ಹೈದರಾಬಾದ್: ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಉಕ್ರೇನ್ ಯುದ್ಧದ ಘೋಷಣೆ ಆರಂಭದಲ್ಲಿ ಭಾರಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ, ಆ ಬಳಿಕ ಚೇತರಿಕೆ ಕಂಡಿತ್ತು. ಈಗ್ಗೆ ಕೆಲ ದಿನಗಳಿಂದ ಷೇರುಪೇಟೆ ಭಾರಿ ಕುಸಿತ ಕಾಣುತ್ತಿರುವುದನ್ನು ನಿತ್ಯ ನಾವೆಲ್ಲ ಗಮನಿಸುತ್ತಲೇ ಇದ್ದೇವೆ.
ಷೇರುಪೇಟೆಯಲ್ಲಿ ಈಗ ಹೂಡಿಕೆ ಮಾಡುವುದು ಸೂಕ್ತ ಎಂದು ಬಹಳಷ್ಟು ಅನುಭವಿ ಹೂಡಿಕೆದಾರರು ಹಾಗೂ ತಜ್ಞರು ಸಲಹೆ ನೀಡುತ್ತಿರುತ್ತಾರೆ. ಆದರೆ ಅವರು ಇದೇ ವೇಳೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಹಿನ್ನೆಲೆ, ಆಗು ಹೋಗುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡೇ ಮುಂದುವರೆಯುವಂತೆ ಎಚ್ಚರಿಕೆಯನ್ನೂ ನೀಡುತ್ತಾರೆ.
ಹೂಡಿಕೆದಾರರಾದ ನಾವು ಈಗ ಈ ಬಗ್ಗೆ ಯೋಚನೆ ಮಾಡಿ ಮುಂದುವರೆಯಬೇಕು. ಸೂಚ್ಯಂಕಗಳು ತೀರಾ ಕುಸಿತದಲ್ಲಿದ್ದಾಗ ನಾವು ಹೂಡಿಕೆಗಳ ಬಗ್ಗೆ ಯೋಚಿಸಬೇಕು. ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಕುಸಿತ ಕಂಡಾಗ ಜಾಣ್ಮೆಯಿಂದ ಹೂಡಿಕೆ ಮಾಡಿ, ಲಾಭ ಬಂದಾಗ ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ಜಾಣರ ಲಕ್ಷಣ.
ನೀವು ಒಂದೊಮ್ಮೆ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದಾಗ ಶೇ 10- 20 ರಷ್ಟು ಏರಿಳಿತ ಆಗುವುದು ಕಾಮನ್. ಅದೆಲ್ಲವನ್ನು ನೆನಪಿಟ್ಟುಕೊಂಡು ಯಾವುದು ಸೂಕ್ತ, ಯಾವ ಷೇರಿನ ಮೇಲೆ ಹಣ ತೊಡಗಿಸಬೇಕು. ಯಾವಾಗ ಏರಿಕೆ ಆಗುತ್ತದೆ ಎಂಬುದನ್ನು ನಿತ್ಯ ಗಮನಿಸಿ ಹೂಡಿಕೆ ಮಾಡಬೇಕು ಮತ್ತು ಲಾಭ ಬಂದಾಗ ನಿಮ್ಮ ಷೇರುಗಳನ್ನ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕು.
2 ವರ್ಷದಲ್ಲಿ ಗಣನೀಯ ಏರಿಕೆ ಕಂಡಿರುವ ಷೇರು ಮಾರುಕಟ್ಟೆ: ಕಳೆದ ಎರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಗಳು ಗಣನೀಯವಾಗಿ ಏರಿಕೆ ಕಂಡಿವೆ. ಈ ಹಿನ್ನೆಲೆಯಲ್ಲಿ, ನಿಮ್ಮ ಇಕ್ವಿಟಿ ಹೂಡಿಕೆಯ ಮೌಲ್ಯವು ಶೇಕಡಾ 5 -10 ರಷ್ಟು ಹೆಚ್ಚಾಗಿರುವ ಸಾಧ್ಯತೆಗಳಿವೆ. ಆದರೆ ಈಗ ಕೆಲ ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತ ವಾತಾವರಣ ಇದೆ. ಈಗ ನೀವು ಭಾರಿ ಎಚ್ಚರಿಕೆಯಿಂದ ಜಾಣ್ಮೆಯಿಂದ ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಬೇಕು.
ಇತ್ತೀಚಿನ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಹೂಡಿಕೆಯನ್ನು ಸರಿಹೊಂದಿಸಲು ಇದು ಉತ್ತಮ ಸಮಯ. ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು ಮತ್ತು ಈಕ್ವಿಟಿ ಹೂಡಿಕೆಗಳನ್ನು ನೀವು ಬಯಸಿದ ಗುಣಮಟ್ಟಕ್ಕೆ ತರಲು ಪ್ರಯತ್ನಿಸಬೇಕು.
ಮತ್ತೆ ಏರಿಕೆ ಸಾಧ್ಯತೆ: ಮುಂಬರುವ ದಿನಗಳಲ್ಲಿ ಈಕ್ವಿಟಿ ಮಾರುಕಟ್ಟೆಗಳ ಕಾರ್ಯಕ್ಷಮತೆ ಸುಧಾರಿಸುವ ನಿರೀಕ್ಷೆಯಿದೆ. ಆಗ ಈಕ್ವಿಟಿ ಹೂಡಿಕೆಗಳು ಧನಾತ್ಮಕವಾಗಬಹುದು. ಈ ಹಂತದಲ್ಲಿ, ನೀವು ಹೂಡಿಕೆ ಮುಂದುವರಿಸಬೇಕು. ಷೇರುಪೇಟೆ ಕುಸಿತ ಕಾಣುತ್ತಿದ್ದರೆ, ಆ ಬಗ್ಗೆ ಭಯ ಬೀಳುವುದು ಬೇಡ. ಈಗ ಮಾರುಕಟ್ಟೆ ಕುಸಿತ ಕಂಡಿದೆ ಎಂದು ಭಯ ಬಿದ್ದು ಹಣ ವಾಪಸ್ ಪಡೆದು ಲಾಸ್ ಮಾಡಿಕೊಳ್ಳಬೇಡಿ, ಹಣ ಇದ್ದರೆ ಉತ್ತಮ ಷೇರುಗಳ ಮೇಲೆ ಯೋಚಿಸಿ ಹೂಡಿಕೆ ಮಾಡಿ.
ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಭಯ, ದುರಾಸೆಯಿಂದ ದೂರ ಇರಬೇಕು. ಅಧ್ಯಯನಗಳ ಮೂಲಕ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಫಂಡ್ಸ್ ಇಂಡಿಯಾದ ಸಂಶೋಧನಾ ಮುಖ್ಯಸ್ಥ ಅರುಣ್ ಕುಮಾರ್ ಸಲಹೆ ನೀಡಿದ್ದಾರೆ.