ETV Bharat / business

ಡಿಸೆಂಬರ್‌ ಮೊದಲ ದಿನವೇ ಗ್ರಾಹಕರ ಜೇಬಿಗೆ ಕತ್ತರಿ: ವಾಣಿಜ್ಯ ಗ್ಯಾಸ್‌ ಸಿಲಿಂಡರ್​ ಬೆಲೆ ಏರಿಕೆ - ದೇಶದ ತೈಲ ಕಂಪನಿಗಳು

LPG commercial cylinder price hike: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ ತಿಂಗಳ ಮೊದಲ ದಿನವೇ ಶಾಕ್ ನೀಡಿವೆ.

LPG Price Hike  LPG Commercial Cylinder latest rat  LPG Commercial Cylinder price hike  LPG Commercial Cylinder  ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ತೈಲ ಕಂಪನಿ  ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆ  ದೇಶದ ತೈಲ ಮಾರುಕಟ್ಟೆ ಕಂಪನಿ  ಡಿಸೆಂಬರ್ ಮೊದಲ ದಿನವೇ ಶಾಕ್  ವಾಣಿಜ್ಯ ಅನಿಲ ಸಿಲಿಂಡರ್‌  ಹೊಸ ವರ್ಷ ಪ್ರಾರಂಭ  ದೇಶದ ತೈಲ ಕಂಪನಿಗಳು  ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ
ತಿಂಗಳದ ಮೊದಲ ದಿನವೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ತೈಲ ಕಂಪನಿಗಳು
author img

By ETV Bharat Karnataka Team

Published : Dec 1, 2023, 10:24 AM IST

ನವದೆಹಲಿ: ಹೊಸ ವರ್ಷ ಪ್ರಾರಂಭವಾಗುವ ಮೊದಲೇ ದೇಶದ ತೈಲ ಕಂಪನಿಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಹೆಚ್ಚಿಸಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.

ಮಾಹಿತಿ ಪ್ರಕಾರ, ತೈಲ ಕಂಪನಿಗಳು ಪ್ರತಿ ಸಿಲಿಂಡರ್‌ಗೆ 21 ರೂಪಾಯಿ ಹೆಚ್ಚಿಸಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಹೊಸ ಬೆಲೆ 1,796.50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಪ್ರತಿ ಸಿಲಿಂಡರ್‌ಗೆ 1,775.50 ರೂ.ಗೆ ಇತ್ತು.

ಇಂದಿನಿಂದ ಹೊಸ ದರ ಅನ್ವಯ: ತೈಲ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ಅಪ್​ಡೇಟ್​ ಮಾಡಲಾಗಿದೆ. ಮುಂಬೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಹೊಸ ಬೆಲೆಗಳು ಜಾರಿಗೆ ಬಂದಿವೆ. ಈ ಹಿಂದೆ 1,728 ಇದ್ದ ಹೊಸ ದರ 1,749 ರೂ.ಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ ಹೊಸ ದರಗಳು 1,908 ರೂ.ಇದೆ. ಇದಕ್ಕೂ ಮೊದಲು 1,885.50 ರೂಪಾಯಿ ಇತ್ತು. ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ 1,968.50 ರೂ ಆಗಿದೆ, ಈ ಮೊದಲು 1942 ರೂ.ಗೆ ಮಾರಾಟವಾಗುತ್ತಿತ್ತು.

ಗೃಹಬಳಕೆ ಸಿಲಿಂಡರ್ ಬೆಲೆ ಬದಲಿಲ್ಲ: ತೈಲ ಕಂಪನಿಗಳು 14 ಕೆ.ಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೈಲ ಕಂಪನಿಗಳ ವೆಬ್‌ಸೈಟ್‌ಗಳ ಪ್ರಕಾರ, ರಾಜಧಾನಿ ದೆಹಲಿಯಲ್ಲಿ ಗೃಹಬಳಕೆ​ ಗ್ಯಾಸ್​ ಸಿಲಿಂಡರ್​ ಬೆಲೆ 903 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 929 ರೂ., ಮುಂಬೈನಲ್ಲಿ 902 ರೂ. ಮತ್ತು ಚೆನ್ನೈನಲ್ಲಿ 918.50 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: 'ವುಮೆನ್​ ಸೇಫ್ಟಿ' ಆ್ಯಪ್; ಅಪಾಯದ ವೇಳೆ​ ಒಂದು ಬಟನ್​ ಒತ್ತಿದ್ರೆ, ಲೊಕೇಶನ್ ಸಹಿತ ಬರುತ್ತೆ ಸಂದೇಶ

ಸಬ್ಸಿಡಿ 300 ರೂ.ಗೆ ಹೆಚ್ಚಳ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಎಲ್​ಪಿಜಿ ಸಿಲಿಂಡರ್​ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಅಕ್ಬೋಬರ್​ನಲ್ಲಿ ಹೆಚ್ಚಿಸಿತ್ತು. ಪ್ರಸ್ತುತ 200 ರೂಪಾಯಿ ಇದ್ದ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದೆ. 14.2 ಕೆಜಿಯ ಸಿಲಿಂಡರ್​ ಬೆಲೆ ಮಾರುಕಟ್ಟೆಯಲ್ಲಿ 903 ರೂಪಾಯಿ ಇದೆ. ಸದ್ಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿಯೊಂದಿಗೆ 703 ರೂಪಾಯಿಗೆ ಲಭ್ಯವಾಗುತ್ತಿದೆ. ಈಗ 100 ರೂಪಾಯಿಗಳ ಸಬ್ಸಿಡಿ ಹೆಚ್ಚಿರುವುದರಿಂದ ಒಟ್ಟು 300 ರೂ. ಸಬ್ಸಿಡಿ ಸಿಗಲಿದ್ದು, ಗ್ಯಾಸ್​ ಸಿಲಿಂಡರ್​ 603 ರೂಪಾಯಿಗೆ ಲಭ್ಯವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.