ETV Bharat / business

ಮಕ್ಕಳ ತ್ವಚೆಗೆ ಹಾನಿ.. ಜಾನ್ಸನ್​ ಅಂಡ್​ ಜಾನ್ಸನ್​ ಪೌಡರ್​ ಉತ್ಪಾದನೆ ರದ್ದಿಗೆ ಆದೇಶ

author img

By

Published : Sep 18, 2022, 10:56 PM IST

ಮಕ್ಕಳ ತ್ವಚೆ ಮುದವಾಗಿಡಲು ಬಳಸುವ ಜಾನ್ಸನ್​ ಅಂಡ್​ ಜಾನ್ಸನ್​ ಪೌಡರ್​ ನವಜಾತ ಶಿಶುಗಳ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಕಂಪನಿಗೆ ನೀಡಿದ ಪರವಾನಗಿಯನ್ನು ರದ್ದು ಮಾಡಲಾಗಿದೆ.

johnsons-baby-powder-licence-cancelled-by-maharashtra
ಜಾನ್ಸನ್​ ಅಂಡ್​ ಜಾನ್ಸನ್​ ಪೌಡರ್​ ಉತ್ಪಾದನೆ ರದ್ದಿಗೆ ಆದೇಶ

ಮುಂಬೈ: ಮಕ್ಕಳ ತ್ವಚೆಗೆ ಮುದ ನೀಡಲಿ ಎಂದು ಬಳಸುವ ಜಾನ್ಸನ್​ ಅಂಡ್​ ಜಾನ್ಸನ್​ ಬೇಬಿ ಪೌಡರ್​ನ ಉತ್ಪಾದನೆಗೆ ನೀಡಿದ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಇಲಾಖೆ ರದ್ದು ಮಾಡಿದೆ. ಇದಕ್ಕೆ ಕಾರಣ ಜಾನ್ಸನ್​ ಅಂಡ್​ ಜಾನ್ಸನ್​ ಪೌಡರ್​ ನವಜಾತ ಶಿಶುಗಳ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಈ ಕಂಪನಿಯ ಪೌಡರ್​ ಅನ್ನು ಪ್ರಯೋಗಾಲಯಲ್ಲಿ ನಡೆಸಿದ ಪರೀಕ್ಷೆಯ ವೇಳೆ ಪಿಎಚ್​ ಮಾನದಂಡ ನಿಗದಿಗಿಂತಲೂ ಕಡಿಮೆ ಇರುವುದು ಕಂಡು ಬಂದಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ ಈ ವರದಿ ನೀಡಿದೆ.

ಇದರಿಂದ ಮಕ್ಕಳ ತ್ವಚೆಗೆ ಹಾನಿ ಉಂಟು ಉಂಟಾಗುವ ಕಾರಣಕ್ಕಾಗಿ ಕಂಪನಿಗೆ ಮಹಾರಾಷ್ಟ್ರದ ಆಹಾರ ಮತ್ತು ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಮಾರುಕಟ್ಟೆಯಿಂದ ಉತ್ಪಾದನೆಯನ್ನು ಹಿಂಪಡೆಯುವಂತೆ ಆದೇಶಿಸಲಾಗಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ಕಂಪನಿ ಇನ್ನಷ್ಟು ಪರೀಕ್ಷೆಗೆ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಗೆ ಕಳುಹಿಸಲು ನ್ಯಾಯಾಲಯದಲ್ಲಿ ದಾವೆ ಹೂಡಿದೆ.

ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ,ಬೆಳ್ಳಿ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.