ETV Bharat / business

ಸ್ಟಾಕ್ ಮಾರ್ಕೆಟ್​ ಹೂಡಿಕೆ.. ಕರಡಿ ಕುಣಿತ ಮುಗಿದ ಮೇಲೆ ಗೂಳಿ ಓಟ ಖಂಡಿತ ಶುರುವಾಗುತ್ತೆ!! - ಮ್ಯೂಚುವಲ್ ಫಂಡ್ ಹೂಡಿಕೆ

ರಷ್ಯಾ-ಉಕ್ರೇನ್ ಯುದ್ಧ, ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಹಣದುಬ್ಬರ, ಆರ್‌ಬಿಐ ರೆಪೋ ದರ ಹೆಚ್ಚಳ ಮತ್ತು ಯುಎಸ್​ ಫೆಡ್ ಬಡ್ಡಿದರಗಳ ಹೆಚ್ಚಳ ಮುಂತಾದ ಕಾರಣಗಳಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಏರಿಳಿತಗಳುಂಟಾಗುತ್ತಿವೆ. ಈ ಸನ್ನಿವೇಶದಲ್ಲಿ ಹೂಡಿಕೆದಾರರು ತಾಳ್ಮೆಯಿಂದಿರಬೇಕು ಮತ್ತು ಆತಂಕಕ್ಕೆ ಒಳಗಾಗಬಾರದು. ಅಲ್ಪಾವಧಿಯ ದೃಷ್ಟಿಕೋನದ ಬದಲಾಗಿ ನಾವು ದೀರ್ಘಾವಧಿಯ ಕಾರ್ಯತಂತ್ರದೊಂದಿಗೆ ಮುಂದುವರಿಯಬೇಕು.

Investment mantras to be successful in stock market

author img

By

Published : Jul 9, 2022, 12:54 PM IST

Updated : Jul 9, 2022, 3:11 PM IST

ಹೈದರಾಬಾದ್: ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಮಾರ್ಗಗಳಲ್ಲಿ ಷೇರು ಮಾರುಕಟ್ಟೆಯೂ ಒಂದು. ಆದರೆ, ಷೇರು ಸೂಚ್ಯಂಕಗಳು ಕೆಲವೊಮ್ಮೆ ಜೀವಮಾನದಲ್ಲೇ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ನಾವು ನೋಡುತ್ತೇವೆ ಮತ್ತು ಹೂಡಿಕೆದಾರರ ಹಲವಾರು ಲಕ್ಷ ಕೋಟಿ ರೂಪಾಯಿಗಳ ಸಂಪತ್ತು ಕ್ಷಣಮಾತ್ರದಲ್ಲಿ ಕರಗಿ ಹೋಗುವ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಮತ್ತು ಅಲ್ಪಾವಧಿಯಲ್ಲಿ ನಷ್ಟಗಳುಂಟಾಗುವುದು ಕೂಡ ಸಹಜ. ನಷ್ಟ ಅನುಭವಿಸಿದ ನಂತರವಷ್ಟೇ ನಾವು ಭವಿಷ್ಯದಲ್ಲಿ ಲಾಭವನ್ನು ನಾವು ಕಾಣಬಹುದು. ಷೇರು ಸೂಚ್ಯಂಕಗಳು ಕುಸಿಯುತ್ತಿರುವ ಸಮಯದಲ್ಲಿ ಏನು ಮಾಡಬೇಕೆಂದು ಎಂಬುದನ್ನು ಹೂಡಿಕೆದಾರರು ತಿಳಿದುಕೊಂಡಿರುವುದು ಅಗತ್ಯ.

ಲಾಭ ಗಳಿಸುವ ಸೂತ್ರ: ಒಳ್ಳೆಯ ಷೇರುಗಳು ಸೂಕ್ತವಾದ ಬೆಲೆಯ ಮಟ್ಟಕ್ಕೆ ಬಂದಾಗ ಹೂಡಿಕೆ ಮಾಡಬೇಕು ಮತ್ತು ಬೆಲೆ ಏರಿಕೆಯಾದಾಗ ಮಾರಾಟ ಮಾಡಬೇಕು. ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಇದೇ ಮುಖ್ಯ ತತ್ವವಾಗಿದೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್‌, ಮನೆಯಿಂದ ಕೆಲಸ ಮಾಡುವಿಕೆ ಮತ್ತು ಇನ್ನೂ ಹಲವಾರು ಕಾರಣಗಳಿಂದಾಗಿ ಸದ್ಯ ಅನೇಕ ಜನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

ಏರಿಳಿತಗಳು ಸಹಜ: ಷೇರು ಮಾರುಕಟ್ಟೆಯು ಕುಸಿತದಿಂದ ಚೇತರಿಸಿಕೊಂಡಂತೆ ಮತ್ತು ಜೀವಿತಾವಧಿಯ ದಾಖಲೆಯ ಗರಿಷ್ಠ ಮಟ್ಟಕ್ಕೆ ಹೋದ ಸಂದರ್ಭದಲ್ಲಿ ಅನೇಕರು ಸಾಕಷ್ಟು ಲಾಭ ಗಳಿಸಿದರು. ಆದರೆ, ಷೇರು ಮಾರುಕಟ್ಟೆಯಲ್ಲಿನ ಪರಿಸ್ಥಿತಿಗಳು ಎಂದಿಗೂ ಒಂದೇ ರೀತಿ ಆಗಿರುವುದಿಲ್ಲ ಎಂಬುದು ಗೊತ್ತಿರಲಿ.

ರಷ್ಯಾ-ಉಕ್ರೇನ್ ಯುದ್ಧ, ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಹಣದುಬ್ಬರ, ಆರ್‌ಬಿಐ ರೆಪೋ ದರ ಹೆಚ್ಚಳ ಮತ್ತು ಯುಎಸ್​ ಫೆಡ್ ಬಡ್ಡಿದರಗಳ ಹೆಚ್ಚಳ ಮುಂತಾದ ಕಾರಣಗಳಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಏರಿಳಿತಗಳುಂಟಾಗುತ್ತಿವೆ. ಈ ಸನ್ನಿವೇಶದಲ್ಲಿ ಹೂಡಿಕೆದಾರರು ತಾಳ್ಮೆಯಿಂದಿರಬೇಕು ಮತ್ತು ಆತಂಕಕ್ಕೆ ಒಳಗಾಗಬಾರದು. ಅಲ್ಪಾವಧಿಯ ದೃಷ್ಟಿಕೋನದ ಬದಲಾಗಿ ನಾವು ದೀರ್ಘಾವಧಿಯ ಕಾರ್ಯತಂತ್ರದೊಂದಿಗೆ ಮುಂದುವರಿಯಬೇಕು. ಭಾವನೆಗಳಿಗಿಂತ ವಿಶ್ಲೇಷಣೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬೇರ್ ಮಾರುಕಟ್ಟೆಯ ಬುಲ್ ಮಾರ್ಕೆಟ್ ಬಂದೇ ಬರುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಇತರರು ಹೆದರಿದಾಗ : ಇಳಿಕೆ ಕಂಡ ಮಾರುಕಟ್ಟೆಯು ಹೂಡಿಕೆದಾರರಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಇದು ಹೂಡಿಕೆಯನ್ನು ಕಳೆದುಕೊಳ್ಳುವ ಭಯ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಅಂಥ ಸಂದರ್ಭಗಳಲ್ಲಿ, ನಾವು ಲಾಭವಿಲ್ಲದೆ ಷೇರುಗಳನ್ನು ಮಾರಾಟ ಮಾಡಲೇಕೂಡದು. ಬದಲಿಗೆ ನಾವು ಸರಿಯಾದ ಸಮಯಕ್ಕಾಗಿ ಕಾಯಬೇಕು. ಇತರರು ಹೆದರಿದಾಗ.. ನಾವು ಮೊದಲು ಹೂಡಿಕೆ ಮಾಡಬೇಕು.. ಇತರರು ಹೂಡಿಕೆ ಮಾಡಲು ಉತ್ಸುಕರಾದಾಗ ನಾವು ಹೆದರಬೇಕು'... ಇದು ಷೇರು ಮಾರುಕಟ್ಟೆಯ ಮೂಲ ತತ್ವ.

ಉತ್ತಮ ಕಂಪನಿಗಳ ಷೇರುಗಳತ್ತ ಗಮನವಿರಲಿ: ಅನೇಕ ಹೂಡಿಕೆದಾರರು ಬೆಲೆ ಕುಸಿದಾಗ ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಾರೆ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿರುವಾಗ ಉತ್ತಮ ಷೇರುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಮಾರುಕಟ್ಟೆಗಳು ಕುಸಿತ ಕಂಡಾಗ ಅನೇಕ ದೊಡ್ಡ ಕಂಪನಿಗಳ ಷೇರುಗಳು ಗರಿಷ್ಠ ಮಟ್ಟದಿಂದ 52 ವಾರಗಳ ಕನಿಷ್ಠ ಮಟ್ಟಕ್ಕೆ ಕೆಲವೊಮ್ಮೆ ಕುಸಿಯುತ್ತವೆ. ಆದರೆ ಮಾರುಕಟ್ಟೆಯ ಪರಿಸ್ಥಿತಿಗಳು ಸುಧಾರಿಸಿದಾಗ ಈ ಷೇರುಗಳು ತ್ವರಿತವಾಗಿ ಚೇತರಿಸಿಕೊಂಡು ಮತ್ತೆ ಗರಿಷ್ಠ ಮಟ್ಟಕ್ಕೆ ತಲುಪುತ್ತವೆ. ಹೀಗಾಗಿ ನಾವು ಈ ಕಂಪನಿಗಳ ಷೇರುಗಳಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಬೇಕು.

ಹೂಡಿಕೆಯಲ್ಲಿ ವೈವಿಧ್ಯತೆ: ಮಾರುಕಟ್ಟೆ ಏರುತ್ತಿದೆಯೇ ಅಥವಾ ಇಳಿಯುತ್ತಿದೆಯೇ ಎಂಬುದರ ಹೊರತಾಗಿ ಹೂಡಿಕೆಯ ಎಲ್ಲ ಹಂತಗಳಲ್ಲಿ ವೈವಿಧ್ಯತೆ ಇರುವಂತೆ ನೋಡಿಕೊಳ್ಳುವುದು ಯಾವಾಗಲೂ ಉತ್ತಮ. ಎಲ್ಲಾ ಕಂಪನಿಯ ಷೇರುಗಳು ಒಂದೇ ಸಮಯದಲ್ಲಿ ಒಂದೇ ಪ್ರಮಾನದಲ್ಲಿ ಕುಸಿಯುವುದಿಲ್ಲ. ಮಾರುಕಟ್ಟೆ ಕುಸಿದಾಗಲೂ ಕೆಲ ಷೇರುಗಳು ಲಾಭ ಗಳಿಸುತ್ತವೆ. ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿರುವುದೂ ಘಟಿಸಬಹುದು. ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ- ಹೆಚ್ಚಿನ ಸಾಲ ಹೊಂದಿರುವ ಕಂಪನಿಗಳು ಮತ್ತು ಕಡಿಮೆ ಬೆಲೆ ಹೊಂದಿರುವ ಷೇರುಗಳನ್ನು ಕೊಳ್ಳುವುದರಿಂದ ತಪ್ಪಿಸಿಕೊಳ್ಳಬೇಕು. ಇಂಥ ಷೇರುಗಳು ನಿಮ್ಮ ಲಿಸ್ಟ್​ನಲ್ಲಿದ್ದರೆ ತಕ್ಷಣವೇ ಅವುಗಳನ್ನು ತೆಗೆದುಹಾಕಿ.

ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯಿರಿ. ತಾಂತ್ರಿಕವಾಗಿ ಮುಂದುವರಿದ ಮತ್ತು ಬಲಿಷ್ಠವಾದ ಬ್ಯಾಲೆನ್ಸ್ ಶೀಟ್ ಹೊಂದಿರುವ ಕಂಪನಿಗಳನ್ನು ಪರಿಗಣಿಸುವುದು ಉತ್ತಮ. ಒಂದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಬದಲು, ನೀವು ಈ ಸಮಯದಲ್ಲಿ ಇಂಡೆಕ್ಸ್​ ಫಂಡ್​ಗಳು ಮತ್ತು ಇಟಿಎಫ್‌ಗಳನ್ನು ಆಯ್ಕೆ ಮಾಡಬಹುದು. ಹೂಡಿಕೆಗಳನ್ನು ಹಣಕಾಸಿನ ಗುರಿಗಳೊಂದಿಗೆ ಜೋಡಿಸಬೇಕು. ನಷ್ಟದ ಅಪಾಯವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆಯ ಅವಧಿಯನ್ನು ಅವಲಂಬಿಸಿ, ಷೇರುಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು.

SIP ಹೂಡಿಕೆ ಬಗ್ಗೆ ತಿಳಿದುಕೊಳ್ಳಿ: ವ್ಯವಸ್ಥಿತ ಹೂಡಿಕೆ ಯೋಜನೆ (SIP)ಯು ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಕೆಲ ಉತ್ತಮ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿ ಮತ್ತು ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಪ್ರಯತ್ನಿಸಿ. ಇವುಗಳ ಮೂಲಕ, ಷೇರುಗಳು, ಬಾಂಡ್‌ಗಳು ಮತ್ತು ಕಮಾಡಿಟೀಸ್​ನಂಥ ವಿವಿಧ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಮಾರುಕಟ್ಟೆಯ ಏರಿಳಿತಗಳನ್ನು ಲೆಕ್ಕಿಸದೆ, ಉತ್ತಮ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲು ನೀವು ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಬಹುದು. ಈ ಕಂಪನಿಗಳಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಬದಲು ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಇದು ಮಾರುಕಟ್ಟೆಯ ಏರಿಳಿತಗಳನ್ನು ಸಮತೋಲನ ಮಾಡಲು ಮಾಡಲು ಸಹಾಯ ಮಾಡುತ್ತದೆ. ನೀವು ಲಾಭ ಗಳಿಸಲು ಬಯಸಿದರೆ ದೀರ್ಘಕಾಲದವರೆಗೆ SIP ಯಲ್ಲಿ ಹೂಡಿಕೆ ಮಾಡುವುದು ಅಗತ್ಯ. ಅಂದಾಗ ಮಾತ್ರ ನೀವು ಚಕ್ರಬಡ್ಡಿಯ ಪ್ರಯೋಜನಗಳನ್ನು ಪಡೆಯಬಹುದು.

ತಂತ್ರಗಾರಿಕೆ ಬೇಕು: ಷೇರು ಮಾರುಕಟ್ಟೆಯ ಏರಿಳಿತಗಳು ಏನೇ ಆಗಿದ್ದರೂ, ಕೆಲವು ಷೇರುಗಳು ಸ್ಥಿರವಾದ ಕಾರ್ಯಕ್ಷಮತೆಯನ್ನು ತೋರಿಸುತ್ತವೆ. ಒಂದು ರೀತಿಯಲ್ಲಿ, ಇವುಗಳನ್ನು ರಕ್ಷಣಾತ್ಮಕ ಷೇರುಗಳೆಂದು ಪರಿಗಣಿಸಬಹುದು. ಇಂಥ ರಕ್ಷಣಾತ್ಮಕ ಷೇರುಗಳನ್ನು ಗುರುತಿಸಿ. ಸಾಮಾನ್ಯವಾಗಿ ಆಹಾರ, ವೈಯಕ್ತಿಕ ಆರೈಕೆ, ಫಾರ್ಮಾ, ಆರೋಗ್ಯ ಮತ್ತು ಗ್ರಾಹಕ ವಸ್ತುಗಳ ವಲಯಗಳ ಷೇರುಗಳು ಬೇರ್ ಮಾರುಕಟ್ಟೆ ಅಥವಾ ಬುಲ್ ಮಾರುಕಟ್ಟೆಯನ್ನು ಲೆಕ್ಕಿಸದೆ ಕೆಲಸ ಮಾಡುತ್ತವೆ. ಇವುಗಳಲ್ಲಿ ಅತಿ ಉತ್ತಮ ಕಂಪನಿಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಇಳಿಕೆಯಾಗುತ್ತಿರುವ ಮಾರುಕಟ್ಟೆ ನಿಜವಾಗಿಯೂ ಸ್ವಲ್ಪ ಭಯ ಹುಟ್ಟಿಸುತ್ತದೆ. ಆದರೆ, ನೀವು ನಿಮ್ಮ ಹೂಡಿಕೆಯಿಂದ ಲಾಭ ಗಳಿಸಲು ಬಯಸಿದರೆ ಭಯವನ್ನು ನಿಯಂತ್ರಿಸಲೇಬೇಕು. ಸೂಕ್ತ ತಂತ್ರಗಾರಿಕೆ ರೂಪಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವುದು ಷೇರು ಮಾರುಕಟ್ಟೆಯಲ್ಲಿ ಯಶಸ್ಸಿನ ರಹಸ್ಯವಾಗಿದೆ.

Last Updated : Jul 9, 2022, 3:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.