ETV Bharat / business

ವಿಮೆ ವಂಚನೆ ತಡೆಗೆ ಮುಂಜಾಗ್ರತಾ ಕ್ರಮ ಅಗತ್ಯ... ಇಲ್ಲಿವೆ ಕೆಲ ಸಲಹೆಗಳು - ಸೈಬರ್ ಅಪರಾಧ

ದೇಶಾದ್ಯಂತ ಸೈಬರ್ ಅಪರಾಧಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಕಷ್ಟಪಟ್ಟು ಸಂಪಾದಿಸಿದ ಜೀವವಿಮೆಯ ಉಳಿತಾಯ ಹಣವನ್ನು ಸೈಬರ್ ವಂಚಕರಿಂದ ಕಳೆದುಕೊಳ್ಳುತ್ತಿದ್ದಾರೆ. ಸೂಕ್ಷ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವಲ್ಲಿ ಅತ್ಯಂತ ಜಾಗರೂಕತೆಯ ಅಗತ್ಯವಿದೆ ಎಂದು ವರದಿಗಳು ಎಚ್ಚರಿಸುತ್ತಿವೆ.

Insurance frauds on the rise
ವಿಮೆ ವಂಚನೆ ತಡೆಗೆ ಮುಂಜಾಗ್ರತಾ ಕ್ರಮ ಅಗತ್ಯ
author img

By

Published : Nov 21, 2022, 7:43 PM IST

ಹೈದರಾಬಾದ್: ದೇಶಾದ್ಯಂತ ಸೈಬರ್ ಅಪರಾಧಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅನೇಕರು ತಾವು ಕಷ್ಟಪಟ್ಟು ಸಂಪಾದಿಸಿದ ಜೀವವಿಮೆಯ ಉಳಿತಾಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜನರಿಗೆ ವಂಚನೆಯ ಕುರಿತು ಸಾಕಷ್ಟು ಜಾಗೃತಿ ಇಲ್ಲದಿರುವುದು ವಂಚಕರಿಗೆ ವರದಾನವಾಗಿದೆ. ಸೂಕ್ಷ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವಲ್ಲಿ ಅತ್ಯಂತ ಜಾಗರೂಕತೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಿಮಾ ವಂಚನೆಗಳು ಹೆಚ್ಚುತ್ತಿವೆ. ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ವರದಿಗಳು ಎಚ್ಚರಿಸುತ್ತಿವೆ.

ವಿಮಾ ಪಾಲಿಸಿಗಳು ಅನಿರೀಕ್ಷಿತ ತೊಂದರೆಗಳ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕುಟುಂಬಗಳನ್ನು ರಕ್ಷಿಸುತ್ತವೆ. ಬಹಳಷ್ಟು ಜನರು ಜೀವ ವಿಮೆ ಅಥವಾ ಆರೋಗ್ಯ ಅಥವಾ ವಾಹನದ ವಿಮೆಗಳನ್ನು ಮಾಡಿಸಿರುತ್ತಾರೆ. ಸೈಬರ್ ಕಳ್ಳರು ಇದನ್ನೇ ಲಾಭವಾಗಿ ತೆಗೆದುಕೊಂಡು ಸದ್ದಿಲ್ಲದೇ ವಂಚನೆ ಮಾಡುತ್ತಿದ್ದಾರೆ. ಪಾಲಿಸಿದಾರರಿಗೆ ಕರೆ ಮಾಡಿ ನಿಮ್ಮ ಪಾಲಿಸಿಗಳು ರದ್ದುಗೊಳ್ಳುವ ಅಪಾಯದಲ್ಲಿದೆ ಎಂದು ನಂಬಿಸಿ. ನಿಮ್ಮ ಹಣ ಕ್ಲೇಮ್ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ವಂಚನೆ ಮಾಡುತ್ತಿದ್ದಾರೆ.

ಸೈಬರ್ ವಂಚಕರಿಂದ ಎಚ್ಚರಿಕೆ ಅಗತ್ಯ: ಅನೇಕ ಜನರು ವಿಮಾ ಕಂಪನಿಗಳಿಂದಲ್ಲೇ ಇಮೇಲ್ ಮತ್ತು ಎಸ್‌ಎಂಎಸ್ ಸಂದೇಶಗಳು ಬಂದಿವೆ ಎಂದು ನಂಬಿ ಸ್ವೀಕರಿಸುತ್ತಾರೆ. ಉದಾಹರಣೆಗೆ, ಅವರು ಲಿಂಕ್ ಅನ್ನು ಕಳುಹಿಸಿ ನಿಮ್ಮ ಪಾಲಿಸಿ ಸಕ್ರಿಯವಾಗಿರಿಸಲು ತಕ್ಷಣವೇ ಪ್ರೀಮಿಯಂ ಪಾವತಿಸಲು ಪಾಲಿಸಿದಾರರನ್ನು ಕೇಳಬಹುದು.

ಪಾಲಿಸಿ ಅವಧಿ ಮುಗಿಯುವ ಒಂದು ಅಥವಾ ಎರಡು ತಿಂಗಳ ಮೊದಲು ಇಂತಹ ಸಂದೇಶಗಳು ಬರುತ್ತವೆ. ವಿಮಾ ಕಂಪನಿಯು ಯಾವುದೇ ಪಾವತಿಗಳಿಗಾಗಿ ಈ ರೀತಿಯ ಲಿಂಕ್‌ಗಳನ್ನು ಎಂದಿಗೂ ಕಳುಹಿಸುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಅಂತಹ ಸಂದೇಶಗಳನ್ನು ಬಂದಾಗ, ನಾವು ತಕ್ಷಣ ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು.

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿಮಾ ಸಲಹೆಗಾರರಿಂದ ಅಥವಾ ನೇರವಾಗಿ ಸಂಬಂಧಪಟ್ಟ ಕಂಪನಿಯಿಂದ ತೆಗೆದುಕೊಂಡರೆ ಎಲ್ಲ ಪಾಲಿಸಿಗಳು ಹೆಚ್ಚಾಗಿ ಡಿಜಿಟಲ್ ಸ್ವರೂಪದಲ್ಲಿರುತ್ತವೆ. ಆದ್ದರಿಂದ ಡಿಮ್ಯಾಟ್ ಖಾತೆ, ಐಡಿ ಮತ್ತು ಪಾಸ್‌ವರ್ಡ್‌ಗಳ ಬಗ್ಗೆ ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಲವಾದ ಪಾಸ್ ವರ್ಡ್​​​ಗಳನ್ನು ಬಳಸಬೇಕು: ಅನುಮಾನಾಸ್ಪದ ಇಮೇಲ್ ಲಿಂಕ್‌ಗಳು, ಮಾಲ್‌ವೇರ್, ಕೀಲಾಗಿಂಗ್ ಮಾಡುವ ಸಾಫ್ಟ್‌ವೇರ್ ಮತ್ತು ಸ್ಪೈವೇರ್ ವಂಚಕರಿಗೆ ನಿಮ್ಮ ಲಾಗಿನ್ ವಿವರಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ವಿಮಾ ಪಾಲಿಸಿಗಳ ಕುರಿತ ಎಲ್ಲ ವಿವರಗಳನ್ನು ಪಡೆಯಲು ಸಹಾಯ ಮಾಡುತ್ತವೆ. ಉಚಿತ ವೈಫೈ ಬಳಸುವಾಗ ಎಚ್ಚರಿಕೆ ಅಗತ್ಯ. ನಮ್ಮ ಖಾತೆಗಳಿಗೆ ಬಲವಾದ ಪಾಸ್ ವರ್ಡ್ ಗಳನ್ನು ಬಳಸಬೇಕು ಮತ್ತು ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಪಾಸ್​​​ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸಬೇಕು. ಉಚಿತ ವೈಫೈ ಬಳಸಿ ಬ್ಯಾಂಕ್, ಹೂಡಿಕೆ, ವಿಮೆ ಮತ್ತು ಆನ್ಲೈನ್ ವಹಿವಾಟುಗಳನ್ನು ನಡೆಸಬಾರದು.

ಅಧಿಕೃತ ಮಾಹಿತಿಗೆ ಕಂಪನಿಯನ್ನು ಸಂಪರ್ಕಿಸಬೇಕು: ವಂಚಕರು ಪಾಲಿಸಿದಾರರ ಸಂಬಂಧಿಕರಿಗೆ ನೀವು ನಾಮಿನಿಗಳು ಮತ್ತು ಪ್ರಯೋಜನಗಳಿಗೆ ಅರ್ಹರು ಎಂದು ಹೇಳುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಒಟ್ಟು ಕ್ಲೇಮ್ ಮೊತ್ತವನ್ನು ನಗದೀಕರಿಸಲು ಅವರು ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕೇಳುತ್ತಾರೆ. ಸೈಬರ್ ಕಳ್ಳರು ಹೆಚ್ಚಾಗಿ ಒಟ್ಟು ಕ್ಲೈಮ್ ಮೊತ್ತವನ್ನು ಪಡೆಯಲು ಆರಂಭಿಕ ಭಾಗಶಃ ಪಾವತಿಯನ್ನು ಕೇಳುತ್ತಾರೆ.

ವಿಮಾ ಕಂಪನಿಯು ಅಂತಹ ಶುಲ್ಕವನ್ನು ನಾಮಿನಿಗಳಿಗೆ ಎಂದಿಗೂ ಕೇಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ನಾವು ನೇರವಾಗಿ ಸಂಬಂಧಿಸಿದ ಕಂಪನಿಯನ್ನು ಸಂಪರ್ಕಿಸಬೇಕು. ನಂತರ ವಂಚಕರು ಕರೆ ಮಾಡಿ ‘ಮೂರು ವರ್ಷಕ್ಕೆ ಪ್ರೀಮಿಯಂ ಕಟ್ಟಿದರೆ ಸಾಕು, ನಿಮ್ಮ ಹಣ ದುಪ್ಪಟ್ಟಾಗುತ್ತದೆ’ ಎಂಬ ಆಕರ್ಷಕ ಕೂಡುಗೆ ಇದೆ ಎಂದು ಹೇಳುತ್ತಾರೆ.

ಇದನ್ನು ನಂಬದೇ ಯಾವುದೇ ಕೊಡುಗೆಗಳಿಗಾಗಿ ನೇರವಾಗಿ ವಿಮಾ ಕಂಪನಿಯ ಅಧಿಕೃತ ಏಜೆಂಟ್, ಇಲಾಖೆ ಅಥವಾ ಕಸ್ಟಮರ್ ಕೇರ್ ಸೆಂಟರ್ ಅನ್ನು ಸಂಪರ್ಕಿಸಬೇಕು. ಯಾವ ರೀತಿಯ ಪಾಲಿಸಿ, ಅದರ ಅವಧಿ ಮತ್ತು ಪ್ರೀಮಿಯಂ ಅನ್ನು ತೆಗೆದುಕೊಳ್ಳುವ ಮೊದಲು ನಾವು ಅದರ ವಿವರಗಳನ್ನು ತಿಳಿದುಕೊಳ್ಳಬೇಕು. ಇದರಿಂದ ಸೈಬರ್ ವಂಚಕರನ್ನು ದೂರವಿಡಲು ನಮಗೆ ಸಹಾಯ ಮಾಡುತ್ತದೆ. ಯಾವುದೇ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ ಮಾಹಿತಿಯನ್ನು ಪೊಲೀಸರಿಗೆ ರವಾನಿಸುವುದು ಅಥವಾ ಸಂಬಂಧಪಟ್ಟ ಕಂಪನಿಗೆ ಲಿಖಿತವಾಗಿ ದೂರು ಕಳುಹಿಸಬೇಕು.

ಇದನ್ನೂ ಓದಿ:ಬಜೆಟ್‌ ಪೂರ್ವ ತಯಾರಿ: ಹಣಕಾಸು ಸಚಿವರಿಂದ ಸಮಾಲೋಚನೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.