ETV Bharat / business

ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 6.7ಕ್ಕೆ ಹೆಚ್ಚಿಸಿದ ಮೂಡೀಸ್ ಇನ್ವೆಸ್ಟರ್ಸ್

ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಪರಿಷ್ಕರಿಸಿದ್ದು, ಇದನ್ನು ಶೇಕಡಾ 5.5 ರಿಂದ 6.7 ಕ್ಕೆ ಹೆಚ್ಚಿಸಿದೆ.

Moodys Investors raises Indias GDP growth forecast

author img

By ETV Bharat Karnataka Team

Published : Sep 1, 2023, 1:27 PM IST

ನವದೆಹಲಿ: ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಶುಕ್ರವಾರ 2023ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 6.7ಕ್ಕೆ ಏರಿಸಿದೆ. "ಸೇವೆಗಳ ವಿಸ್ತರಣೆಯಲ್ಲಿನ ಹೆಚ್ಚಳ ಮತ್ತು ಬಂಡವಾಳ ವೆಚ್ಚಗಳ ಕಾರಣದಿಂದ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ನೈಜ ಜಿಡಿಪಿ ಬೆಳವಣಿಗೆಯು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 7.8 ಕ್ಕೆ ಏರಿಕೆಯಾಗಿದೆ. ಅದರಂತೆ ನಾವು ಭಾರತದ 2023 ಕ್ಯಾಲೆಂಡರ್ ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 5.5 ರಿಂದ 6.7 ಕ್ಕೆ ಹೆಚ್ಚಿಸಿದ್ದೇವೆ" ಎಂದು ಮೂಡೀಸ್ ತನ್ನ ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್​ನಲ್ಲಿ ತಿಳಿಸಿದೆ.

"ದೃಢವಾದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ, ಭಾರತದ ಆರ್ಥಿಕ ಬೆಳವಣಿಗೆಯ ಕಾರ್ಯಕ್ಷಮತೆಗೆ ಮೇಲ್ಮಟ್ಟದಲ್ಲಿ ಮತ್ತಷ್ಟು ಅಪಾಯವಿರುವುದನ್ನು ನಾವು ಗುರುತಿಸಿದ್ದೇವೆ. ಎರಡನೇ ತ್ರೈಮಾಸಿಕದ ಕಾರ್ಯಕ್ಷಮತೆಯು 2023 ರಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದರಿಂದ, 2024 ರ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.5 ರಿಂದ 6.1 ಕ್ಕೆ ಇಳಿಸಿದ್ದೇವೆ" ಎಂದು ಮೂಡೀಸ್ ಹೇಳಿದೆ.

ಜೂನ್​ನಿಂದ ಅಕ್ಟೋಬರ್​ವರೆಗೆ ಮುಂದುವರಿಯುವ ಭಾರತದ ಮಾನ್ಸೂನ್ ಋತುವಿನಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಬಹುದು. ಇದರ ಪರಿಣಾಮದಿಂದ ಆಹಾರ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ಪ್ರಸ್ತುತ ಆಗಸ್ಟ್ 29 ರವರೆಗೆ ಭಾರತೀಯ ಹವಾಮಾನ ಇಲಾಖೆ ದೇಶಾದ್ಯಂತ ಶೇಕಡಾ 9 ರಷ್ಟು ಮಳೆ ಕೊರತೆಯಾಗಿರುವುದನ್ನು ಅಂದಾಜಿಸಿದೆ. ಈ ವರ್ಷ ಎಲ್ ನಿನೊ ವಿಶೇಷವಾಗಿ 2023 ರ ದ್ವಿತೀಯಾರ್ಧ ಮತ್ತು 2024 ರ ಆರಂಭದಲ್ಲಿ ಪ್ರಬಲವಾಗಿದ್ದರೆ ಕೃಷಿ ಸರಕುಗಳ ಬೆಲೆಗಳು ಹೆಚ್ಚಾಗಬಹುದು ಎಂದು ಮೂಡೀಸ್ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಆಗಸ್ಟ್​ನಲ್ಲಿ ಸತತ ಮೂರನೇ ಬಾರಿಗೆ ರೆಪೊ ದರವನ್ನು ಬದಲಾಯಿಸದೇ ಉಳಿಸಿಕೊಂಡಿದೆ. ಆಹಾರ ಬೆಲೆ ಹಣದುಬ್ಬರದಲ್ಲಿ ಇತ್ತೀಚಿನ ಏರಿಕೆ ಮತ್ತು ಅನಿಶ್ಚಿತ ಎಲ್ ನಿನೊ ಸಂಬಂಧಿತ ಹವಾಮಾನ ಪರಿಸ್ಥಿತಿಗಳು ಮುಂದಿನ ವರ್ಷದ ಆರಂಭದಲ್ಲಿ ವಿತ್ತೀಯ ನೀತಿಗಳನ್ನು ಸರಾಗಗೊಳಿಸುವ ಪರಿಗಣನೆಯನ್ನು ವಿಳಂಬಗೊಳಿಸಲಿವೆ.

"ಭಾರತದಲ್ಲಿ ದೇಶೀಯ ಬೇಡಿಕೆಯು ಉತ್ತೇಜನದಿಂದ ಕೂಡಿರುತ್ತದೆ ಮತ್ತು ಪ್ರಮುಖ ಹಣದುಬ್ಬರವು ತುಲನಾತ್ಮಕವಾಗಿ ಸ್ಥಿರವಾಗಿರುವವರೆಗೆ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆಗಳಿಲ್ಲ" ಎಂದು ಮೂಡೀಸ್ ತನ್ನ ವರದಿಯಲ್ಲಿ ಹೇಳಿದೆ.

ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ದೇಶದ ಗಡಿಯೊಳಗೆ ಉತ್ಪಾದಿಸಲಾದ ಎಲ್ಲಾ ಸಿದ್ಧ ಸರಕುಗಳು ಮತ್ತು ಸೇವೆಗಳ ಒಟ್ಟು ವಿತ್ತೀಯ ಅಥವಾ ಮಾರುಕಟ್ಟೆ ಮೌಲ್ಯವನ್ನು ಆ ದೇಶದ ಒಟ್ಟು ದೇಶೀಯ ಉತ್ಪನ್ನ ಅಥವಾ ಜಿಡಿಪಿ ಎಂದು ಕರೆಯಲಾಗುತ್ತದೆ. ಇದು ಒಟ್ಟಾರೆ ದೇಶೀಯ ಉತ್ಪಾದನೆಯ ವಿಶಾಲ ಅಳತೆಗೋಲಾಗಿದೆ ಮತ್ತು ಇದು ನಿರ್ದಿಷ್ಟ ದೇಶದ ಆರ್ಥಿಕ ಆರೋಗ್ಯದ ಸಮಗ್ರ ಸ್ಕೋರ್ ಕಾರ್ಡ್ ಆಗಿರುತ್ತದೆ.

ಇದನ್ನೂ ಓದಿ : ಇದೇ ಮೊದಲ ಬಾರಿಗೆ ಮಾಸಿಕ 10 ಬಿಲಿಯನ್ ದಾಟಿದ ಯುಪಿಐ ವಹಿವಾಟುಗಳ ಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.