ನವದೆಹಲಿ: ಇನ್ನೇನು ನಾಳೆ ಸೆಪ್ಟೆಂಬರ್ ಬಂದೇ ಬಿಟ್ಟಿತು. ಈ ತಿಂಗಳು ಹಲವು ಬದಲಾವಣೆಗಳಾಗಲಿವೆ. ಇದು ಸಾಮಾನ್ಯ ಜನರ ಮೇಲೆ ಈ ನೀತಿಗಳು ನೇರ ಪರಿಣಾಮ ಬೀರಲಿವೆ. ಈ ಬದಲಾವಣೆಗಳು ಅಡುಗೆ ಮನೆಯಿಂದ ಸ್ಟಾಕ್ ಮಾರುಕಟ್ಟೆ ಮತ್ತು ನಿಮ್ಮ ಹೂಡಿಕೆಗಳವರೆಗೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇನ್ನು ಸಂಬಳ ಪಡೆಯುತ್ತಿರುವ ನೌಕರರ ಮೇಲೂ ಈ ತಿಂಗಳಲ್ಲಿ ಆಗುವ ಕೆಲ ಬದಲಾವಣೆಗಳಿಂದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಸೆಪ್ಟೆಂಬರ್ 1 ರಿಂದ ಏನೆಲ್ಲಾ ಬದಲಾವಣೆಗಳು ನಡೆಯಲಿವೆ ಎಂಬುದನ್ನು ನೋಡುವುದಾದರೆ,

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ: ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ ಇಳಿಕೆ ಮಾಡಿದೆ. ಇದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಾಮಾನ್ಯರು 200 ರೂ ರಿಯಾಯಿತಿ ಪಡೆದರೆ, ಉಜ್ವಲಾ ಯೋಜನೆಯವರಿಗೆ 400 ರೂ ಉಳಿತಾಯ ಆಗಲಿದೆ.

CNG-PNG ಅನಿಲದ ಬೆಲೆಗಳಲ್ಲಿ ಬದಲಾವಣೆ: ಎರಡನೇ ಬದಲಾವಣೆ ಎಂದರೆ ಅದು CNG-PNG ಅನಿಲದ ಬೆಲೆಗಳು. ತಿಂಗಳ ಮೊದಲ ದಿನದಂದು ಅವುಗಳ ಬೆಲೆಗಳನ್ನು ಹೊಸದಾಗಿ ನಿರ್ಧರಿಸಲಾಗುತ್ತದೆ. ಸೆಪ್ಟೆಂಬರ್ 1, 2023 ರಿಂದ ಅವುಗಳ ಬೆಲೆಗಳಲ್ಲಿ ವ್ಯತ್ಯಾಸವಾಗಲಿದೆ. ಇದರ ಪರಿಣಾಮ ಅಡುಗೆ ಮನೆಯಿಂದ ಹಿಡಿದು ಪ್ರಯಾಣದವರೆಗೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

IPOಗೆ ಹೊಸ ನಿಯಮಗಳು ಅನ್ವಯ : ಐಪಿಒ ಮುಕ್ತಾಯದ ನಂತರ ಷೇರು ಮಾರುಕಟ್ಟೆಯಲ್ಲಿ ಕಂಪನಿ ಷೇರುಗಳ ಪಟ್ಟಿಗೆ ಸೇರಿಸುವ ಗಡುವನ್ನು ಸೆಬಿ ಬದಲಾಯಿಸಿದೆ. ಮಾಹಿತಿಯ ಪ್ರಕಾರ, ಸೆಬಿ ಸಮಯ ಮಿತಿಯನ್ನು ಮೂರು ದಿನಕ್ಕೆ ಇಳಿಸಿದೆ. ಮೊದಲು ಇದು ಆರು ದಿನಗಳಾಗಿತ್ತು. ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಅನ್ವಯ ಸೆಪ್ಟೆಂಬರ್ 1, 2023 ರಂದು ಅಥವಾ ನಂತರ ಬರುವ ಎಲ್ಲಾ IPO ಗಳಿಗೆ ಹೊಸ ನಿಯಮವು ಅನ್ವಯಿಸುತ್ತದೆ ಎಂದು SEBI ಹೇಳಿದೆ. ಜೂನ್ 28 ರಂದು ನಡೆದ ಸಭೆಯಲ್ಲಿ ಸೆಬಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಕ್ರೆಡಿಟ್ ಕಾರ್ಡ್ ನಿಯಮಗಲ್ಲೂ ಕೆಲ ಬದಲಾವಣೆ: ನಾಲ್ಕನೇ ಬದಲಾವಣೆಯು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಿಗೆ ಸಂಬಂಧಪಟ್ಟಿದೆ. ಸೆಪ್ಟೆಂಬರ್ 1, 2023 ರಿಂದ ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್‌ನ ಮ್ಯಾಗ್ನಮ್ ಕ್ರೆಡಿಟ್ ಕಾರ್ಡ್‌ನ ಗ್ರಾಹಕರು ಕೆಲ ಬದಲಾವಣೆಗೆ ಒಳಗಾಗುತ್ತಾರೆ. ಸೆಪ್ಟೆಂಬರ್ ಮೊದಲ ದಿನದಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಕೆಲವು ವಹಿವಾಟುಗಳ ಮೇಲೆ ವಿಶೇಷ ರಿಯಾಯಿತಿಯ ಪ್ರಯೋಜನ ಇನ್ಮುಂದೆ ಲಭ್ಯವಿರುವುದಿಲ್ಲ. ಅದೇ ಸಮಯದಲ್ಲಿ, ಸೆಪ್ಟೆಂಬರ್ 1, 2023 ರಿಂದ, ಕಾರ್ಡುದಾರರು ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್‌ನಿಂದ ನೌಕರಿಗೆ ಖುಷಿ ಸಮಾಚಾರ: ಐದನೇ ಬದಲಾವಣೆ ಬಹಳ ಮುಖ್ಯ ಏಕೆಂದರೆ ಪ್ರತಿಯೊಬ್ಬ ಉದ್ಯೋಗಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸೆಪ್ಟೆಂಬರ್ 1 ರಿಂದ ವೇತನ ವರ್ಗದವರ ಸಂಬಳದಲ್ಲಿ ಬದಲಾವಣೆಯಾಗಲಿದೆ. ಆದಾಯ ತೆರಿಗೆ ಇಲಾಖೆಯು ಬಾಡಿಗೆ ರಹಿತ ವಸತಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುತ್ತಿದೆ. ಈ ಹೊಸ ನಿಯಮದ ಅನ್ವಯ ಉದ್ಯೋಗಿಗಳು ಈಗ ಹೆಚ್ಚಿನದನ್ನು ಉಳಿಸಲು ಸಾಧ್ಯವಾಗುತ್ತದೆ. ಮಾಹಿತಿಯ ಪ್ರಕಾರ, ಬಾಡಿಗೆ ರಹಿತ ಮನೆಯನ್ನು ಮೌಲ್ಯಮಾಪನ ಮಾಡಲು CBDT ಮೌಲ್ಯಮಾಪನ ಮಿತಿಯನ್ನು ನಿಗದಿಪಡಿಸಿದೆ. ಇದು ಟೇಕ್ ಹೋಮ್ ಸಂಬಳದಲ್ಲಿ ಹೆಚ್ಚಳ ಕಾಣುವ ಸಾಧ್ಯತೆ ಇದೆ.

ಈ ತಿಂಗಳೇ ಎಲ್ಲ ಕೆಲಸ ಮುಗಿಸಿಕೊಳ್ಳಿ: ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಇದೇ ತಿಂಗಳು ಅಂತಿಮ ದಿನಾಂಕ. ಕೇಂದ್ರದ ಮೋದಿ ಸರಕಾರ ಸೆಪ್ಟೆಂಬರ್ ವರೆಗೆ ಎರಡು ಸಾವಿರ ನೋಟು ಬದಲಿಸಲು ಗಡುವು ನಿಗದಿ ಮಾಡಿತ್ತು. ಇದರ ಗಡುವು ಇದೇ ತಿಂಗಳ 30ಕ್ಕೆ ಕೊನೆಗೊಳ್ಳಲಿದೆ. ಸೆಪ್ಟೆಂಬರ್ 30 ರ ಮೊದಲು, ನಿಮ್ಮ ಬಳಿ 2000 ನೋಟುಗಳಿದ್ದರೆ, ನಂತರ ಬ್ಯಾಂಕ್‌ಗೆ ಹೋಗಿ ಅದನ್ನು ಬದಲಾಯಿಸಿಕೊಳ್ಳಿ. ಅಂದಹಾಗೆ, ಈ ತಿಂಗಳು ಹಬ್ಬಗಳು ಇರುವುದರಿಂದ ಬ್ಯಾಂಕ್ಗಳಿಗೆ ರಜೆ ಇರುತ್ತೆ. ಕಾರಣ ಬೇಗ ಬೇಗ ಆ ಕೆಲಸಗಳನ್ನು ಮಾಡಿಕೊಳ್ಳಿ.
ಉಚಿತವಾಗಿ ಆಧಾರ್ ಕಾರ್ಡ್ ನವೀಕರಿಸಿ: ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಕೊನೆಯ ಅವಕಾಶ ನಿಮ್ಮ ಕೈಯಲ್ಲಿದೆ. ಮಾಹಿತಿಯ ಪ್ರಕಾರ, ಈ ಗಡುವು ಸೆಪ್ಟೆಂಬರ್ 14 2023 ರವರೆಗೆ ಇದೆ, UIDAI ಆಧಾರ್ ಅನ್ನು ಉಚಿತವಾಗಿ ನವೀಕರಿಸುವ ಸೌಲಭ್ಯವನ್ನು ನೀಡಿದೆ. ಈ ಮೊದಲು ಈ ಸೌಲಭ್ಯ ಜೂನ್ 14ರವರೆಗೆ ಲಭ್ಯವಿತ್ತು. ಈ ದಿನಾಂಕದ ನಂತರ ಇದಕ್ಕಾಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.

ಡಿಮ್ಯಾಟ್ ಖಾತೆಗೆ ನಾಮನಿರ್ದೇಶನದ ಅಂತಿಮ ದಿನಾಂಕ: ಡಿಮ್ಯಾಟ್ ಖಾತೆಯಲ್ಲಿ ನಾಮನಿರ್ದೇಶನದ ಗಡುವು ಕೂಡ ಈ ತಿಂಗಳಿಗೆ ಕೊನೆಗೊಳ್ಳುತ್ತಿದೆ. ನಾಮನಿರ್ದೇಶನವಿಲ್ಲದ ಡಿಮ್ಯಾಟ್ ಖಾತೆಯನ್ನು SEBI ನಿಷ್ಕ್ರಿಯ ಎಂದು ಪರಿಗಣಿಸುತ್ತದೆ. ಹಾಗಾಗಿ ಯಾರ್ಯಾರು ಮಾಡಿಸಿಲ್ಲವೂ ಅಂತಹವರು ಇಂದೇ ನಾಮ ನಿರ್ದೇಶನ ಮಾಡಿ