ನವದೆಹಲಿ : ಮುಂಗಾರು ಋತು ಆರಂಭವಾಗುತ್ತಿದ್ದಂತೆಯೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಮುಂಗಾರು ಆಗಮನದಿಂದ ಕೃಷಿ ವಲಯದಲ್ಲಿನ ಬೇಡಿಕೆ ಕಡಿಮೆಯಾಗಿರುವುದು ಮತ್ತು ವಾಹನ ಸಂಚಾರ ಕಡಿಮೆಯಾದ ಕಾರಣ ಜೂನ್ ಮೊದಲಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಇಳಿಕೆಯಾಗಿದೆ ಎಂದು ಉದ್ಯಮದ ಪ್ರಾಥಮಿಕ ಅಂಕಿಅಂಶಗಳು ತೋರಿಸಿವೆ.
ಒಟ್ಟು ಇಂಧನ ಬೇಡಿಕೆಯ ಐದನೇ ಎರಡರಷ್ಟು ಪಾಲು ಹೊಂದಿರುವ ಡೀಸೆಲ್ ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನವಾಗಿದೆ. ಜೂನ್ 1 ರಿಂದ 15 ರ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಡೀಸೆಲ್ ಮಾರಾಟ ಶೇ 6.7 ರಷ್ಟು ಕಡಿಮೆಯಾಗಿ 3.43 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಕೃಷಿ ವಲಯದಲ್ಲಿನ ಅತ್ಯಧಿಕ ಬೇಡಿಕೆ ಹಾಗೂ ಬೇಸಿಗೆಯ ಶಾಖ ತಡೆಯಲು ಕಾರುಗಳಲ್ಲಿ ಎಸಿಗಳನ್ನು ಹೆಚ್ಚಾಗಿ ಬಳಸಿದ ಕಾರಣದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಡೀಸೆಲ್ ಮಾರಾಟವು ಕ್ರಮವಾಗಿ ಶೇಕಡಾ 6.7 ಮತ್ತು ಶೇಕಡಾ 9.3 ರಷ್ಟು ಏರಿಕೆಯಾಗಿತ್ತು.
ಮೇ 1 ರಿಂದ 15ರವರೆಗೆ 3.31 ಮಿಲಿಯನ್ ಟನ್ ಡೀಸೆಲ್ ಬಳಕೆಯಾಗಿದೆ. ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೆ ಈ ಮಾರಾಟ ಪ್ರಮಾಣವು ಶೇಕಡಾ 3.4 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜೂನ್ 2023 ರ ಮೊದಲಾರ್ಧದಲ್ಲಿ ಪೆಟ್ರೋಲ್ ಮಾರಾಟವು ಶೇಕಡಾ 5.7 ರಷ್ಟು ಇಳಿದು 1.3 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಮಾಸಿಕವಾಗಿ ನೋಡಿದರೆ ತಿಂಗಳ ಮಾರಾಟವು ಶೇಕಡಾ 3.8 ರಷ್ಟು ಕಡಿಮೆಯಾಗಿದೆ ಎಂದು ಡೇಟಾ ತೋರಿಸಿದೆ.
ಕೈಗಾರಿಕೆ ಮತ್ತು ಕೃಷಿ ಚಟುವಟಿಕೆಗಳು ಚುರುಕಾದ ಹಿನ್ನೆಲೆಯಲ್ಲಿ ಮಾರ್ಚ್ ದ್ವಿತೀಯಾರ್ಧದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಏರಿಕೆಯಾಗಿತ್ತು. ಆದರೆ ಮುಂಗಾರು ಆಗಮನವು ವಾತಾವರಣವನ್ನು ತಂಪಾಗಿಸಿದೆ ಮತ್ತು ಹೊಲಗಳಲ್ಲಿನ ನೀರಾವರಿ ಡೀಸೆಲ್ ಜೆನ್‌ಸೆಟ್‌ಗಳ ಚಾಲನೆ ಕಡಿಮೆಯಾಗಿದೆ. ಅಲ್ಲದೆ ಜೂನ್ ಮೊದಲಾರ್ಧದಲ್ಲಿ ಟ್ರಾಕ್ಟರ್ ಮತ್ತು ಟ್ರಕ್‌ಗಳ ಡೀಸೆಲ್ ಬಳಕೆ ಕೂಡ ಕಡಿಮೆಯಾಗಿದೆ.
ಜೂನ್ 1 ರಿಂದ 15 ರ ಅವಧಿಯಲ್ಲಿ ಪೆಟ್ರೋಲ್ ಬಳಕೆಯು ಕೋವಿಡ್-2021 ರ ಜೂನ್ ಗಿಂತ 44.2 ರಷ್ಟು ಹೆಚ್ಚಾಗಿದೆ ಮತ್ತು 2019ರ ಜೂನ್ 1 ರಿಂದ 15 ರವರೆಗಿನ ಕೋವಿಡ್ ಅವಧಿಗಿಂತ ಶೇಕಡಾ 14.6 ರಷ್ಟು ಹೆಚ್ಚಾಗಿದೆ. ಡೀಸೆಲ್ ಬಳಕೆಯು 2021ರ ಜೂನ್ 1 ರಿಂದ 15ರ ಅವಧಿಗಿಂತ ಶೇಕಡಾ 38 ರಷ್ಟು ಹೆಚ್ಚಾಗಿದೆ ಮತ್ತು ಜೂನ್ 2019 ರ ಮೊದಲಾರ್ಧಕ್ಕಿಂತ ಶೇಕಡಾ 8.8 ಹೆಚ್ಚಾಗಿದೆ.
ಅಡುಗೆ ಅನಿಲ ಎಲ್‌ಪಿಜಿ ಮಾರಾಟವು ಜೂನ್ 1 ರಿಂದ 15ರ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 1.3 ರಷ್ಟು ಇಳಿದು 1.14 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಎಲ್‌ಪಿಜಿ ಬಳಕೆಯು ಜೂನ್ 2021 ಕ್ಕಿಂತ 3.3 ಶೇಕಡಾ ಹೆಚ್ಚಾಗಿದೆ ಮತ್ತು ಪೂರ್ವ ಕೋವಿಡ್ 2019ರ ಜೂನ್ 1 ರಿಂದ 15ರ ಅವಧಿಗಿಂತ ಶೇಕಡಾ 26.7 ಹೆಚ್ಚಾಗಿದೆ. ಮೇ ತಿಂಗಳ ಮೊದಲಾರ್ಧದಲ್ಲಿ ಇದ್ದ 1.22 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಗೆ ಹೋಲಿಸಿದರೆ ತಿಂಗಳಿನಿಂದ ತಿಂಗಳಿಗೆ ಬೇಡಿಕೆಯು ಶೇಕಡಾ 6.2 ರಷ್ಟು ಕುಸಿದಿದೆ ಎಂದು ಡೇಟಾ ತೋರಿಸಿದೆ.
ಇದನ್ನೂ ಓದಿ : Mobile Gaming: ವಿಶ್ವದ ಅತಿದೊಡ್ಡ ಮೊಬೈಲ್ ಗೇಮಿಂಗ್ ರಾಷ್ಟ್ರ ಭಾರತ: ಮಹಿಳೆಯರೇ ಮುಂಚೂಣಿಯಲ್ಲಿ!