ನವದೆಹಲಿ: ಎಲ್ಐಸಿಯ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಸಿದ್ಧವಾಗಿದೆ. ಬಹುತೇಕ ಐಪಿಒ ಬೆಲೆ ಸುಮಾರು ಅಂದಾಜು 902 ರಿಂದ 949 ರೂ.ಗಳ ನಡುವೆ ನಿಗದಿ ಆಗುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ವಿಶೇಷ ಎಂದರೆ, ಎಲ್ಐಸಿ ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಸಿಗಲಿದೆ. ಇನ್ನು ಚಿಲ್ಲರೆ ಹೂಡಿಕೆದಾರರಿಗೆ 45 ರೂಪಾಯಿ ರಿಯಾಯಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಹುನಿರೀಕ್ಷಿತ ಐಪಿಒ ಮೇ 4 ರಿಂದ ಗ್ರಾಹಕರಿಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮೇ 9 ರವರೆಗೆ ಗ್ರಾಹಕರು ಎಲ್ಐಪಿ ಐಪಿಒದ ಚಂದಾದಾರಿಕೆ ಪಡೆಯಬಹುದು ಎಂದು ತಿಳಿದು ಬಂದಿದೆ. ಸೋಮವಾರ, ಮಾರುಕಟ್ಟೆಗಳ ನಿಯಂತ್ರಕ SEBI ನವೀಕರಿಸಿದ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ ತನ್ನ ಒಪ್ಪಿಗೆ ನೀಡಿದೆ, ಇದು ಹಿಂದಿನ ಕರಡು ಪ್ರತಿಗಳಲ್ಲಿ ಉಲ್ಲೇಖಿಸಲಾದ 5 ಪ್ರತಿಶತದ ಬದಲಿಗೆ 3.5 ಶೇಕಡಾ ಪಾಲನ್ನು ಸರ್ಕಾರ ಪಟ್ಟಿ ಮಾಡಿದೆ.
ಎಲ್ಐಸಿ ಐಪಿಒ ಮೌಲ್ಯ ಸುಮಾರು 6 ಲಕ್ಷ ರೂಪಾಯಿಗಳಾಗಿದ್ದು, ಸುಮಾರು 21 ಸಾವಿರ ಕೋಟಿ ರೂಪಾಯಿಗಳ ಮಾಪ್ - ಅಪ್ ಇರಲಿದೆ. ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಅತಿದೊಡ್ಡ ಐಪಿಒ ಇದಾಗಿದೆ. ಪಿಂಚಣಿ ಮತ್ತು ಸಾರ್ವಭೌಮ ನಿಧಿಯಿಂದ ಹೆಚ್ಚಿನ ಪಾಲನ್ನು ಪಡೆಯಲು ಸರ್ಕಾರವು ನಿರ್ಧಾರ ಮಾಡಿದೆ.
ಇದನ್ನು ಓದಿ:ನೀವು ಡಿಜಿಟಲ್ ಪಾವತಿಯನ್ನೇ ಅವಲಂಬಿಸಿದ್ದೀರಾ? ಈ ಎಚ್ಚರಿಕೆಗಳನ್ನು ಕಡ್ಡಾಯ ಪಾಲಿಸಿ..