ETV Bharat / business

ನಾಸ್ಕಾಮ್ ಚೇರಮನ್​ರಾಗಿ ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ನೇಮಕ

ನಾಸ್ಕಾಮ್​ನ ಹೊಸ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೈಕ್ರೋಸಾಫ್ಟ್ ಇಂಡಿಯಾದ ಅಧ್ಯಕ್ಷ ಅನಂತ್ ಮಹೇಶ್ವರಿ ಅವರನ್ನು ಹೊಸ ಚೇರಮನ್​ರಾಗಿ ನೇಮಿಸಲಾಗಿದೆ.

Nasscom appoints Microsoft India President Anant Maheshwari as Chairperson

author img

By

Published : Apr 25, 2023, 6:38 PM IST

ನವದೆಹಲಿ : ಮೈಕ್ರೋಸಾಫ್ಟ್ ಇಂಡಿಯಾದ ಅಧ್ಯಕ್ಷ ಅನಂತ್ ಮಹೇಶ್ವರಿ ಅವರನ್ನು 2023-24 ನೇ ಸಾಲಿಗೆ ಐಟಿ ಉದ್ಯಮದ ಅತ್ಯುನ್ನತ ವಾಣಿಜ್ಯ ಒಕ್ಕೂಟವಾಗಿರುವ ನಾಸ್ಕಾಮ್​ ಚೇರಮನ್​​ರನ್ನಾಗಿ ನೇಮಿಸಲಾಗಿದೆ. ಇದೇ ಅವಧಿಗೆ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೇಶ್ ನಂಬಿಯಾರ್ ಅವರನ್ನು ವೈಸ್​ ಚೇರಮನ್ ಆಗಿ ನೇಮಕ ಮಾಡಿರುವುದಾಗಿ ನಾಸ್ಕಾಮ್ ಪ್ರಕಟಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ವ್ಯಾಪಾರ ಮತ್ತು ತಂತ್ರಜ್ಞಾನ ಸೇವೆಗಳ ಅಧ್ಯಕ್ಷ ಕೃಷ್ಣನ್ ರಾಮಾನುಜಂ ಈ ಮುನ್ನ ನಾಸ್ಕಾಮ್ ಚೇರಮನ್ ಆಗಿದ್ದರು. ಇವರ ನಂತರ ಮಹೇಶ್ವರಿ ಈ ಸ್ಥಾನ ವಹಿಸಿಕೊಳ್ಳಲಿದ್ದಾರೆ. ಅನಂತ್ ಮಹೇಶ್ವರಿ ಇದಕ್ಕೂ ಮುನ್ನ ನಾಸ್ಕಾಮ್​ನ ವೈಸ್ ಚೇರಮನ್ ಆಗಿದ್ದರು. ಇದೇ ಸಂದರ್ಭದಲ್ಲಿ ನಾಸ್ಕಾಮ್ 2023-2025 ರ ಸಾಲಿಗೆ ತನ್ನ ಹೊಸ ಕಾರ್ಯಕಾರಿ ಮಂಡಳಿಯನ್ನು ಸಹ ಘೋಷಿಸಿದೆ.

ತಂತ್ರಜ್ಞಾನ ಸೇವೆಗಳಲ್ಲಿ ಪ್ರಮುಖ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ, ಭಾರತವು ಈಗ ವಿಶ್ವಕ್ಕೆ ವಿಶಾಲವಾದ ತಂತ್ರಜ್ಞಾನ ನಾಯಕತ್ವವನ್ನು ಪ್ರದರ್ಶಿಸುತ್ತಿದೆ. ದೇಶವು ವಿಶ್ವಾಸಾರ್ಹ ನಾವೀನ್ಯತೆ ಸಾಮರ್ಥ್ಯಗಳಲ್ಲಿ ಮತ್ತು ಬಿಲಿಯನ್ ಜನಸಂಖ್ಯೆಯ ಪ್ರಮಾಣದ ಅನುಷ್ಠಾನದೊಂದಿಗೆ ಡಿಜಿಟಲ್ ಸಾರ್ವಜನಿಕ ವೇದಿಕೆಗಳ ಪ್ರಮುಖ ಉದಾಹರಣೆಯಾಗಿದೆ ಎಂದು ಮಹೇಶ್ವರಿ ಹೇಳಿದರು. ಭಾರತವನ್ನು ವಿಶ್ವಕ್ಕೆ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಮುಂದುವರಿಯಲು ಅದರ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು. ಹೊಸ ತಂತ್ರಜ್ಞಾನದ ಅದ್ಭುತ ಸಾಮರ್ಥ್ಯಗಳೊಂದಿಗೆ ನಾವು ಮುಂದಿನ ಡಿಜಿಟಲ್ ಯುಗವನ್ನು ಪ್ರವೇಶಿಸಲಿದ್ದೇವೆ. ಇಂಥ ಸಂದರ್ಭದಲ್ಲಿ ಅನಂತ ಹಾಗೂ ರಾಜೇಶ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೊಸದಾಗಿ ನೇಮಕವಾದ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದರು.

NASSCOM ಎಂಬುದು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಆ್ಯಂಡ್​ ಸರ್ವೀಸಸ್ ಕಂಪನೀಸ್​ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಇದು ಭಾರತೀಯ IT ಮತ್ತು BPO ಉದ್ಯಮದ ವ್ಯಾಪಾರ ಸಂಘಟನೆಯಾಗಿದೆ. ಇದರ ಸದಸ್ಯ ಕಂಪನಿಗಳು ಮುಖ್ಯವಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಸೇವೆಗಳು ಮತ್ತು IT- ಎನೆಬಲ್ಡ್​/ BPO ಸೇವೆಗಳೊಂದಿಗೆ ವ್ಯವಹರಿಸುತ್ತವೆ. ಇದು ಭಾರತದ GDP, ಉದ್ಯೋಗ, ಮೂಲಸೌಕರ್ಯ ಮತ್ತು ಜಾಗತಿಕ ಪ್ರತಿಷ್ಠೆಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಇದು 1988 ರಲ್ಲಿ ಸ್ಥಾಪಿತವಾದ ಲಾಭರಹಿತ ಸಂಸ್ಥೆಯಾಗಿದೆ ಮತ್ತು ನವದೆಹಲಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.

ಇಂದು ಉದ್ಯಮದ ಆದಾಯದ ಶೇಕಡಾ 90 ರಷ್ಟಿರುವ NASCOMM ನ ಸುಮಾರು 2200+ ಸದಸ್ಯರಿದ್ದಾರೆ. ಸುಮಾರು 300 ಸದಸ್ಯರು ಯುರೋಪಿಯನ್ ಯೂನಿಯನ್, USA, UK, ಜಪಾನ್ ಮತ್ತು ಚೀನಾದಂತಹ ಇತರ ದೇಶಗಳ ಕಂಪನಿಗಳಾಗಿವೆ. ಇದು ಜಾಗತಿಕ ಶಕ್ತಿ ಕೇಂದ್ರದ ಖ್ಯಾತಿಯನ್ನು ಹೊಂದಿದೆ. ಅಭಿವೃದ್ಧಿಶೀಲ ಕಂಪನಿಗಳಿಗೆ ನೆಟ್‌ವರ್ಕ್ ಸ್ಥಾಪಿಸಲು ಮತ್ತು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸಲು ನಾಸ್ಕಾಮ್ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ನಾಸ್ಕಾಮ್ ಆಯೋಜಿಸುವ ಕೆಲವು ಜನಪ್ರಿಯ ಕಾರ್ಯಕ್ರಮಗಳು ಹೀಗಿವೆ: ನಾಸ್ಕಾಮ್ ಎಮರ್ಜ್ 50, ನಾಸ್ಕಾಮ್ ಪ್ರಾಡಕ್ಟ್​ ಕಾನ್​ಕ್ಲೇವ್, ಎಂಜಿನಿಯರಿಂಗ್ ಶೃಂಗಸಭೆಗಳು, ಜಾಗತಿಕ ಆಂತರಿಕ ಕೇಂದ್ರಗಳ ಶೃಂಗಸಭೆ, ಬಿಗ್ ಡೇಟಾ ಅನಾಲಿಟಿಕ್ಸ್ ಶೃಂಗಸಭೆ, ವೈವಿಧ್ಯತೆ ಮತ್ತು ಸೇರ್ಪಡೆ ಶೃಂಗಸಭೆ.

ಇದನ್ನೂ ಓದಿ : ಅಮೆರಿಕದಲ್ಲಿ ಬೃಹತ್ ಬ್ಯಾಟರಿ ಕಾರ್ಖಾನೆ ಆರಂಭಿಸಲಿದೆ ಹ್ಯುಂಡೈ ಮೋಟಾರ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.