ನವದೆಹಲಿ: ಕನಿಷ್ಠ ವೆಚ್ಚದಲ್ಲಿ ಮೂಲ ಅಗತ್ಯಗಳನ್ನು ಸುಲಭವಾಗಿ ಪೂರೈಸುವ, ಅಗತ್ಯ ಇರುವವರಿಗೆ ಪರಿಹಾರ ಒದಗಿಸುವ ಮತ್ತು ಅವರ ಭವಿಷ್ಯವನ್ನು ಭದ್ರಪಡಿಸುವ ಉದ್ದೇಶದಿಂದ ಸರ್ಕಾರವು ಹಲವಾರು ಯೋಜನೆಗಳನ್ನು ಮುನ್ನೆಲೆಗೆ ತಂದಿದೆ. ಈ ಯೋಜನೆಗಳ ಮೂಲಕ ರೈತರು, ಬಡವರು ಮತ್ತು ಜನಸಾಮಾನ್ಯರು ಸಾಲ, ಪಿಂಚಣಿಯಿಂದ ಹಿಡಿದು ಉತ್ತಮ ಆರೋಗ್ಯದವರೆಗೆ ಎಲ್ಲವನ್ನೂ ಪಡೆಯಬಹುದು. ಇದರಲ್ಲಿ ಮುದ್ರಾ ಯೋಜನೆ ಪರಿಣಾಮಕಾರಿಯಾಗಿ ಬೆಳೆಯುತ್ತಿದೆ.
![40 cr loans sanctioned under MUDRA scheme loans sanctioned under MUDRA scheme in last 8 yrs MUDRA scheme start 8 year ago ಮುದ್ರಾ ಯೋಜನೆಗೆ 8 ವರ್ಷ 41 ಕೋಟಿ ಕಿರು ಉದ್ಯಮಿಗಳಿಗೆ 23 ಲಕ್ಷ ಕೋಟಿ ಸಾಲ ಮಂಜೂರು ಮುದ್ರಾ ಯೋಜನೆಯಡಿ ಸುಮಾರು 41 ಕೋಟಿ ಕಿರು ಉದ್ಯಮಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮಹಿಳೆಯರೇ ಸ್ಟ್ರಾಂಗ್ ಗುರು](https://etvbharatimages.akamaized.net/etvbharat/prod-images/87b43b99268b7c6b54c694e79247b365_0804newsroom_1680925714_59.jpg)
ಪ್ರಧಾನ ಮಂತ್ರಿ ಮುದ್ರಾ ಯೋಜನೆ: ಸ್ವಂತ ಉದ್ದಿಮೆ ಆರಂಭಿಸಲು ಇಚ್ಛಿಸುವ, ಹಣದ ಸಮಸ್ಯೆಯಿಂದ ಸಾಧ್ಯವಾಗದೇ ಇರುವ ಯುವಕರಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಸಾಕಷ್ಟು ಕೆಲಸ ಮಾಡಿದೆ. ಈ ಯೋಜನೆ 3 ವಿಭಾಗಗಳಲ್ಲಿ ಸಾಲ ನೀಡಲಾಗ್ತಿದ್ದು, ಗರಿಷ್ಠ 10 ಲಕ್ಷ ರೂ.ಗಳ ಸಾಲವನ್ನು ಪಡೆಯಬಹುದಾಗಿದೆ.
2015ರಲ್ಲಿ ಪ್ರಾರಂಭಗೊಂಡ ಮುದ್ರಾ ಯೋಜನೆ: ಎಂಟು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿ 40.82 ಕೋಟಿಗೂ ಹೆಚ್ಚು ಕಿರು ಉದ್ಯಮಿಗಳ ಸಾಲದ ಖಾತೆಗಳಿಗೆ 23.2 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
41 ಕೋಟಿ ಕಿರು ಉದ್ಯಮಿಗಳಿಗೆ ಸಾಲ ಮಂಜೂರು: ಈ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 8 ಏಪ್ರಿಲ್ 2015 ರಂದು ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಮಾರ್ಚ್ 24, 2023 ರ ಹೊತ್ತಿಗೆ 40.82 ಕೋಟಿ ಸಾಲ ಖಾತೆಗಳಿಗೆ ಸುಮಾರು 23.2 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
‘ಮಹಿಳೆಯರೇ ಸ್ಟ್ರಾಂಗ್ ಗುರು’: ಮುದ್ರಾ ಯೋಜನೆಯಡಿಯಲ್ಲಿ ಸುಮಾರು 68 ಶೇಕಡಾ ಖಾತೆಗಳು ಮಹಿಳಾ ಉದ್ಯಮಿಗಳಿಗೆ ಸೇರಿವೆ ಮತ್ತು 51 ಪ್ರತಿಶತ ಖಾತೆಗಳು SC, ST ಮತ್ತು OBC ವರ್ಗಗಳ ಉದ್ಯಮಿಗಳಿಗೆ ಸೇರಿವೆ. ಇದು ದೇಶದ ಉದಯೋನ್ಮುಖ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸಿಗುವ ಯೋಜನೆಯಾಗಿದೆ. ಅಷ್ಟೇ ಅಲ್ಲ ತಲಾ ಆದಾಯದಲ್ಲಿ ನಿರಂತರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತೋರಿಸುತ್ತದೆ ಅಂತಾ ಹೇಳಿದರು.
ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ: ಮುದ್ರಾ ಯೋಜನೆಯು ತಳಮಟ್ಟದಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ. ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸುವ ಜೊತೆಗೆ ಮುದ್ರಾ ಯೋಜನೆ ಗೇಮ್ ಚೇಂಜರ್ ಆಗಿ ಹೊರ ಹೊಮ್ಮುತ್ತಿದೆ. ಕಾರ್ಪೊರೇಟರೇತರ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮ ವಲಯಕ್ಕೆ ಪುಷ್ಟಿ ನೀಡಲು ಅರ್ಹ ವ್ಯಕ್ತಿಗಳಿಗೆ ಪಿಎಂ ಮುದ್ರಾ ಯೋಜನೆ ಅಡಿ 10 ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯುತ್ತದೆ. ಹೀಗಾಗಿ ಇಲ್ಲಿಯವರೆಗೆ ಸುಮಾರು 40.82 ಕೋಟಿ ಉದ್ಯೋಗಸ್ಥರು ಈ ಸಾಲವನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಕೇಂದ್ರ ಯಾವ ರೀತಿ ಸಾಲ ನೀಡುತ್ತೆ ಗೊತ್ತಾ?: ಕೇಂದ್ರ ಸರ್ಕಾರ ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ಸಾಲ ನೀಡುವುದಿಲ್ಲ. ಅಂದರೆ PMMY ಅಡಿಯಲ್ಲಿ ಸದಸ್ಯ ಸಾಲ ಸಂಸ್ಥೆಗಳು (MLI ಗಳು), ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (NBFC ಗಳು), ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI ಗಳು) ಮತ್ತು ಇತರ ಹಣಕಾಸು ಮಧ್ಯವರ್ತಿಗಳಿಂದ ಸಾಲಗಳನ್ನು ಒದಗಿಸಲಾಗುತ್ತದೆ.
ಓದಿ: ಜನಸಾಮಾನ್ಯರ ಮುದ್ರಾ ಸಾಲ ಯೋಜನೆಯಲ್ಲಿ 17,251 ಕೋಟಿ ರೂ. ಬ್ಯಾಡ್ ಲೋನ್..!