ETV Bharat / business

ಭಾರತದಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆ ಸವಾಲಿನಿಂದ ಕೂಡಿದೆ: ಯುಎಸ್​ಟಿಆರ್​ - ಯುನೈಟೆಡ್​ ಸ್ಟೇಟ್ಸ್​ ಟ್ರೇಡ್ ರೆಪ್ರೆಸೆಂಟೇಟಿವ್‌

ಕಳೆದ ವರ್ಷದಲ್ಲಿ ಕೆಲವು ಕ್ಷೇತ್ರಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಗೆ ಹಲವಾರು ಕ್ರಮಗಳನ್ನು ಜಾರಿಗೊಳಿಸಲು ಭಾರತ ಯತ್ನಿಸಿದೆ. ಆದರೆ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಯುಎಸ್​ಟಿಆರ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ip-protection-india-among-most-challenging-economies-says-ustr
ಭಾರತದಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆ ಸವಾಲಿನದ್ದಾಗಿದೆ: ಯುಎಸ್​ಟಿಆರ್​
author img

By

Published : Apr 28, 2022, 7:03 AM IST

ವಾಷಿಂಗ್ಟನ್(ಅಮೆರಿಕ): ಜಗತ್ತಿನ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಕೂಡಾ ಒಂದಾಗಿದ್ದು, ಭಾರತದಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆ ಮತ್ತು ಜಾರಿಗೊಳಿಸುವಿಕೆ ಸವಾಲಾಗಿ ಮಾರ್ಪಟ್ಟಿದೆ ಎಂದು ಯುನೈಟೆಡ್​ ಸ್ಟೇಟ್ಸ್​ ಟ್ರೇಡ್ ರೆಪ್ರೆಸೆಂಟೇಟಿವ್‌ನ ಕಚೇರಿ ತನ್ನ ವರದಿಯಲ್ಲಿ ತಿಳಿಸಿದ್ದು, ಆದ್ಯತಾ ಪಟ್ಟಿಯಲ್ಲಿ ಭಾರತವನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.

ಯುನೈಟೆಡ್​ ಸ್ಟೇಟ್ಸ್​ ಟ್ರೇಡ್ ರೆಪ್ರೆಸೆಂಟೇಟಿವ್‌ ಕಚೇರಿಯು 2022ರಲ್ಲಿ 301ನೇ ವಿಶೇಷ ವರದಿಯಲ್ಲಿ ಈ ರೀತಿಯಾಗಿ ಪ್ರಸ್ತಾಪಿಸಿದೆ. ಭಾರತವೂ ಸೇರಿದಂತೆ ಏಳು ದೇಶಗಳನ್ನು ಆದ್ಯತಾ ಪಟ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. ಅರ್ಜೆಂಟೀನಾ, ಚಿಲಿ, ಚೀನಾ,ಇಂಡೋನೇಷ್ಯಾ, ರಷ್ಯಾ ಮತ್ತು ವೆನೆಜುವೆಲಾ ಆದ್ಯತಾ ಪಟ್ಟಿಯಲ್ಲಿರುವ ಇತರ ರಾಷ್ಟ್ರಗಳಾಗಿವೆ.

ಉಕ್ರೇನ್​ನಲ್ಲಿಯೂ ಕೂಡಾ ಬೌದ್ಧಿಕ ಆಸ್ತಿ ರಕ್ಷಣೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆಯನ್ನು ನಡೆಸಬೇಕಿತ್ತು. ಆದರೆ, ರಷ್ಯಾದ ಪೂರ್ವಯೋಜಿತ ಮತ್ತು ಅಪ್ರಚೋದಿತ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಪರಿಶೀಲನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುನೈಟೆಡ್​ ಸ್ಟೇಟ್ಸ್​ ಟ್ರೇಡ್ ರೆಪ್ರೆಸೆಂಟೇಟಿವ್‌ ಹೇಳಿದೆ.

ಅತ್ಯಂತ ಮುಖ್ಯವಾಗಿ ಭಾರತದಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷದಲ್ಲಿ ಕೆಲವು ಕ್ಷೇತ್ರಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಗೆ ಹಲವಾರು ಕ್ರಮಗಳನ್ನು ಜಾರಿಗೊಳಿಸಲು ಭಾರತ ಯತ್ನಿಸಿದೆ. ಆದರೆ, ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2018ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO), 2019ರಲ್ಲಿ ನೈಸ್ ಒಪ್ಪಂದ (Nice Agreement in 2019) ಮತ್ತು ಫೋನೋಗ್ರಾಮ್‌ಗಳ (Phonograms Treaty ) ಒಪ್ಪಂದಗಳಲ್ಲಿ ಭಾರತದ ಪ್ರವೇಶವು ಸಕಾರಾತ್ಮಕ ಹೆಜ್ಜೆಗಳಾಗಿವೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಪೇಟೆಂಟ್ ಹಿಂಪಡೆಯುವಿಕೆಯ ಸಂಭವನೀಯ ಬೆದರಿಕೆ, ಪೇಟೆಂಟ್ ಮಾನ್ಯತೆಯ ಕೊರತೆ ಮತ್ತು ಭಾರತೀಯ ಪೇಟೆಂಟ್ ಕಾಯ್ದೆಯಲ್ಲಿನ ಲೋಪದೋಷಗಳು ಕಂಪನಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಯುಎಸ್​ಟಿಆರ್ ಹೇಳಿದೆ.

ವೈದ್ಯಕೀಯ ಸಾಧನಗಳು, ಔಷಧಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳು, ಸೌರ ಶಕ್ತಿ ಉಪಕರಣಗಳು ಮುಂತಾದ ಬೌದ್ಧಿಕ ಆಸ್ತಿ ಹಕ್ಕುಗಳಿರುವ ವಸ್ತುಗಳ ಮೇಲೆ ಭಾರತ ಹೆಚ್ಚುವರಿ ಅಬಕಾರಿ ಸುಂಕ ಹೇರಲಾಗುತ್ತಿದೆ ಎಂದು ಯುನೈಟೆಡ್​ ಸ್ಟೇಟ್ಸ್​ ಟ್ರೇಡ್ ರೆಪ್ರೆಸೆಂಟೇಟಿವ್‌ ಹೇಳಿದೆ.

ಇದನ್ನೂ ಓದಿ: ಗ್ರಾಹಕರ ಸೆಳೆಯಲು ವಾಟ್ಸಾಪ್​ನಿಂದ ಹಣ ಪಾವತಿಗೆ ಕ್ಯಾಶ್​ಬ್ಯಾಕ್​ ಆಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.