ಹೈದರಾಬಾದ್: ನಿವೃತ್ತಿಯ ನಂತರ ಹೆಚ್ಚು ಖರ್ಚು ಇರುವುದಿಲ್ಲ ಎಂಬುದು ಸಾಮಾನ್ಯ ಗ್ರಹಿಕೆ. ಅನೇಕ ಜನರು ಈ ರೀತಿಯೇ ಯೋಚಿಸುತ್ತಾರೆ. ಅವರು ಉದ್ಯೋಗ ಅಥವಾ ವ್ಯವಹಾರದಲ್ಲಿದ್ದಾಗ, ಹೆಚ್ಚಿನ ಜನರು ತಮ್ಮ ತಕ್ಷಣದ ಗಳಿಕೆ ಮತ್ತು ಮಾಸಿಕ ವೆಚ್ಚಗಳ ಬಗ್ಗೆ ಮಾತ್ರವೇ ಚಿಂತಿಸುತ್ತಾರೆ.
ಆದರೆ, ಕೆಲವರು ತಮ್ಮ ಮಾಸಿಕ ಆದಾಯವು ಇದ್ದಕ್ಕಿದ್ದಂತೆ ನಿಂತು ಹೋದಾಗ ಅವರಿಗೆ ಯಾವ ರೀತಿಯ ಸಮಸ್ಯೆಗಳು ಕಾಡುತ್ತವೆ ಎಂದು ಮೊದಲೇ ಅಂದಾಜು ಮಾಡುತ್ತಾರೆ. ಮುಂಚಿತವಾಗಿ ಯೋಜಿಸುವ ಅಂತಹ ಜನರು ಮಾತ್ರ ತಮ್ಮ ಮತ್ತು ಅವರ ಸಂಗಾತಿಗಳು ಮತ್ತು ಕುಟುಂಬ ಸದಸ್ಯರೊಂದಿಗೆ ಸುಖಕರ ಜೀವನ ನಡೆಸುತ್ತಾರೆ.
ಪ್ರತಿಯೊಬ್ಬರೂ ತಮ್ಮ 60ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವ ಹೊತ್ತಿಗೆ ಹಣ ಉಳಿತಾಯ ಮಾಡಲು ಮುಂದಿನ ಸುಖಕರ ಜೀವನ ನಡೆಸಲು 35 ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಾರೆ. ತಾಂತ್ರಿಕ ವೈದ್ಯಕೀಯ ಪ್ರಗತಿ ದೃಷ್ಟಿಯಿಂದ, ವ್ಯಕ್ತಿಯ ಸರಾಸರಿ ಜೀವಿತಾವಧಿಯು 90 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿದೆ. ಅಂದರೆ ನಿವೃತ್ತಿಯ ನಂತರದ 30 ವರ್ಷಗಳ ದೀರ್ಘಾವಧಿಯವರೆಗೆ ಅವರು ಮಾಸಿಕ ವೇತನವಿಲ್ಲದೇ ಜೀವನ ನಡೆಸಬೇಕಾಗುತ್ತದೆ.
ಇನ್ನು ನಿರಂತರ ಏರಿಕೆ ಆಗುತ್ತಿರುವ ಹಣದುಬ್ಬರ ಹಿನ್ನೆಲೆಯಲ್ಲಿ ಮುಂದಿನ ಜೀವನಕ್ಕೆ ಹಣ ಕೂಡಿಡುವುದು ತೀರಾ ಮುಖ್ಯವಾಗಿರುತ್ತದೆ. 40 ವರ್ಷ ವಯಸ್ಸಿನವರು 1 ಲಕ್ಷ ರೂಪಾಯಿ ಮಾಸಿಕ ಖರ್ಚು ಮಾಡುತ್ತಿದ್ದರೆ, ಅದು ಅವರು 60 ವರ್ಷ ತಲುಪುವ ವೇಳೆಗೆ ಬೆಲೆ ಏರಿಕೆಯಿಂದಾಗಿ 2.65 ಲಕ್ಷ ರೂ. ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಇನ್ನು 80 ವರ್ಷಕ್ಕೆ 7 ಲಕ್ಷ ಮತ್ತು 90 ವರ್ಷವಾದಾಗ 11.5 ಲಕ್ಷ ರೂ ವೆಚ್ಚವನ್ನು ಮಾಡಬೇಕಾಗುತ್ತದೆ. ಈ ಅಂಕಿ - ಅಂಶಗಳನ್ನು ಗಮನಿಸಿದರೆ 50 ವರ್ಷಗಳ ಅವಧಿಯಲ್ಲಿ 11 ಪಟ್ಟು ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನು ನಂಬುವುದು ಕಷ್ಟ. ಆದರೆ, ಇದು ವಾರ್ಷಿಕ ಶೇ 5ಕ್ಕಿಂತ ಹೆಚ್ಚಿನ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಲಾಗಿದೆ. ನಿಜ ಜೀವನದಲ್ಲಿ ಇಂತಹ ಸಂಗತಿಗಳನ್ನು ನಿವೃತ್ತಿ ಅಂಚಿನಲ್ಲಿರುವವರು ಮರೆಯಲು ಸಾಧ್ಯವಿಲ್ಲ.
ಕಠಿಣ ಗಳಿಕೆಯೊಂದಿಗೆ ಆರಂಭಿಕ ಹೂಡಿಕೆಗಳನ್ನು ಮಾಡುವಂತೆಯೇ ದೀರ್ಘಾವಧಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗುರಿ ಇರಿಸಿಕೊಳ್ಳುವುದು ಮುಖ್ಯವಾಗಿದೆ. ಆಗ ಮಾತ್ರ ನಿಮ್ಮ ಹಣವು ಹಣದುಬ್ಬರದ ಹೊರತಾಗಿಯೂ ಚಕ್ರಬಡ್ಡಿಯ ಪ್ರಭಾವದ ಅಡಿ ನಿರಂತರ ಬೆಳವಣಿಗೆ ದರವನ್ನು ಹೊಂದಿರುತ್ತದೆ. ಉದಾಹರಣೆಗೆ 25 ವರ್ಷದ ವ್ಯಕ್ತಿಯೊಬ್ಬರು ತಿಂಗಳಿಗೆ 10,000 ರೂಗಳನ್ನು 12 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ 60 ವರ್ಷ ಹೂಡಿಕೆ ಮಾಡಿದರೆ, ಅವರ ಕೈಯಲ್ಲಿ 5 ಕೋಟಿ ರೂ. ಸಂಗ್ರಹವಾಗಬಹುದು. ಇನ್ನು ಇದೇ ಹಣಕ್ಕೆ ಪ್ರತಿ ವರ್ಷ ಶೇ 5ರಷ್ಟು ಹೂಡಿಕೆಯನ್ನು ಹೆಚ್ಚಿಸಿಕೊಂಡರೆ. 8 ಕೋಟಿ ರೂ. ಉಳಿತಾಯ ಮಾಡಬಹುದು.
ಇದರಿಂದ ಅವರ ನಿವೃತ್ತಿ ವೇಳೆಗೆ ಹೆಚ್ಚಿನ ಹಣ ಉಳಿತಾಯ ಮಾಡಿ ಸುಂದರ ನಿವೃತ್ತಿ ಬದುಕನ್ನು ನಡೆಸಬಹುದು. ಇದಕ್ಕಾಗಿ ನೀವು ಸ್ಪಷ್ಟ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಆಗ ಮಾತ್ರ ನಿವೃತ್ತ ವ್ಯಕ್ತಿಗೆ ಮಾಸಿಕ ಆದಾಯ ನಿಂತರೂ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಒಬ್ಬರ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯುವ ಮಾರ್ಗಗಳನ್ನು ಅನ್ವೇಷಿಸಬೇಕು.
ಇದನ್ನು ಓದಿ: ಡಾಲರ್ ಎದುರು ರೂಪಾಯಿ ಭಾರೀ ಅಪಮೌಲ್ಯ.. 80.11 ಕ್ಕೆ ಕುಸಿತ.. ಷೇರುಪೇಟೆಗೂ ಬಿಸಿ