ETV Bharat / business

Sensex 67,571 - Nifty 19,979: ಷೇರು ಮಾರುಕಟ್ಟೆ ಹೊಸ ದಾಖಲೆ - ಬಿಎಸ್‌ಇ ಮಿಡ್‌ಕ್ಯಾಪ್ ತನ್ನ ಹೊಸ ದಾಖಲೆಯ ಗರಿಷ್ಠ

ಭಾರತೀಯ ಷೇರು ಮಾರುಕಟ್ಟೆ ತನ್ನ ಏರುಗತಿಯ ಪಯಣವನ್ನು ಇಂದೂ ಮುಂದುವರಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಈವರೆಗಿನ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.​

Sensex, Nifty scale new heights
Sensex, Nifty scale new heights
author img

By

Published : Jul 20, 2023, 4:55 PM IST

ಮುಂಬೈ : ಬಿಎಸ್​ಇ ಸೆನ್ಸೆಕ್ಸ್ ಹಿಂದಿನ ದಿನದ ಮುಕ್ತಾಯ 67,097.44ಕ್ಕೆ ಹೋಲಿಸಿದರೆ ಗುರುವಾರ 23 ಪಾಯಿಂಟ್‌ಗಳ ಇಳಿಕೆಯೊಂದಿಗೆ 67,074.34 ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ವಹಿವಾಟಿನ ಅಂತಿಮ ಗಂಟೆಯಲ್ಲಿ ಸೂಚ್ಯಂಕವು ಉತ್ತಮ ಖರೀದಿಗೆ ಸಾಕ್ಷಿಯಾಯಿತು. ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ತನ್ನ ಹೊಸ ದಾಖಲೆಯ ಗರಿಷ್ಠ 67,619.17 ಅನ್ನು ತಲುಪಿತು ಮತ್ತು ನಿಫ್ಟಿ ಕೂಡ ತನ್ನ ಹೊಸ ದಾಖಲೆಯ ಗರಿಷ್ಠ 19,991.85 ಮಟ್ಟವನ್ನು ಮುಟ್ಟಿತು.

ಸೆನ್ಸೆಕ್ಸ್ ಅಂತಿಮವಾಗಿ 474 ಪಾಯಿಂಟ್‌ ಅಥವಾ ಶೇಕಡಾ 0.71 ರಷ್ಟು ಏರಿಕೆಯಾಗಿ 67,571.90 ಕ್ಕೆ ಕೊನೆಗೊಂಡರೆ, ನಿಫ್ಟಿ 146 ಪಾಯಿಂಟ್‌ ಅಥವಾ 0.74 ರಷ್ಟು ಏರಿಕೆಯಾಗಿ 19,979.15 ಕ್ಕೆ ದಿನವನ್ನು ಮುಕ್ತಾಯಗೊಳಿಸಿತು. ಇದು ಎರಡೂ ಸೂಚ್ಯಂಕಗಳ ಗರಿಷ್ಠ ಮುಕ್ತಾಯದ ಮಟ್ಟವಾಗಿದೆ. ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೆನ್ಸೆಕ್ಸ್ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದವು. ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಕುಸಿತ ಕಂಡವು.

ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ತನ್ನ ಹೊಸ ದಾಖಲೆಯ ಗರಿಷ್ಠವಾದ 29,671.6 ಮಟ್ಟ ತಲುಪಿತು. ಆದರೆ, ಕೊನೆಗೆ ಒಂದಿಷ್ಟು ಇಳಿಕೆಯಾಯಿತು. ದಿನದ ವಹಿವಾಟಿನ ಅಂತ್ಯದಲ್ಲಿ ಮಿಡ್​ಕ್ಯಾಪ್ 0.05 ರಷ್ಟು ಏರಿಕೆಯಾಗಿ 29,623.67 ಕ್ಕೆ ಕೊನೆಗೊಂಡಿತು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ತನ್ನ ಹೊಸ ದಾಖಲೆಯ ಗರಿಷ್ಠವಾದ 34,193.74 ಅನ್ನು ವಹಿವಾಟಿನ ಅವಧಿಯಲ್ಲಿ ಮುಟ್ಟಿತ್ತು. ಕೊನೆಗೆ 0.19 ರಷ್ಟು ಹೆಚ್ಚಾಗಿ 34,101.53 ಕ್ಕೆ ಕೊನೆಗೊಂಡಿತು.

ಐಟಿಸಿ, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಅಶೋಕ್ ಲೇಲ್ಯಾಂಡ್, ಡಾ ರೆಡ್ಡೀಸ್ ಲ್ಯಾಬ್ಸ್, ಲುಪಿನ್ ಮತ್ತು ಟಾಟಾ ಮೋಟಾರ್ಸ್ - ಡಿವಿಆರ್ ಸೇರಿದಂತೆ 230 ಸ್ಟಾಕ್‌ಗಳು ಬಿಎಸ್‌ಇ ಇಂಟ್ರಾಡೇ ವಹಿವಾಟಿನಲ್ಲಿ ತಮ್ಮ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಬೇಡಿಕೆ ಕಡಿಮೆಯಾಗುವ ನಿರೀಕ್ಷೆಯಿಂದ ಕಚ್ಚಾ ತೈಲವು ಕಡಿಮೆ ಲಾಭಗಳೊಂದಿಗೆ ವಹಿವಾಟು ನಡೆಸಿತು. ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್‌ಗೆ $79.5 ರಲ್ಲಿ ವಹಿವಾಟು ನಡೆಸಿತು.

ನಿಫ್ಟಿ ಸೂಚ್ಯಂಕದಲ್ಲಿ ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಅತ್ಯಧಿಕ ಲಾಭ ಗಳಿಸಿವೆ. ಹಾಗೆಯೇ ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಸೂಚ್ಯಂಕದಲ್ಲಿ ಇಳಿಕೆ ಕಂಡವು. ನಿಫ್ಟಿ ಸೂಚ್ಯಂಕದಲ್ಲಿ 38 ಷೇರುಗಳು ಏರಿಕೆಯಲ್ಲಿ ಮತ್ತು 12 ಷೇರುಗಳು ನಷ್ಟದಲ್ಲಿ ಕೊನೆಗೊಂಡವು.

ವಲಯ ಸೂಚ್ಯಂಕಗಳ ವಹಿವಾಟು: ನಿಫ್ಟಿ ಐಟಿ (ಶೇ 0.66 ರಷ್ಟು ಇಳಿಕೆ) ಮತ್ತು ಕನ್ಸ್ಯೂಮರ್ ಡ್ಯೂರೇಬಲ್ಸ್ (ಶೇ 0.18 ರಷ್ಟು ಇಳಿಕೆ) ಹೊರತುಪಡಿಸಿ, ಎಲ್ಲಾ ವಲಯದ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡಿವೆ. ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಫಾರ್ಮಾ ಮತ್ತು ಹೆಲ್ತ್‌ಕೇರ್ ಸೂಚ್ಯಂಕಗಳು ತಲಾ ಶೇ 1 ಕ್ಕಿಂತ ಹೆಚ್ಚು ಗಳಿಸಿಕೊಂಡಿವೆ.

ಇದನ್ನೂ ಓದಿ : 'ಅದೊಂದು ದುರುದ್ಧೇಶದ ಪ್ರಯತ್ನವಾಗಿತ್ತು': ಹಿಂಡೆನ್​ಬರ್ಗ್ ವರದಿಯ ಬಗ್ಗೆ ಗೌತಮ್ ಅದಾನಿ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.