ETV Bharat / business

2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಾಧ್ಯತೆ: ಸಮೀಕ್ಷಾ ವರದಿ - ವಿಶ್ವ ಆರ್ಥಿಕ ವೇದಿಕೆಯ ಸಮೀಕ್ಷೆ

2023 ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂದು ಹೇಳಲಾಗಿದೆ. ವಿಶ್ವ ಆರ್ಥಿಕ ವೇದಿಕೆಯ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಆದಾಗ್ಯೂ ಇದೇ ವರ್ಷ ಆರ್ಥಿಕ ಹಿಂಜರಿತ ಉಂಟಾಗಲಾರದು ಎಂಬುದು ಕೂಡ ಕೆಲವರ ಅಭಿಪ್ರಾಯವಾಗಿದೆ.

2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಾಧ್ಯತೆ: ಸಮೀಕ್ಷಾ ವರದಿ

author img

By

Published : Jan 17, 2023, 3:51 PM IST

ದಾವೋಸ್-ಕ್ಲೋಸ್ಟರ್ಸ್ (ಸ್ವಿಟ್ಜರ್ಲೆಂಡ್): ವಿಶ್ವ ಆರ್ಥಿಕ ವೇದಿಕೆಯ ಸಮೀಕ್ಷೆಯಲ್ಲಿ ಸುಮಾರು ಮೂರನೇ ಎರಡರಷ್ಟು ಖಾಸಗಿ ಮತ್ತು ಸಾರ್ವಜನಿಕ ವಲಯದ ಪ್ರಮುಖ ಅರ್ಥಶಾಸ್ತ್ರಜ್ಞರು 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸುಮಾರು 18 ಪ್ರತಿಶತದಷ್ಟು ಜನರು ಆರ್ಥಿಕ ಹಿಂಜರಿತದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯೆ ನೀಡಿದ ಸುಮಾರು ಮೂರನೇ ಎರಡರಷ್ಟು ಜನ 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಒಪ್ಪಿದ್ದಾರೆ.

ಇದರಲ್ಲಿ ಶೇಕಡಾ 18 ರಷ್ಟು ಜನರು ಇದು ಅತ್ಯಂತ ಸಾಧ್ಯತೆಯಿದೆ ಎಂದು ಪರಿಗಣಿಸುತ್ತಾರೆ. ಈ ಹಿಂದೆ ಸೆಪ್ಟೆಂಬರ್ 2022 ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೇಳಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಜನ ಈ ಬಾರಿ ಹಿಂಜರಿತ ಉಂಟಾಗುವ ಸಾಧ್ಯತೆ ಒಪ್ಪಿದ್ದಾರೆ ಎಂದು ಜನವರಿ 2023 ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ಹೊಸ ಆರ್ಥಿಕತೆ ಮತ್ತು ಸಮಾಜಕ್ಕಾಗಿ ನಡೆದ ಮುಖ್ಯ ಅರ್ಥಶಾಸ್ತ್ರಜ್ಞರ ಅಂದಾಜು ಸಮೀಕ್ಷೆ ಹೇಳಿದೆ.

ಆದಾಗ್ಯೂ ಅಭಿಪ್ರಾಯಗಳು ವಿಭಿನ್ನವಾಗಿವೆ. ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಜಾಗತಿಕ ಆರ್ಥಿಕ ಹಿಂಜರಿತವನ್ನು ಈ ವರ್ಷ ಅಸಂಭವ ಎಂದು ಪರಿಗಣಿಸಿದ್ದಾರೆ. ಸಮೀಕ್ಷೆಯು ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸಾರಾಂಶ ಮಾಡುವ ಗುರಿಯನ್ನು ಹೊಂದಿದೆ. ಜೊತೆಗೆ ಭೌಗೋಳಿಕ-ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಘಟನೆಗಳಿಂದ ಜಾಗತಿಕ ಆರ್ಥಿಕತೆಗೆ ಉಂಟಾಗುತ್ತಿರುವ ಆಘಾತಗಳಿಗೆ ಪ್ರತಿಕ್ರಿಯೆಯಾಗಿ ನೀತಿ ನಿರೂಪಕರು ಮತ್ತು ವ್ಯಾಪಾರ ಮುಖಂಡರು ಮುಂದೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಗುರುತಿಸುತ್ತದೆ. ಸಮೀಕ್ಷೆಯನ್ನು ನವೆಂಬರ್-ಡಿಸೆಂಬರ್ 2022 ರಲ್ಲಿ ನಡೆಸಲಾಯಿತು.

ಪ್ರಾದೇಶಿಕವಾಗಿ, ಯುರೋಪ್ ಮತ್ತು ಯುಎಸ್‌ನಲ್ಲಿನ ಪರಿಸ್ಥಿತಿಯು ಈಗ ಸ್ಪಷ್ಟವಾಗಿದೆ. ಈ ಖಂಡಗಳಲ್ಲಿ 2023 ರಲ್ಲಿ ದುರ್ಬಲ ಅಥವಾ ಅತ್ಯಂತ ದುರ್ಬಲ ಬೆಳವಣಿಗೆ ಇರಲಿದೆ ಎಂದು ನೂರಕ್ಕೆ ನೂರರಷ್ಟು ಮುಖ್ಯ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಯುದ್ಧ ಮತ್ತು ಅಂತರಾಷ್ಟ್ರೀಯ ಉದ್ವಿಗ್ನತೆಗಳು ಜಾಗತಿಕ ಆರ್ಥಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವುದನ್ನು ಮುಂದುವರೆಸುತ್ತವೆ ಮತ್ತು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಕೂಡ ಇದನ್ನು ಗುರುತಿಸಿದ್ದಾರೆ. ಶೇ 73 ರಷ್ಟು ಜನ ಸ್ವಲ್ಪಮಟ್ಟಿಗೆ ಮತ್ತು ಶೇ 27 ರಷ್ಟು ಪ್ರತಿಶತದಷ್ಟು ಜನ ಹೊಸ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ ಪ್ರಪಂಚದಾದ್ಯಂತ ಆರ್ಥಿಕ ಚಟುವಟಿಕೆಯ ಮಾದರಿಗಳು ಬದಲಾಗುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಸಮೀಕ್ಷೆಯ ಪ್ರಕಾರ 2023 ರಲ್ಲಿ ಎರಡು ಪ್ರಬಲ ಪ್ರದೇಶಗಳೆಂದರೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA) ಮತ್ತು ದಕ್ಷಿಣ ಏಷ್ಯಾ. ಶೇ 85 ರಷ್ಟು ಜನ ದಕ್ಷಿಣ ಏಷ್ಯಾದಲ್ಲಿ ಮಧ್ಯಮ (70 ಪ್ರತಿಶತ) ಅಥವಾ ಬಲವಾದ (15 ಪ್ರತಿಶತ) ಬೆಳವಣಿಗೆಯನ್ನು ನಿರೀಕ್ಷಿಸುತ್ತಾರೆ. ಇದು ಸೆಪ್ಟೆಂಬರ್ ಆವೃತ್ತಿಯ ನಂತರ ಸಾಧಾರಣ ಸುಧಾರಣೆಯಾಗಿದೆ. ಬಾಂಗ್ಲಾದೇಶ ಮತ್ತು ಭಾರತ ಸೇರಿದಂತೆ ಈ ಪ್ರದೇಶದ ಕೆಲವು ಆರ್ಥಿಕತೆಗಳು ಚೀನಾದಿಂದ ದೂರ ಸರಿಯುತ್ತಿರುವ ಉತ್ಪಾದನಾ ಪೂರೈಕೆ ಸರಪಳಿಗಳ ಜಾಗತಿಕ ಪ್ರವೃತ್ತಿಗಳಿಂದ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಜನಸಂಖ್ಯೆ ಕುಸಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.