ಹೈದರಾಬಾದ್: ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಶೂನ್ಯ ವೆಚ್ಚದ ಇಎಂಐ ಪ್ರೀಮಿಯಂ ಅನ್ನು ಬಡ್ಡಿದರವಿಲ್ಲದೇ ಖರೀದಿಸುವ ನಿಮ್ಮ ಬಯಕೆಯನ್ನು ಈಡೇರಿಸುತ್ತದೆ. ನೀವು ದುಬಾರಿ ಸ್ಮಾರ್ಟ್ ಟಿವಿ ಅಥವಾ ಪ್ರೀಮಿಯಂ ಮೊಬೈಲ್ ಫೋನ್ ಖರೀದಿಸಲು ಹಣದ ಅಗತ್ಯವಿಲ್ಲ. ಆದರೆ ಈ ಸೇವೆಯ ಅಡಿ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡಲಾಗುವುದಿಲ್ಲ ಎಂಬುದೇ ಸಮಸ್ಯೆ.
ಶೂನ್ಯ ವೆಚ್ಚದ ಇಎಂಐ ಮೂಲಕ ವಸ್ತುಗಳನ್ನು ಖರೀದಿಸುವಾಗ ಅಲ್ಲಿ ಅವರು ವಸ್ತುಗಳ ಮೇಲೆ ರಿಯಾಯಿತಿಗಳನ್ನು ನಿರಾಕರಿಸುತ್ತಾರೆ ಮತ್ತು ಉತ್ಪನ್ನದ ಬೆಲೆಯನ್ನು ಬಡ್ಡಿದರದ ಮೂಲಕ ಸರಿ ಹೊಂದಿಸುತ್ತಾರೆ. ಆಸಕ್ತ ಗ್ರಾಹಕರು ಕಂತುಗಳ ಮೂಲಕ ಪಾವತಿಸುವ ಅನುಕೂಲವನ್ನು ಪರಿಗಣಿಸಿ ಈ ಆಯ್ಕೆಯನ್ನು ಮಾಡಬಹುದು.
ಹಬ್ಬದ ಸೀಸನ್ ಮತ್ತು ವಿಶೇಷ ಸಂದರ್ಭಗಳ ವ್ಯಾಪಾರಗಳಲ್ಲಿ ಸಾಕಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಇದಕ್ಕೆ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವೇಗದ ಗತಿಯಲ್ಲಿ ಡಿಜಿಟಲೈಸ್ಡ್ ಜೀವನವನ್ನು ಹೊಂದಲು ಪ್ರತಿಯೊಬ್ಬರೂ ಹೈಟೆಕ್ ಸರಕುಗಳಿಗೆ ಅಪ್ಗ್ರೇಡ್ ಆಗಲು ಪ್ರಯತ್ನಿಸುತ್ತಿದ್ದಾರೆ.
ಯಾವೆಲ್ಲ ಅಂಶಗಳನ್ನು ನೀವು ತಿಳಿದುಕೊಳ್ಳಬೇಕು: ಮೊದಲಿಗೆ ನಾವು ಕೆಲವನ್ನು ಪಡೆಯಬೇಕಾದರೆ ಕೆಲವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು. ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದಾಗ ಸಾಮಾನ್ಯವಾಗಿ ರಿಯಾಯಿತಿಗಳನ್ನು ನೀಡಲಾಗುತ್ತದೆ. ಶೂನ್ಯ ವೆಚ್ಚದ ಇಎಂಐ ಸೌಲಭ್ಯವನ್ನು ಬಳಸಬೇಕಾದರೆ, ನಾವು ರಿಯಾಯಿತಿಗಳನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
ಉದಾಹರಣೆಗೆ: 5,000 ರೂ ವಸ್ತುವಿಗೆ 10 ಪ್ರತಿಶತ ರಿಯಾಯಿತಿಯಲ್ಲಿ ಮಾರಾಟಕ್ಕಿದ್ದರೆ ನಾವು ಅ ವಸ್ತುವನ್ನು 4,500 ರೂ. ರಿಯಾಯಿತಿಯಲ್ಲಿ ಪಡೆಯಲು ಸಾಧ್ಯವಿಲ್ಲ ಅಥವಾ ಇತರ ಯಾವುದೇ ಪ್ರಯೋಜನವನ್ನು ಶೂನ್ಯ ವೆಚ್ಚದ ಇಎಂಐ ಅಡಿ ನೀಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ನಾವು 20 ಪ್ರತಿಶತದಷ್ಟು ವೆಚ್ಚವನ್ನು ಹೆಚ್ಚುವರಿಯಾಗಿ ಪಾವತಿಸಿದಂತೆ: ಕಂಪನಿಗಳು ಕೆಲವು ರೀತಿಯಲ್ಲಿ ತಮ್ಮ ವೆಚ್ಚವನ್ನು ಮರುಪಡೆಯುತ್ತವೆ. ಉದಾ: ಒಂದು ವಸ್ತುವಿನ ಉತ್ಪಾದನಾ ವೆಚ್ಚ 5,000 ರೂ. ಆಗಿದ್ದರೆ ಅದನ್ನು ಖರೀದಿಸಿದ ವ್ಯಕ್ತಿ ಪ್ರತಿ ತಿಂಗಳೂ 500 ರೂ ನಂತೆ 12 ತಿಂಗಳು ಇಎಂಐ ಪಾವತಿಸಬೇಕಾಗುತ್ತದೆ. ಇದರರ್ಥ ನಾವು 20 ಪ್ರತಿಶತದಷ್ಟು ವೆಚ್ಚವನ್ನು ಹೆಚ್ಚುವರಿಯಾಗಿ ಪಾವತಿಸಿದಂತೆ. ನಮಗೆ 1,000 ರೂ. ಹೆಚ್ಚಾಗಿ 5000 ರೂ ವಸ್ತುವಿನ ಬೆಲೆ ರೂ. 6,000 ರೂ ಆಗುತ್ತದೆ.
ಇದನ್ನೇ ಅವರು ಶೂನ್ಯ ವೆಚ್ಚದ ಇಎಂಐ ಎಂದು ಹೇಳುವುದು. ಅವರು ರಿಯಾಯಿತಿಗಳನ್ನು ನಿರಾಕರಿಸುವ ಮೂಲಕ ಅಥವಾ ಸಂಸ್ಕರಣಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ತಮ್ಮ ನಷ್ಟವನ್ನು ಮರು ಭರ್ತಿ ಮಾಡಿಕೊಳ್ಳುತ್ತಾರೆ.
ಕಂಪನಿಗಳು ಅನುಸರಿಸುವ ಮತ್ತೊಂದು ಮಾರ್ಗ ಎಂದರೆ ಅವರು ಸಾಮಾನ್ಯ ಇಎಂಐ ಖರೀದಿಗಳ ಸಮಯದಲ್ಲಿ ಬಡ್ಡಿ ದರವನ್ನು ಪ್ರತ್ಯೇಕವಾಗಿ ತೋರಿಸುತ್ತಾರೆ. ಆದರೆ, ಶೂನ್ಯ ವೆಚ್ಚದ ಇಎಂಐಗಳಲ್ಲಿ ಯಾವುದೇ ಬಡ್ಡಿಯನ್ನು ಪ್ರತ್ಯೇಕವಾಗಿ ನಮೂದಿಸುವುದಿಲ್ಲ.
ಆದಾಗ್ಯೂ ಅವರು ಉತ್ಪನ್ನದ ವೆಚ್ಚವು ಹೆಚ್ಚು ಕಡಿಮೆ ಒಂದೇ ಆಗಿರುವಂತೆ ಮಾಡುತ್ತಾರೆ. ಶೂನ್ಯ ವೆಚ್ಚದ ಇಎಂಐ ಅಡಿ ತಕ್ಷಣದ ಪ್ರಯೋಜನ ಎಂದರೆ ಗ್ರಾಹಕರು ಒಂದೇ ಬಾರಿಗೆ ಒಟ್ಟು ಮೊತ್ತವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ದುಬಾರಿ ಉತ್ಪನ್ನವನ್ನು ಖರೀದಿಸುವ ಸಮಯದಲ್ಲಿ ಶೂನ್ಯ ವೆಚ್ಚದ ಇಎಂಐ ಉಪಯುಕ್ತ: ಅತ್ಯಂತ ದುಬಾರಿ ಉತ್ಪನ್ನವನ್ನು ಖರೀದಿಸುವ ಸಮಯದಲ್ಲಿ ಶೂನ್ಯ ವೆಚ್ಚದ ಇಎಂಐ ತುಂಬಾ ಉಪಯುಕ್ತವಾಗಿದೆ, ಇದಕ್ಕಾಗಿ ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಕ್ರೋಡಿಕರಿಸಲು ಸಾಧ್ಯವಾಗದಿರಬಹುದು ಅ ಸಮಯದಲ್ಲಿ ಇದರಿಂದ ಅನುಕೂಲವಾಗಲಿದೆ. ಇದಲ್ಲದೆ ಇ-ಕಾಮರ್ಸ್ ಸಂಸ್ಥೆಗಳು ಮತ್ತು ವ್ಯಾಪಾರಿಗಳು ಇಂತಹ ಖರೀದಿಗಳನ್ನು ನಿರ್ದಿಷ್ಟ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದರೆ ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ. ಈ ಸೌಲಭ್ಯಗಳ ಅಡಿಯಲ್ಲಿ ಗರಿಷ್ಠ ಲಾಭ ಪಡೆಯಲು ಈ ಎಲ್ಲ ಅಂಶಗಳನ್ನು ತಿಳಿಯಬೇಕಾಗುತ್ತದೆ.
ಕಂತು ಪಾವತಿಗಳಿಗೆ ಸಂಬಂಧಿಸಿದ ನಿಯಮಗಳು ಶೂನ್ಯ ವೆಚ್ಚದ ಇಎಂಐ ಖರೀದಿಗಳಿಗೂ ಅನ್ವಯಿಸುತ್ತವೆ. ಯಾವುದೇ ಡಿಫಾಲ್ಟ್‌ಗಳು ಕ್ರೆಡಿಟ್ ಸ್ಕೋರ್‌ನಲ್ಲಿ ಕೆಟ್ಟದಾಗಿ ಪ್ರತಿಫಲಿಸುತ್ತಿದ್ದರೆ, ಒಂದು ಅಥವಾ ಹೆಚ್ಚಿನ ಕಂತುಗಳು ಬಾಕಿ ಇರುವಾಗ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಬೇಕಾಗುತ್ತದೆ.
ಯಾವುದೇ ವೆಚ್ಚದ ಇಎಂಐ ಕೊಡುಗೆಗಳ ಅಡಿ ನೀವು ಮುಂಗಡ ಪಾವತಿಗಳನ್ನು ಅಥವಾ ತಡವಾಗಿ ಪಾವತಿಯ ದಂಡಗಳನ್ನು ನಿಕಟವಾಗಿ ಪರಿಶೀಲಿಸಬೇಕು. ಎಲ್ಲವೂ ನಿಮ್ಮ ಅಗತ್ಯಗಳಿಗೆ ಸರಿಹೊಂದಿದಾಗ ಮಾತ್ರ ಶೂನ್ಯ ವೆಚ್ಚದ ಇಎಂಐ ಖರೀದಿಗೆ ಮುಂದಾಗಬೇಕು. ಇಲ್ಲದಿದ್ದರೆ ಆ ಸಾಹಸಕ್ಕೆ ಕೈ ಹಾಕಬೇಡಿ.
ನೀವು ರೆಫ್ರಿಜರೇಟರ್, ವಾಷಿಂಗ್ಮಷಿನ್ ಅಥವಾ ಯಾವುದೇ ಉಪಕರಣವನ್ನು ಶೂನ್ಯ ವೆಚ್ಚದ ಇಎಂಐ ನಲ್ಲಿ ಖರೀದಿಸಬಹುದು ( ಮಾಸಿಕ ಕಂತುಗಳಲ್ಲಿ). ಕಂಪನಿಗಳು ಮತ್ತು ಆನ್‌ಲೈನ್ ವಾಣಿಜ್ಯ ಸಂಸ್ಥೆಗಳು ಎಲ್ಲ ರೀತಿಯ ಗ್ರಾಹಕ ವಸ್ತುಗಳ ಮೇಲೆ ಈ ಸೌಲಭ್ಯವನ್ನು ನೀಡುತ್ತಿವೆ.
ನಿಮ್ಮ ಬಳಿ ನಗದು ಇರಲಿ ಅಥವಾ ಇಲ್ಲದಿರಲಿ ಯಾವುದೇ ವಸ್ತುಗಳನ್ನು ಕೇವಲ ಒಂದು ಬಟನ್ ಕ್ಲಿಕ್‌ನಲ್ಲಿ ಖರೀದಿಸಬಹುದು.
ಇದನ್ನೂ ಓದಿ:ಆನ್ಲೈನ್ನಲ್ಲಿ ಪಡೆಯುವ ಸಣ್ಣ ಸಾಲ ದೊಡ್ಡ ಸಮಸ್ಯೆಗೆ ಕಾರಣವಾದೀತು, ಎಚ್ಚರ!