ETV Bharat / business

ಆಸ್ತಿಯ ಮೂಲ ದಾಖಲೆ ಕಳೆದರೆ ಮುಂದೇನು? ನಕಲು ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ - ಮೂಲ ದಾಖಲೆಯ ನಕಲು

ಕೆಲವೊಮ್ಮೆ ಆಸ್ತಿಯ ಮೂಲ ದಾಖಲೆಗಳು ಕಳೆದು ಹೋಗುತ್ತವೆ ಅಥವಾ ಯಾವುದೋ ಕಾರಣದಿಂದ ನಷ್ಟವಾಗುತ್ತವೆ - ಅಂಥ ಸಂದರ್ಭದಲ್ಲಿ ನಾವು ಮೂಲ ದಾಖಲೆಯ ನಕಲು ಪಡೆಯಬೇಕಾಗುತ್ತದೆ - ಇದಕ್ಕಾಗಿ ಮೊದಲಿಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿ ಮುಂದಿನ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ.

lost-your-original-property-documents-act-fast

author img

By

Published : Jan 12, 2023, 7:26 PM IST

ಹೈದರಾಬಾದ್: ನೀವು ಹೊಂದಿರುವ ಯಾವುದೇ ವಸ್ತುವಿನ ಮಾಲೀಕತ್ವ ಸಾಬೀತುಪಡಿಸಬೇಕಾದರೆ ಅದಕ್ಕೆ ಸಂಬಂಧಿಸಿದ ಕಾನೂನುಬದ್ಧವಾಗಿ ಮಾನ್ಯವಾದ ಪುರಾವೆ ಅಗತ್ಯ. ಇದು ಆಸ್ತಿಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಎಲ್ಲ ರೀತಿಯ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಟೈಟಲ್ ಡೀಡ್​​ನಂಥ ಮೂಲ ಆಸ್ತಿ ದಾಖಲೆಗಳು ಬಹಳ ನಿರ್ಣಾಯಕವಾಗುತ್ತವೆ. ಅದು ಮನೆ ಅಥವಾ ಪ್ಲಾಟ್ ಅಥವಾ ಕೃಷಿ ಭೂಮಿಯಾಗಿರಲಿ, ಮಾರಾಟ ಅಥವಾ ಖರೀದಿಯ ಸಮಯದಲ್ಲಿ ನಿಮ್ಮ ಹೆಸರಿಗೆ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಈ ದಾಖಲೆಗಳು ಬೇಕೇ ಬೇಕು. ಆದರೆ, ಒಂದು ವೇಳೆ ನಿಮ್ಮ ಯಾವುದೇ ಮೂಲ ಆಸ್ತಿ ಮಾಲೀಕತ್ವದ ದಾಖಲೆಗಳು ಕಳೆದುಹೋದಾಗ ಅಥವಾ ಕಳ್ಳತನವಾದಾಗ ಏನು ಮಾಡುವುದು? ದಾಖಲೆಗಳನ್ನು ಮತ್ತೆ ಪಡೆಯುವುದು ಹೇಗೆ? ಅದಕ್ಕಾಗಿ ಇಲ್ಲಿದೆ ಮಾರ್ಗ.

ಮೊದಲು ಎಫ್​ಐಆರ್​ ದಾಖಲಿಸಬೇಕು: ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮೂಲ ದಾಖಲೆಗಳಿಲ್ಲದಿದ್ದರೆ ವಿವಾದಗಳು ಉದ್ಭವಿಸಬಹುದು. ಇಂಥ ಆಸ್ತಿಯ ಮೇಲೆ ನಿಮ್ಮ ಕಾನೂನು ಹಕ್ಕುಗಳನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ನೀವು ನಕಲಿ ಅಥವಾ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಬೇಕಾಗುತ್ತದೆ. ಆದರೆ, ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಅಥವಾ NCR (ನಾನ್-ಕಾಗ್ನಿಜಬಲ್ ವರದಿ) ದಾಖಲಿಸಬೇಕು.

ದೂರು ದಾಖಲಿಸಿ ಎನ್​​ಟಿಸಿ ಪಡೆಯಬೇಕು: ಎಫ್ಐಆರ್ ದಾಖಲಾದ ನಂತರ, ಪೊಲೀಸರು ನಿಮ್ಮ ದಾಖಲೆಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಪೊಲೀಸರಿಗೆ ದಾಖಲೆಗಳನ್ನು ಹುಡುಕಲಾಗದಿದ್ದರೆ ಅವರು ಎನ್​ಟಿಸಿ ಅಥವಾ ಪತ್ತೆಹಚ್ಚಲಾಗದ ಪ್ರಮಾಣಪತ್ರವನ್ನು (NTC) ನೀಡುತ್ತಾರೆ. ದಾಖಲೆ ಕಳೆದುಹೋಗಿದೆ ಅಥವಾ ನಷ್ಟವಾಗಿದೆ ಎಂಬುದನ್ನು ಸಾಬೀತುಪಡಿಸಲು ಮತ್ತು ಆ ಮೂಲಕ ನಕಲು ದಾಖಲೆ ಪಡೆಯಲು ಎನ್​ಟಿಸಿ ಅತ್ಯಂತ ಅವಶ್ಯಕವಾದ ದಾಖಲೆಯಾಗಿದೆ. ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ದೇಶದಲ್ಲಿ ಎಲ್ಲಿಯಾದರೂ ನೀವು ವಾಸಿಸುವ ಸ್ಥಳಕ್ಕೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದು.

ಕನಿಷ್ಠ ಎರಡು ಪತ್ರಿಕೆಗಳಲ್ಲಿ ನೋಟಿಸ್​ ಪ್ರಕಟಿಸಬೇಕು: ಎಫ್‌ಐಆರ್ ದಾಖಲಾದ ನಂತರ, ಕನಿಷ್ಠ ಎರಡು ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಬೇಕು. ಒಂದು ಇಂಗ್ಲಿಷ್‌ನಲ್ಲಿ ಮತ್ತು ಇನ್ನೊಂದು ಸ್ಥಳೀಯ ಭಾಷೆಯಲ್ಲಿ. ಆಸ್ತಿಯ ವಿವರಗಳು, ಕಳೆದುಹೋದ ದಾಖಲೆಗಳು ಮತ್ತು ನಿಮ್ಮ ಸಂಪರ್ಕ ವಿವರಗಳನ್ನು ಈ ನೋಟಿಸ್​​ನಲ್ಲಿ ನಮೂದಿಸಬೇಕು. ಯಾರೇ ಸಾರ್ವಜನಿಕರು ನೋಟಿಸ್‌ಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅವರು ಪ್ರಕಟಣೆಯ ದಿನಾಂಕದಿಂದ 15 ದಿನಗಳಲ್ಲಿ ಅದನ್ನು ತಿಳಿಸಬಹುದು. ಈ ನೋಟಿಸ್ ನೀಡಲು ವಕೀಲರ ಪತ್ರದೊಂದಿಗೆ ಸಾಕಷ್ಟು ಕಾರಣಗಳನ್ನು ವಿವರಿಸುವ ನೋಟರೈಸ್ಡ್ ಅಫಿಡವಿಟ್‌ಗಳನ್ನು ಒದಗಿಸಬೇಕು.

ಕೆಲ ನಿಯಮಗಳನ್ನು ಪೂರೈಸಿ ಎನ್​​​ಒಸಿ ತೆಗೆದುಕೊಳ್ಳಬೇಕು: ಅಪಾರ್ಟ್‌ಮೆಂಟ್ ಅಥವಾ ಹೌಸಿಂಗ್ ಸೊಸೈಟಿಯ ಆಸ್ತಿಯ ದಾಖಲೆಯಾಗಿದ್ದರೆ ಸಂಬಂಧಪಟ್ಟ ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ನಿಂದ (ಆರ್‌ಡಬ್ಲ್ಯೂಎ) ನಕಲಿ ಷೇರು ಪ್ರಮಾಣಪತ್ರಗಳನ್ನು ಪಡೆಯಲು ಎಫ್‌ಐಆರ್ ಮತ್ತು ಪತ್ರಿಕೆಯಲ್ಲಿ ಮುದ್ರಿಸಲಾದ ನೋಟಿಸ್‌ನ ಪ್ರತಿಗಳು ಅಗತ್ಯವಿದೆ. ಇವುಗಳನ್ನು ನೀಡಿದ ನಂತರ, ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ ದಾಖಲೆಗಳನ್ನು ಪರಿಶೀಲಿಸಲು ಸಭೆಯನ್ನು ಏರ್ಪಡಿಸುತ್ತದೆ ಮತ್ತು ಘಟನೆ ನಿಜವೆಂದು ಕಂಡುಬಂದರೆ, ನಕಲಿ ಷೇರು ಪ್ರಮಾಣಪತ್ರದ ಪ್ರತಿಯನ್ನು ನೀಡಲಾಗುತ್ತದೆ. ಅಲ್ಲದೆ ಮುಂದಿನ ವಹಿವಾಟುಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ತೆಗೆದುಕೊಳ್ಳಬಹುದು.

ನಕಲಿ ಪ್ರಮಾಣಪತ್ರಕ್ಕೆ ನೋಟರೈಸ್​​​ ಮಾಡಬೇಕು: ನಕಲಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, 10 ರೂಪಾಯಿಯ ನಾನ್ - ಜುಡಿಶಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಅಫಿಡವಿಟ್ ಅನ್ನು ನೋಟರೈಸ್ ಮಾಡಬೇಕು. ಇದರಲ್ಲಿ ಎಫ್‌ಐಆರ್ ಸಂಖ್ಯೆ, ಆಸ್ತಿಗೆ ಸಂಬಂಧಿಸಿದ ಕಳೆದುಹೋದ ದಾಖಲೆಗಳ ವಿವರಗಳು, ಪತ್ರಿಕೆಗಳಲ್ಲಿ ಪ್ರಕಟವಾದ ನೋಟಿಸ್ ಪ್ರತಿ, ಪ್ರಕಟಣೆಯ ಸಿಂಧುತ್ವದ ಬಗ್ಗೆ ವಕೀಲರ ಪ್ರಮಾಣಪತ್ರ ಮತ್ತು ಅರ್ಜಿ ಸಲ್ಲಿಸಲು ಕಾರಣವನ್ನು ನಮೂದಿಸಬೇಕು.

ಪ್ರಕಟಣೆಯ ದಿನಾಂಕದಿಂದ 15 ದಿನಗಳ ನೋಟೀಸ್ ಅವಧಿ ಮುಗಿದ ನಂತರ, ನೀವು ಸಂಬಂಧಪಟ್ಟ ಉಪ-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು ಮತ್ತು ಆಸ್ತಿಯ ಸಂಪೂರ್ಣ ವಿವರಗಳನ್ನು ಸಲ್ಲಿಸುವ ಮೂಲಕ ನಕಲಿಗೆ (ಪ್ರಮಾಣೀಕೃತ ಪ್ರತಿ) ಅರ್ಜಿ ಸಲ್ಲಿಸಬೇಕು. ಕಳೆದುಹೋದ ದಾಖಲೆಗಳ ವಿವರಗಳು, ಎಫ್‌ಐಆರ್ ನಕಲು, ಎನ್​ಟಿಸಿ ಪ್ರಮಾಣಪತ್ರ ಮತ್ತು ನೋಟರಿ ಅಫಿಡವಿಟ್ ಇವೆಲ್ಲವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ನಕಲಿ ಸೇಲ್ ಡೀಡ್ ಅಥವಾ ಟೈಟಲ್ ಡೀಡ್ ನಕಲನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ 7 ರಿಂದ 10 ಕೆಲಸದ ದಿನಗಳಲ್ಲಿ ನೀಡಲಾಗುತ್ತದೆ.

ನಕಲು ಆಸ್ತಿ ದಾಖಲೆಗಳು ಉಪ-ರಿಜಿಸ್ಟ್ರಾರ್ ಅವರ ಅನುಮೋದನೆಯೊಂದಿಗೆ ಮುದ್ರೆಯೊತ್ತಿರುವುದರಿಂದ ಅವು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ. ಈ ಮೂಲಕ ಆಸ್ತಿ ಮಾರಾಟ ಮತ್ತು ಸಾಲದ ಅರ್ಜಿಯಂತಹ ಪ್ರಮಾಣೀಕೃತ ನಕಲು ವಹಿವಾಟುಗಳನ್ನು ಮಾಡಬಹುದು.

ಇದನ್ನೂ ಓದಿ: ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.