ಯಸ್ಥಾನವನ್ನು ತಲುಪುವ 20 ನಿಮಿಷಗಳ ಮೊದಲು ನಿಮ್ಮ ಫೋನ್‌ಗೆ ಕರೆ ರೂಪದಲ್ಲಿ ಎಚ್ಚರಿಕೆಯನ್ನು ಪಡೆಯುವಿರಿ. ಪ್ರಸ್ತುತ ಐಆರ್​ಸಿಟಿಸಿ ಈ ಸೌಲಭ್ಯವನ್ನು ರಾತ್ರಿ 11 ರಿಂದ ಬೆಳಗ್ಗೆ 7 ರವರೆಗೆ ಲಭ್ಯವಾಗುವಂತೆ ಮಾಡಿದೆ.

ಕರೆ ಮಾಡುವ ಮೂಲಕವಲ್ಲದೇ, ALERT ಎಂದು ಟೈಪ್​ ಮಾಡಿ PNR ಸಂಖ್ಯೆಯನ್ನು ನಮೂದಿಸಿ 139 ಗೆ ಸಂದೇಶ ಕಳುಹಿಸುವ ಮೂಲಕವೂ ವೇಕಪ್​ ಅಲಾರಂ ಸೌಲಭ್ಯವನ್ನು ಪಡೆಯಬಹುದು.

ಓದಿ: ಟೀ ಅಂಗಡಿಯಲ್ಲಿ ಸೋಲಾರ್ ಪ್ಯಾನಲ್‌ ಅಳವಡಿಕೆ: ತಿಂಗಳಿಗೆ ಭಾರಿ ಹಣ ಉಳಿಸುತ್ತಿದ್ದಾನೆ ಚಾಯ್​ ವಾಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.