ETV Bharat / business

ಅಕ್ರಮ ಹಣ ವರ್ಗಾವಣೆ ಆರೋಪ; ಹೀರೊ ಮೋಟೊಕಾರ್ಪ್ ಸಿಎಂಡಿ ಮುಂಜಾಲ್​ ಇಡಿಯಿಂದ ವಿಚಾರಣೆ

author img

By ETV Bharat Karnataka Team

Published : Sep 19, 2023, 3:09 PM IST

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರೋ ಮೋಟೊಕಾರ್ಪ್ ಲಿಮಿಟೆಡ್ ಮುಖ್ಯಸ್ಥ ಪವನ್ ಮುಂಜಾಲ್ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ.

Hero Motocorp Ltd CMD Pawan Munjal questioned by ED

ನವದೆಹಲಿ : ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರೋ ಮೋಟೊಕಾರ್ಪ್ ಲಿಮಿಟೆಡ್ ಮತ್ತು ಹೀರೋ ಫಿನ್ ಕಾರ್ಪ್ ಲಿಮಿಟೆಡ್ ಸಿಎಂಡಿ ಪವನ್ ಮುಂಜಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ವಿಚಾರಣೆ ನಡೆಸಿದೆ. 2014-15 ರಿಂದ 2018-19ರ ಅವಧಿಯಲ್ಲಿ 54 ಕೋಟಿ ರೂ.ಗಳನ್ನು ವಿದೇಶಕ್ಕೆ ರವಾನೆ ಮಾಡಿದ್ದಕ್ಕಾಗಿ ಮುಂಜಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಹೊರಿಸಿದೆ. ಇದಲ್ಲದೆ, ಮುಂಜಾಲ್ ಅವರ ನಿಕಟವರ್ತಿಗಳು 40 ಕೋಟಿ ರೂ.ಗಳಷ್ಟು ಮೊತ್ತದ ವಿದೇಶಿ ಕರೆನ್ಸಿಯನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪಗಳಿವೆ.

ತನಿಖೆಯಲ್ಲಿ ಪಾಲ್ಗೊಳ್ಳಲು ಇಡಿಯಿಂದ ನೋಟಿಸ್ ಪಡೆದ ನಂತರ ಮುಂಜಾಲ್ ಸೋಮವಾರ ಬೆಳಗ್ಗೆ ಇಡಿ ಪ್ರಧಾನ ಕಚೇರಿಗೆ ಬಂದಿದ್ದರು. ಪಿಎಂಎಲ್ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆಗಸ್ಟ್ನಲ್ಲಿ ಮುಂಜಾಲ್ ಮತ್ತು ಸಾಲ್ಟ್ ಎಕ್ಸ್​ಪೀರಿಯನ್ಸ್​ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ಉದ್ಯೋಗಿಗಳಿಗೆ ಸೇರಿದ 12 ಸ್ಥಳಗಳ ಮೇಲೆ ದಾಳಿ ನಡೆಸಿ 25 ಕೋಟಿ ರೂ.ಮೌಲ್ಯದ ಆಭರಣಗಳು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿತ್ತು.

ನಿಷೇಧಿತ ವಸ್ತುಗಳನ್ನು ಸಾಗಿಸಲು ಮತ್ತು ಅಕ್ರಮವಾಗಿ ರಫ್ತು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಮುಂಜಾಲ್, ಎಸ್ಇಎಂಪಿಎಲ್, ಅಮಿತ್ ಬಾಲಿ, ಹೇಮಂತ್ ದಹಿಯಾ, ಕೆ.ಆರ್.ರಾಮನ್ ಮತ್ತು ಇತರರ ವಿರುದ್ಧ ನವದೆಹಲಿಯ ಸಿಎಂಎಂಗೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ಇದರ ಆಧಾರದ ಮೇಲೆ ಪಿಎಂಎಲ್ಎ ತನಿಖೆ ಪ್ರಾರಂಭಿಸಿದೆ.

2014-2015 ರಿಂದ 2018-2019 ರ ಅವಧಿಯಲ್ಲಿ ಎಸ್ಇಎಂಪಿಎಲ್ ವಿವಿಧ ದೇಶಗಳಿಗೆ ಅಂದಾಜು 54 ಕೋಟಿ ರೂ.ಗಳ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ರಫ್ತು ಮಾಡಿದೆ ಎಂದು ಆರೋಪಿಸಲಾಗಿದೆ. ಇದನ್ನು ಮುಂಜಾಲ್ ತಮ್ಮ ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಇಎಂಪಿಎಲ್ ತನ್ನ ಉದ್ಯೋಗಿಗಳಾದ ದಹಿಯಾ, ಮುದಿತ್ ಅಗರ್ವಾಲ್, ಅಮಿತ್ ಮಕ್ಕರ್, ಗೌತಮ್ ಕುಮಾರ್, ವಿಕ್ರಮ್ ಬಜಾಜ್ ಮತ್ತು ಕೇತನ್ ಕಕ್ಕರ್ ಅವರ ಹೆಸರಿನಲ್ಲಿ ವಿವಿಧ ಹಣಕಾಸು ವರ್ಷಗಳಲ್ಲಿ ವಾರ್ಷಿಕವಾಗಿ ಅನುಮತಿಸಲಾದ 2,50,000 ಡಾಲರ್​ ಮಿತಿಯನ್ನು ಮೀರಿ ಸುಮಾರು 14 ಕೋಟಿ ರೂ.ಗಳ ವಿದೇಶಿ ವಿನಿಮಯವನ್ನು ಪಡೆಯಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಇದಲ್ಲದೆ, ಎಸ್ಇಎಂಪಿಎಲ್ ವಿದೇಶಕ್ಕೆ ಪ್ರಯಾಣಿಸದ ಇತರ ಉದ್ಯೋಗಿಗಳ ಹೆಸರಿನಲ್ಲಿ ವಿದೇಶಿ ವಿನಿಮಯ, ಟ್ರಾವೆಲ್ ಫಾರೆಕ್ಸ್ ಕಾರ್ಡ್ ಅನ್ನು ದೊಡ್ಡ ಮೊತ್ತದಲ್ಲಿ ಡ್ರಾ ಮಾಡಿದೆ. ಮುಂಜಾಲ್ ಅವರ ಪ್ರಮುಖ ಸಹವರ್ತಿಯೊಬ್ಬರು ತಮ್ಮ ವೈಯಕ್ತಿಕ ಅಥವಾ ವ್ಯವಹಾರ ಸಂಬಂಧಿತ ವಿದೇಶ ಪ್ರವಾಸಗಳಲ್ಲಿ ಮುಂಜಾಲ್ ಅವರ ಖರ್ಚುಗಳನ್ನು ಪೂರೈಸಲು ಸುಮಾರು 40 ಕೋಟಿ ರೂ.ಗಳ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ರಫ್ತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಸ್ಪೆಕ್ಟ್ರಮ್ ಖರೀದಿಯ 1701 ಕೋಟಿ ರೂ. ಕಂತು ಪಾವತಿಸಿದ ವೊಡಾಫೋನ್ ಐಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.