ETV Bharat / business

ಪಿಪಿಎಫ್‌, ಎನ್‌ಎಸ್‌ಇ ಯೋಜನೆಗಳ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಕೆ

author img

By

Published : Apr 1, 2022, 9:36 AM IST

ಪಿಪಿಎಫ್‌, ಎನ್‌ಎಸ್‌ಇ ಹಾಗು ಇತರ ಅಂಚೆ ಕಛೇರಿ ಯೋಜನೆಗಳ ಬಡ್ಡಿ ದರಗಳು ಜೂನ್ 30, 2022 ತ್ರೈಮಾಸಿಕದಲ್ಲಿ ಬದಲಾಗದೆ ಉಳಿಯುತ್ತವೆ.

ppf nsc small savings schemes interest rates announced
ಸಾಂದರ್ಭಿಕ ಚಿತ್ರ

ನವದೆಹಲಿ: ಅಂಚೆ ಕಛೇರಿ ಯೋಜನೆಗಳ ಬಡ್ಡಿ ದರಗಳನ್ನು ಏಪ್ರಿಲ್‌-ಜೂನ್ ತ್ರೈಮಾಸಿಕದ ಕಾಲಾವಧಿಯಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ)ದ ಮೇಲೆ ಮೊದಲ ತ್ರೈಮಾಸಿಕದಲ್ಲಿ ಶೇ. 7.1 ಮತ್ತು ಶೇ 6.8 ವಾರ್ಷಿಕ ಬಡ್ಡಿ ದರವಿದ್ದು, ಎರಡನೇ ತ್ರೈಮಾಸಿಕದಲ್ಲೂ ಇದೇ ದರಗಳು ಮುಂದುವರಿಯಲಿವೆ.

ಎನ್‌ಎಸ್‌ಸಿ, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. 2020-21ರ ಮೊದಲ ತ್ರೈಮಾಸಿಕದಿಂದ ಬಡ್ಡಿ ದರವನ್ನು ಪರಿಷ್ಕರಿಸಲಾಗಿಲ್ಲ. 2022-23ರ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ ಹೆಚ್ಚಿದ್ದ ಕಾರಣ ದರಗಳಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹250 ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.