ETV Bharat / business

ಸಾಫ್ಟ್‌ವೇರ್‌, ಇತರೆ ಸೇವೆಗಳ ದರ ಹೆಚ್ಚಿಸಿದ ಮೈಕ್ರೋಸಾಫ್ಟ್​ ಇಂಡಿಯಾ

ಭಾರತದಾದ್ಯಂತ ಆನ್‌ಲೈನ್ ಸೇವೆಗಳನ್ನು ಭಾರತೀಯ ರೂಪಾಯಿಯಲ್ಲಿ ಖರೀದಿಸುವ ಗ್ರಾಹಕರು ಮೈಕ್ರೋಸಾಫ್ಟ್ ಕ್ಲೌಡ್ ಕೊಡುಗೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಂಡುಕೊಳ್ಳುವುದನ್ನು ಮುಂದುವರಿಸುತ್ತಾರೆ. ಹಾರ್ಡ್‌ವೇರ್ ಅಥವಾ ಆಫೀಸ್ ಮತ್ತು ವಿಂಡೋಸ್ ಗ್ರಾಹಕ ಉತ್ಪನ್ನಗಳನ್ನು ಈ ಬೆಲೆಪಟ್ಟಿ ಒಳಗೊಂಡಿರುವುದಿಲ್ಲ ಎಂದು ಮೈಕ್ರೋಸಾಫ್ಟ್​ ಹೇಳಿದೆ.

ಉತ್ಪನ್ನ, ಸೇವೆಗಳ ದರ ಹೆಚ್ಚಿಸಿದ ಮೈಕ್ರೋಸಾಫ್ಟ್​ ಇಂಡಿಯಾ
microsoft-india-has-increased-the-price-of-products-and-services
author img

By

Published : Dec 5, 2022, 3:10 PM IST

ಸ್ಯಾನ್​ ಫ್ರಾನ್ಸಿಸ್ಕೊ: ಸಾಫ್ಟ್​ವೇರ್​ ಮತ್ತು ಇತರೆ ಸೇವೆಗಳಿಗೆ ಮೈಕ್ರೋಸಾಫ್ಟ್​ ಬೆಲೆ ಏರಿಕೆ ಮಾಡಿದೆ. ನಗದು ಏರಿಳಿತದಿಂದಾಗಿ ಶೇ 11 ರಷ್ಟು ಬೆಲೆ ಹೆಚ್ಚಿಸಲಾಗಿದೆ. ಭಾರತ ಮತ್ತು ಇತರೆ ಏಷ್ಯಾ ಪ್ರದೇಶದ ನಡುವಿನ ವಾಣಿಜ್ಯ ವಾಹಿವಾಟಿನ ವೇಳೆ ಸಾಫ್ಟ್‌ವೇರ್ ಮತ್ತು ಆನ್‌ಲೈನ್ ಸೇವೆಗಳಿಗೆ ಅದರ ಬೆಲೆಗಳನ್ನು ಸಮನ್ವಯಗೊಳಿಸಲು ಭಾರತೀಯ ರೂಪಾಯಿ ಬೆಲೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ವರ್ಷ 2023ರ ಫೆಬ್ರವರಿ 1ರಿಂದ ಇದು ಜಾರಿಗೆ ಬರಲಿದೆ.

2023ರ ಫೆಬ್ರವರಿ 1ರಿಂದ ಕಮರ್ಷಿಯಲ್​ ಆನ್​ ಪ್ರಿಮೈಸ್​ ಸಾಫ್ಟ್​ವೇರ್​ಗೆ ಭಾರತದ ರೂಪಾಯಿಯನ್ನು ಶೇ 4.5ರಷ್ಟು ಹೆಚ್ಚಿಸಲಾಗುವುದು. ಆನ್​ಲೈನ್​ ಸೇವೆ ಶೇ 9 ಮತ್ತು ವಿಂಡೋ ಜಿಜಿಡಬ್ಲ್ಯೂಎ ಶೇ 11 ರಷ್ಟು ಏರಿಕೆ ಕಾಣಲಿದೆ ಎಂದು ಮೈಕ್ರೋಸಾಫ್ಟ್​ ತಿಳಿಸಿದೆ.

ಪರಿಷ್ಕೃತ ಭಾರತೀಯ ರೂಪಾಯಿ ಬೆಲೆಗಳೊಂದಿಗೆ ಮೈಕ್ರೋಸಾಫ್ಟ್​ 365 ಮತ್ತು ಡೈನಾಮಿಕ್ಸ್​ 365 ನಂತಹ ಸೇವೆಗಳು ಫೆಬ್ರವರಿ 1ರಿಂದ ಭಾರತ ಮೂಲದ ಗ್ರಾಹಕರಿಗೆ ನೇರ ಮಾರಾಟಕ್ಕಾಗಿ ಮೈಕ್ರೋಸಾಫ್ಟ್‌ನ ಅಧಿಕೃತ ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ವ್ಯಾಪಾರ ಗ್ರಾಹಕರಿಗೆ ಈ ಬದಲಾವಣೆಗಳು ಕಂಪನಿಯ ಪ್ರಕಾರ, ಬೆಲೆ ರಕ್ಷಣೆಗೆ ಒಳಪಟ್ಟಿರುವ ಉತ್ಪನ್ನಗಳಿಗೆ ಪರವಾನಗಿ ಒಪ್ಪಂದಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಆದೇಶಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಭಾರತದಾದ್ಯಂತ ಆನ್‌ಲೈನ್ ಸೇವೆಗಳನ್ನು ಭಾರತೀಯ ರೂಪಾಯಿಯಲ್ಲಿ ಖರೀದಿಸುವ ಗ್ರಾಹಕರು ಮೈಕ್ರೋಸಾಫ್ಟ್ ಕ್ಲೌಡ್ ಕೊಡುಗೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಂಡುಕೊಳ್ಳುವುದನ್ನು ಮುಂದುವರಿಸುತ್ತಾರೆ. ಹಾರ್ಡ್‌ವೇರ್ ಅಥವಾ ಆಫೀಸ್ ಮತ್ತು ವಿಂಡೋಸ್ ಗ್ರಾಹಕ ಉತ್ಪನ್ನಗಳನ್ನು ಈ ಬೆಲೆಪಟ್ಟಿ ಒಳಗೊಂಡಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್​ ಎಲೆಕ್ಟ್ರಾನಿಕ್ಸ್​ಗೆ ಮೊದಲ ಮಹಿಳಾ ಸಾರಥಿ.. ಅಧ್ಯಕ್ಷೆಯಾಗಿ Lee Young Hee ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.