ನವದೆಹಲಿ: ಉಚಿತ ಆಹಾರ ಡೆಲಿವರಿ, ವಿಶೇಷ ಆಫರ್ಗಳು ಮತ್ತು ಡಿಸ್ಕೌಂಟ್ಗಳಂಥ ಪ್ರಯೋಜನಗಳನ್ನು ನೀಡುವ ಸ್ವಿಗ್ಗಿ ಒನ್ ಲೈಟ್ ಮೆಂಬರ್ಶಿಪ್ ಯೋಜನೆಯನ್ನು ಸ್ವಿಗ್ಗಿ ಸೋಮವಾರ ಪ್ರಕಟಿಸಿದೆ. ಇದಕ್ಕೆ ಮೂರು ತಿಂಗಳಿಗೆ 99 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಸದಸ್ಯತ್ವದೊಂದಿಗೆ, ಬಳಕೆದಾರರು 149 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಫುಡ್ ಡೆಲಿವರಿ ಮತ್ತು ಇನ್ಸ್ಟಾಮಾರ್ಟ್ನಲ್ಲಿ 199 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಡೆಲಿವರಿಗಳನ್ನು ಪಡೆಯುತ್ತಾರೆ.
ಉಚಿತ ಡೆಲಿವರಿಯ ಜೊತೆಗೆ ಸದಸ್ಯರು 20,000+ ರೆಸ್ಟೋರೆಂಟ್ಗಳಲ್ಲಿ ಸಾಮಾನ್ಯ ಕೊಡುಗೆಗಳಿಗಿಂತ ಶೇಕಡಾ 30 ರಷ್ಟು ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯುತ್ತಾರೆ. ಅಲ್ಲದೆ ಒನ್ ಲೈಟ್ ಸದಸ್ಯರಿಗೆ ಸ್ವಿಗ್ಗಿ ಜೀನಿ ಡೆಲಿವರಿಯಲ್ಲಿ 60 ರೂ.ಗಿಂತ ಹೆಚ್ಚಿನ ರಿಯಾಯಿತಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
"ಸ್ವಿಗ್ಗಿಯಲ್ಲಿ ನಮ್ಮ ಗ್ರಾಹಕರಿಗೆ ಅನುಕೂಲಕರವಾದುದನ್ನು ಮಾಡಲು ನಾವು ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಸ್ವಿಗ್ಗಿ ಒನ್ ನ 10 ರಲ್ಲಿ 9 ಸದಸ್ಯರು ಎರಡು ಅಥವಾ ಹೆಚ್ಚಿನ ಸೇವೆಗಳನ್ನು ಬಳಸುತ್ತಾರೆ. ಇದು ದೇಶದ ಅತ್ಯಂತ ಮೌಲ್ಯಯುತ ಸದಸ್ಯತ್ವ ಕಾರ್ಯಕ್ರಮಗಳಲ್ಲಿ ಒಂದಾಗಿದೆ" ಎಂದು ಸ್ವಿಗ್ಗಿಯ ಆದಾಯ ಮತ್ತು ಬೆಳವಣಿಗೆ ವಿಭಾಗದ ಉಪಾಧ್ಯಕ್ಷ ಅನುರಾಗ್ ಪಂಗನಮಾಮುಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ವಿಗ್ಗಿ ಒನ್ ಲೈಟ್ ಇದು ಸ್ವಿಗ್ಗಿ ಒನ್ ನ ಹೊಸ ಮತ್ತು ಕೈಗೆಟುಕುವ ಮಾದರಿಯ ಮೆಂಬರ್ಶಿಪ್ ಆಗಿದ್ದು ಆಹಾರ, ದಿನಸಿ ಮತ್ತು ಪಿಕ್-ಅಪ್ ಮತ್ತು ಡ್ರಾಪ್ ಸೇವೆಗಳಾದ್ಯಂತ ಪ್ರಯೋಜನಗಳನ್ನು ನೀಡುವ ದೇಶದ ಏಕೈಕ ಮೆಂಬರ್ಶಿಪ್ ಯೋಜನೆಯಾಗಿದೆ. ಮೂರು ತಿಂಗಳವರೆಗೆ 99 ರೂ.ಗಳ ಆರಂಭಿಕ ಬೆಲೆಯಲ್ಲಿ, ಸರಾಸರಿ ಸ್ವಿಗ್ಗಿ ಒನ್ ಲೈಟ್ ಬಳಕೆದಾರರು ಆಹಾರ ಡೆಲಿವರಿ, ಇನ್ಸ್ಟಾಮಾರ್ಟ್ ಮತ್ತು ಜೀನಿಯಾದ್ಯಂತ ನೀಡುವ ಆರ್ಡರ್ಗಳ ಮೇಲೆ ತಾವು ಮೆಂಬರ್ಶಿಪ್ಗಾಗಿ ಪಾವತಿಸುವ ಬೆಲೆಯ ಮೇಲೆ ಕನಿಷ್ಠ 6 ಪಟ್ಟು ಲಾಭ ಪಡೆಯಬಹುದು.
ಸ್ವಿಗ್ಗಿ ಭಾರತದ ಅತಿದೊಡ್ಡ ಆನ್ಲೈನ್ ಆಹಾರ ಪದಾರ್ಥ ಆರ್ಡರ್ ಮತ್ತು ವಿತರಣಾ ಸರಪಳಿಯಾಗಿದ್ದು, ಇದು ಇಂಡಿಯಾ ಯುನಿಕಾರ್ನ್ ಸ್ಟಾರ್ಟ್ಅಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು 2014 ರಲ್ಲಿ ಪ್ರಾರಂಭವಾದ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಆಗಿದ್ದು, ಪ್ರಸ್ತುತ, 100 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ವಿಸ್ತರಿಸಿದೆ.
ಇದನ್ನೂ ಓದಿ : ನೆಟ್ಫ್ಲಿಕ್ಸ್ನ ವ್ಯವಹಾರ ವಿಸ್ತರಣೆಗೆ ಅಡ್ಡಿಯಾದ ಲೋಕಲ್ ಕಂಟೆಂಟ್ ಕೊರತೆ