60 ವರ್ಷ ಮತ್ತು ಅದರ ಮೇಲ್ಪಟ್ಟವರಿಗಾಗಿ ಪಿಂಚಣಿ ಪಾವತಿಗಾಗಿ ಕೇಂದ್ರ ಸರ್ಕಾರ 2017ರಲ್ಲಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಅಡಿ ಅನೇಕ ಯೋಜನೆಗಳು ಇದ್ದು, ಹೂಡಿಕೆದಾರರಿಗೆ ಹೆಚ್ಚಿನ ಲಾಭ ತರಲಿದೆ. ಈ ಯೋಜನೆಗಳು ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದರ ಜೊತೆಗೆ ನಿವೃತ್ತಿಯ ನಂತರದ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುತ್ತವೆ.
ಭಾರತೀಯ ಜೀವ ವಿಮೆಯಿಂದ (ಎಲ್ಐಸಿ)ಆರಂಭವಾದ ಈ ಯೋಜನೆ ಕುರಿತು ಮಾಹಿತಿ ಇಲ್ಲಿದೆ. ಈ ಯೋಜನೆಗೆ ಹೂಡಿಕೆ ಮಾಡಲು ಮತ್ತು ಸವಲತ್ತುಗಳನ್ನು ಪಡೆಯಲು ಇರುವ ಕಡೆಯ ದಿನಾಂಕ ಮಾರ್ಚ್ 31, 2023 ಆಗಿದೆ. ಈ ಹಿನ್ನೆಲೆ ಈ ಯೋಜನೆಯ ಪ್ರಯೋಜನ ಪಡೆದು, ಇದಕ್ಕೆ ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಬಹುದಾಗಿದೆ.
ಗರಿಷ್ಠ ಹೂಡಿಕೆ : ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಅಡಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಯಕರು ಗರಿಷ್ಠ 15 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮೊತ್ತದ ಮೇಲೆ ವಾರ್ಷಿಕ ಶೇಕಡಾ 7.4 ರ ದರದಲ್ಲಿ ಬಡ್ಡಿ ಲಭ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2023. ಈ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿ 10 ವರ್ಷಗಳವರೆಗೆ ಹೂಡಿಕೆ ಮಾಡಬೇಕಿದೆ. ಅದು ಕೂಡ ಒಂದೇ ಬಾರಿಗೆ ಸಂಪೂರ್ಣ ಹೂಡಿಕೆಯನ್ನು ಮಾಡಬೇಕು.
ಮಾಸಿಕ ಹಣದ ಲಾಭ: ವ್ಯಕ್ತಿಯೊಬ್ಬರ ಹೂಡಿಕೆ ಆಧಾರದ ಮೇಲೆ ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಎಂಬುದು ಅವಲಂಬಿತವಾಗಿದೆ. ಹೂಡಿಕೆ ಅನುಸಾರ ಪ್ರತಿ ತಿಂಗಳು 1000 ರಿಂದ 9,250 ರೂಪಾಯಿಗಳವರೆಗೆ ಪಿಂಚಣಿ ಲಭ್ಯವಿದೆ.
ಹೀಗಿದೆ ಲೆಕ್ಕಾಚಾರ: ಈ ಯೋಜನೆ ಅಡಿ ಕನಿಷ್ಠ 1.50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 1,000 ರೂಪಾಯಿಗಳವರೆಗೆ ಪಿಂಚಣಿ ಮೊತ್ತವನ್ನು ಪಡೆಯಬಹುದು. ಅದೇ ರೀತಿ 15 ಲಕ್ಷದವರೆಗಿನ ಹೂಡಿಕೆಯ ಮೇಲೆ ತಿಂಗಳಿಗೆ 9,250 ರೂಪಾಯಿಗಳ ಪಿಂಚಣಿ ಲಭ್ಯವಿರುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅವರು 30 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಆಗ ಇಬ್ಬರಿಗೂ ತಿಂಗಳಿಗೆ 18,500 ರೂ ಪಡೆಯಬಹುದಾಗಿದೆ. 2018ರಲ್ಲಿ ಸರ್ಕಾರ ಈ ಹೂಡಿಕೆ ಹಣವನ್ನು ಹೆಚ್ಚಳ ಮಾಡಿತು.
ಯೋಜನೆ ಅವಧಿ: ಈ ಯೋಜನೆಗೆ ಹೂಡಿಕೆ ಮಾಡುವವರು ಕನಿಷ್ಠ 60 ವರ್ಷ ಪೂರೈಸಿರಬೇಕಾಗುತ್ತದೆ. ಈ ಪಾಲಿಸಿಯ ಅವಧಿ 10 ವರ್ಷ ಆಗಿದೆ.
ಕನಿಷ್ಠ ಪಿಂಚಣಿ: ತಿಂಗಳಿಗೆ 1000, ತ್ರೈಮಾಸಿಕಕ್ಕೆ 3 ಸಾವಿರ, ಅರ್ಧ ವಾರ್ಷಿಕಕ್ಕೆ 6 ಸಾವಿರ, ವರ್ಷಕ್ಕೆ 12 ಸಾವಿರವನ್ನು ಪಿಂಚಣಿಯಾಗಿ ಪಡೆಯಬಹುದಾಗಿದೆ.
ಗರಿಷ್ಠ ಪಿಂಚಣಿ: ತಿಂಗಳಿಗೆ 9,250, ತ್ರೈಮಾಸಿಕಕ್ಕೆ 27,750, ಅರ್ಧ ವರ್ಷಕ್ಕೆ 55,500, ವರ್ಷಕ್ಕೆ 1,11,000 ರೂವನ್ನು ಪಡೆಯಬಹುದಾಗೊದೆ.
ಗಂಡ-ಹೆಂಡತಿ ಪ್ರತ್ಯೇಕ ಹೂಡಿಕೆ ಮಾಡಿದಾಗ ಪಡೆಯುವ ಗರಿಷ್ಠ ಪಿಂಚಣಿ: ತಿಂಗಳಿಗೆ 18,500, ತ್ರೈಮಾಸಿಕ 55,500, ಅರ್ಧವಾರ್ಷಿಕ 1,11,000 ಮತ್ತು ವಾರ್ಷಿಕ 2,22,000
ಯೋಜನೆ ಇತರೆ ಲಾಭ: ಈ ಯೋಜನೆ ಮಾಡಿಸಲಾಗುವ ಹಿರಿಯ ನಾಯಕರಿಗೆ ಯಾವುದೇ ವೈದ್ಯಕೀಯ ತಪಾಸಣೆ ಇರುವುದಿಲ್ಲ. ಮೂರು ವರ್ಷದ ಪಾಲಿಸಿಗಾಗಿ ಸಾಲವನ್ನು ಕೂಡ ಪಡೆಬಹುದಾಗಿದೆ. ಇದರ ಹೊರತಾಗಿ ಗಂಡ ಮತ್ತು ಹೆಂಡತಿ ಯಾವುದೇ ಸಮಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಹಣವನ್ನು ವಿತ್ಡ್ರಾ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಶೇ 98ರಷ್ಟು ಹಣವನ್ನು ಪಾಲಿಸಿದಾರರಿಗೆ ಹಿಂದಿರುಗಿಸಲಾಗುವುದು. ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿದರೆ, ನಾಮಿನಿಗೆ ಬೇಸಿಕ್ ಹಣವನ್ನು ನೀಡಲಾಗುವುದು.
ಇದನ್ನೂ ಓದಿ: ಮಹಿಳೆಯರೇ ನಿಮ್ಮ ಆರ್ಥಿಕ ಅಗತ್ಯತೆ ಮತ್ತು ಆದ್ಯತೆಗಳ ಬಗ್ಗೆ ಇರಲಿ ಗಮನ