ETV Bharat / business

ಕಾರಿನಲ್ಲಿ 6 ಏರ್​ಬ್ಯಾಗ್​ ಕಡ್ಡಾಯ.. ಮುಂದಿನ ವರ್ಷ ನಿಯಮ ಜಾರಿ: ಕೇಂದ್ರ ಸರ್ಕಾರ - ಏರ್​ಬ್ಯಾಗ್​ ಹೊಂದುವುದು ಕಡ್ಡಾಯ

ರಸ್ತೆ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಪ್ರಯಾಣಿಕರ ಕಾರುಗಳಲ್ಲಿ 6 ಏರ್​ಬ್ಯಾಗ್ ಅಳವಡಿಕೆ​ ಕಡ್ಡಾಯ ಮಾಡಿದ ನಿಯಮವನ್ನು ಮುಂದಿನ ವರ್ಷ ಜಾರಿಗೆ ತರಲು ಮುಂದಾಗಿದೆ.

mandatory-6-airbag
ಕಾರಿನಲ್ಲಿ 6 ಏರ್​ಬ್ಯಾಗ್​ ಕಡ್ಡಾಯ
author img

By

Published : Sep 29, 2022, 9:13 PM IST

ನವದೆಹಲಿ: ಕಾರು ಅಪಘಾತದಲ್ಲಿ ದೇಶದ ದಿಗ್ಗಜ ಉದ್ಯಮಿ ಸೈರಸ್​ ಮಿಸ್ತ್ರಿ ಅವರು ದಾರುಣ ಸಾವಿಗೀಡಾಗಿದ್ದರು. ಸೀಟ್​ಬೆಲ್ಟ್​, ಏರ್​ಬ್ಯಾಗ್​ ಧರಿಸದಿರುವುದೇ ಇದಕ್ಕೆ ಕಾರಣ ಎಂದು ಗೊತ್ತಾಗಿತ್ತು. ಬಳಿಕ ವಾಹನ ಸುರಕ್ಷತೆ ಭಾರೀ ಸದ್ದು ಮಾಡಿತ್ತು. ಕೇಂದ್ರ ಸರ್ಕಾರ ಇದೀಗ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್‌ ಅಳವಡಿಕೆ ಕಡ್ಡಾಯ ಮಾಡಿದೆ. ಈ ನಿಯಮ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ ಎಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರು, ಮುಂದಿನ ವರ್ಷದಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು 8 ಸೀಟುಗಳ ಕಾರಿನಲ್ಲಿ 6 ಏರ್​ಬ್ಯಾಗ್​ಗಳ ಅಳವಡಿಕೆ ಕಡ್ಡಾಯವಾಗಲಿದೆ. ಈ ವರ್ಷವೇ ಈ ನಿಯಮ ಜಾರಿಗೆ ಬರಬೇಕಿತ್ತು. ಆದರೆ, ಉತ್ಪಾದನಾ ಕೊರತೆಯಿಂದ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

  • Safety of all passengers travelling in motor vehicles irrespective of their cost and variants is the foremost priority.

    — Nitin Gadkari (@nitin_gadkari) September 29, 2022 " class="align-text-top noRightClick twitterSection" data=" ">

6 ಏರ್​ಬ್ಯಾಗ್​ ಕಡ್ಡಾಯದ ಬಗ್ಗೆ ಟ್ವೀಟ್ ಮಾಡಿರುವ ಗಡ್ಕರಿ ಅವರು, 6 ಏರ್​ಬ್ಯಾಗ್​ ನಿಯಮ 2022 ರಲ್ಲೇ ಜಾರಿಗೆ ಬರಬೇಕಿತ್ತು. ಆದರೆ, ಜಾಗತಿಕ ಪೂರೈಕೆ ಕೊರತೆ, ನಿರ್ಬಂಧಗಳ ಕಾರಣ ಈ ನಿಯಮದ ಅನುಷ್ಠಾನವನ್ನು ಸರ್ಕಾರ ಒಂದು ವರ್ಷದವರೆಗೆ ಮುಂದೂಡಬೇಕಾಯಿತು ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು 2023 ರ ಅಕ್ಟೋಬರ್​ 1 ರಿಂದಲೇ ಜಾರಿಗೆ ಬರಲಿದೆ. ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ವೆಚ್ಚ ಮತ್ತು ವಾಹನಗಳ ರೂಪಾಂತರಗಳನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ರಸ್ತೆ ಸಾರಿಗೆ ಸಚಿವರು ಪ್ರತಿಪಾದಿಸಿದರು.

ವಿಶ್ವದಲ್ಲಿ ಈಗಾಗಲೇ ಆಟೋಮೊಬೈಲ್ ತಯಾರಕರು 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಭಾರತದಲ್ಲಿ ಆರ್ಥಿಕತೆ ಮತ್ತು ವೆಚ್ಚದ ಕಾರಣಕ್ಕಾಗಿ ಅವುಗಳನ್ನು ಇನ್ನೂ ಮಾರುಕಟ್ಟೆಗೆ ಬಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ಓದಿ: ಜ್ಞಾನವಾಪಿ ಪ್ರಕರಣ: ಶಿವಲಿಂಗದ ವೈಜ್ಞಾನಿಕ ತನಿಖೆಗೆ ಹಿಂದೂ ಸಂಘಟನೆ ಆಗ್ರಹ; ಮುಸ್ಲಿಂ ಸಂಘಟನೆ ವಿರೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.