ETV Bharat / business

ಉದ್ಯೋಗಿಗಳ ಯೋಗಕ್ಷೇಮಕ್ಕೆ 600 ಕೋಟಿ ಖರ್ಚು ಮಾಡಲಿದೆ PwC India!

author img

By

Published : Apr 17, 2023, 6:07 PM IST

ಪಿಡಬ್ಲ್ಯೂಸಿ ಇಂಡಿಯಾ ಕಂಪನಿಯು ತನ್ನ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 600 ಕೋಟಿ ರೂಪಾಯಿ ವ್ಯಯಿಸಲು ನಿರ್ಧರಿಸಿದೆ.

PwC India invest to 600 crore in EPF
PwC India invest to 600 crore in EPF

ಮುಂಬೈ : ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿನ ತನ್ನ ಉದ್ಯೋಗಿಗಳ ಸಮಗ್ರ ಬೆಳವಣಿಗೆ, ಅಭಿವೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ 600 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಪಿಡಬ್ಲ್ಯೂಸಿ ಇಂಡಿಯಾ ಸೋಮವಾರ ಹೇಳಿದೆ. ಕಳೆದ ಮೂರು ವರ್ಷಗಳು ಜನರ ಮೇಲೆ ವಿಚಿತ್ರ ಪರಿಣಾಮ ಬೀರಿವೆ. ಹೀಗಾಗಿ ಜನ ತಾವು ಯಾವ ಕೆಲಸ ಮಾಡಬೇಕು ಮತ್ತು ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ಮರುಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಪಿಡಬ್ಲ್ಯೂಸಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಈ ಮೂಲಭೂತ ಮನಸ್ಥಿತಿಯಲ್ಲಿನ ಬದಲಾವಣೆಯನ್ನು ಶ್ಲಾಘಿಸಿದ ಸಂಸ್ಥೆಯು ತನ್ನ ಹೊಸ ಪೀಪಲ್ ಎಕ್ಸ್‌ಪೀರಿಯನ್ಸ್ ಫ್ರೇಮ್‌ವರ್ಕ್ ಮೂಲಕ 600 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದೆ. ಈ ಮೂಲಕ ತನ್ನ ಉದ್ಯೋಗಿಗಳು ಅನಂತ ಅವಕಾಶಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

ನಮ್ಮ ಹೊಸ ಪೀಪಲ್ ಎಕ್ಸ್​ಪೀರಿಯನ್ಸ್​ ಫ್ರೇಮ್​ವರ್ಕ್ ಯೋಜನೆಯು ಬೆಳವಣಿಗೆ ಮತ್ತು ಅಭಿವೃದ್ಧಿ, ಕಸ್ಟಮೈಸ್ ಮಾಡಿದ ಪ್ರತಿಫಲಗಳು, ಪ್ರಯೋಜನಗಳು ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಪಿಡಬ್ಲ್ಯೂಸಿ ತನ್ನ ಉದ್ಯೋಗಿಗಳಿಗೆ ಅಪರಿಮಿತ ಸಾಧ್ಯತೆಗಳು ಮತ್ತು ಅನಂತ ಅನುಭವಗಳ ಸೌಲಭ್ಯಗಳನ್ನು ನೀಡಲು ಬಯಸಿದೆ ಮತ್ತು ಸಂಸ್ಥೆಯು ತನ್ನ ಜನರಿಗೆ ಸುಲಭವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಿದೆ ಎಂದು ಭಾರತದಲ್ಲಿ ಪಿಡಬ್ಲ್ಯೂಸಿ ಅಧ್ಯಕ್ಷ ಸಂಜೀವ್ ಕ್ರಿಶನ್ ಹೇಳಿದರು.

ಹೊಸ ಪೀಪಲ್ ಫ್ರೇಮ್‌ವರ್ಕ್ ಉದ್ಯೋಗಿಗಳಿಗೆ ಪರ್ಸನಲೈಸ್ಡ್​ ಸೌಲಭ್ಯಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಅದು ಅವರ ಕುಟುಂಬಗಳ ಅಗತ್ಯತೆಗಳನ್ನು ಪೂರೈಸುವುದು ಸೇರಿದಂತೆ, ಅವರ ಉದ್ದೇಶ ಮತ್ತು ಮೌಲ್ಯಗಳಿಗೆ ಹೊಂದಿಕೆಯಾಗುವ ಕೆಲಸವನ್ನು ಹುಡುಕುವುದು ಸೇರಿದಂತೆ ಅವರು ತಮ್ಮ ಜೀವನವನ್ನು ಬದುಕಲು ಅನುವು ಮಾಡಿಕೊಡುತ್ತದೆ ಎಂದರು.

ಪಿಡಬ್ಲ್ಯೂಸಿ ಇಂಡಿಯಾ ಡೈರೆಕ್ಟರ್ ಮಟ್ಟದವರೆಗಿನ ಉದ್ಯೋಗಿಗಳಿಗೆ ನಿಯಮಿತ ಪೂರ್ಣ ಸಮಯದ ಉದ್ಯೋಗಿಗಳಿಗೆ ವಸತಿ ರಹಿತ ಎಕ್ಸೆಕ್ಯುಟಿವ್ MBA ಶಿಕ್ಷಣ ಕೊಡಿಸುವ ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಸಂಸ್ಥೆಯು ಉದ್ಯೋಗಿಗಳ ಕೋರ್ಸ್ ಶುಲ್ಕದ ಶೇಕಡಾ 75 ರಷ್ಟನ್ನು ಪ್ರಾಯೋಜಿಸುತ್ತದೆ (ಪ್ರತಿ ವ್ಯಕ್ತಿಗೆ ₹ 10 ಲಕ್ಷದವರೆಗೆ). ಇದರ ಜೊತೆಗೆ, ಸಂಸ್ಥೆಯ ಪ್ರಕಾರ, ಸ್ವಯಂ ಕಲಿಕಾ ಪ್ರಮಾಣೀಕರಣಗಳ ಪ್ರಾಯೋಜಕತ್ವವನ್ನು ಹಿಂದಿನ ₹ 30,000 ರಿಂದ ₹ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸಂಸ್ಥೆಯು ಪ್ರತಿ ಉದ್ಯೋಗಿ, ಅವರ ಸಂಗಾತಿ ಮತ್ತು ಇಬ್ಬರು ಮಕ್ಕಳಿಗೆ ವೈದ್ಯಕೀಯ ಚಿಕಿತ್ಸಾ ಕವರೇಜ್ ಅನ್ನು ₹5 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದರ ಹೊರತಾಗಿ, ರೀಚಾರ್ಜ್ ಮತ್ತು ಪುನರುಜ್ಜೀವನಗೊಳಿಸುವ ನೀತಿಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರತಿ ಉದ್ಯೋಗಿಯು ವರ್ಷದಲ್ಲಿ ಕನಿಷ್ಠ 10 ದಿನಗಳ ಡೌನ್‌ಟೈಮ್‌ಗೆ ಅರ್ಹರಾಗಿರುತ್ತಾರೆ. ಪಿತೃತ್ವ ರಜೆಯನ್ನು ಹದಿನೈದು ದಿನಗಳಿಂದ 30 ದಿನಗಳವರೆಗೆ ಹೆಚ್ಚಿಸಲಾಗಿದೆ.
ಭಾರತದಲ್ಲಿ ತನ್ನ ಸದಸ್ಯ ಸಂಸ್ಥೆಗಳ ಅಸ್ತಿತ್ವದ 150 ವರ್ಷಗಳ ನೆನಪಿಗಾಗಿ ಪಿಡಬ್ಲ್ಯೂಸಿ ಇಂಡಿಯಾ ತನ್ನ ಉದ್ಯೋಗಿಗಳಿಗೆ ವಿಶೇಷ ಸಂಭ್ರಮಾಚರಣೆಯ ಉಡುಗೊರೆಯನ್ನು ಪ್ರಾರಂಭಿಸಿದೆ ಮತ್ತು ಈ ಉಡುಗೊರೆಗಾಗಿ ₹150 ಕೋಟಿಯನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ : ಸಗಟು ಹಣದುಬ್ಬರ ದರ ಶೇ 1.34ಕ್ಕೆ ಇಳಿಕೆ: 29 ತಿಂಗಳ ಕನಿಷ್ಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.