ETV Bharat / business

ಬೆಂಗಳೂರಿನ ತಂತ್ರಜ್ಞಾನ ದೈತ್ಯ ಇನ್ಫೋಸಿಸ್​ಗೆ 5686 ಕೋಟಿ ರೂಪಾಯಿ ಲಾಭ - ಇನ್ಫೋಸಿಸ್​ಗೆ ಕೋಟ್ಯಂತರ ರೂಪಾಯಿ ಲಾಭ

ಇನ್ಫೋಸಿಸ್ ಒಂದು ದಶಕದಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ವಿಭಿನ್ನವಾದ ಡಿಜಿಟಲ್ ಮತ್ತು ಇನ್ಫೋಸಿಸ್ ಕೋಬಾಲ್ಟ್ ನೇತೃತ್ವದ ಕ್ಲೌಡ್ ಸೇವೆಯಿಂದಾಗಿ ಸಂಸ್ಥೆ ಲಾಭ ಗಳಿಸಿದೆ. ನಮ್ಮ ಗ್ರಾಹಕರ ವಿಶ್ವಾಸ ಮತ್ತು ತಂತ್ರಜ್ಞಾನದ ಸಹಾಯದಿಂದ ಮಾರುಕಟ್ಟೆಯಲ್ಲಿ ಲಾಭವನ್ನು ಮುಂದುವರಿಸಲಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಹೇಳಿದ್ದಾರೆ..

infosys
ಇನ್ಫೋಸಿಸ್
author img

By

Published : Apr 13, 2022, 5:38 PM IST

ಬೆಂಗಳೂರು : ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಮಾರ್ಚ್​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ 5,686 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ.12ರಷ್ಟು ಏರಿಕೆ ಕಂಡಿದೆ.

ಬೆಂಗಳೂರು ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆಯು ಕ್ಲೌಡ್​ ಸೇವೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದು, ಲಾಭಕ್ಕೆ ಕಾರಣವಾಗಿದೆ. ಅಲ್ಲದೇ ಜಾಗತಿಕವಾಗಿ ಡಿಜಿಟಲ್​ ಸೇವೆಗಾಗಿ ಅತಿ ಹೆಚ್ಚಿನ ವ್ಯಾಪಾರ ಒಪ್ಪಂದ ಮಾಡಿಕೊಂಡ ಪರಿಣಾಮ ಸಂಸ್ಥೆಯ ಆದಾಯವು ಹೆಚ್ಚಿದೆ. ಇದು ಈ ತ್ರೈಮಾಸಿಕದಲ್ಲಿ ಶೇ.12ರಷ್ಟು ಏರಿಕೆಯಾಗಿ, 5686 ಕೋಟಿ ರೂಪಾಯಿ ಲಾಭ ಗಳಿಸಿದೆ.

ಈ ಹಿಂದಿನ ತ್ರೈಮಾಸಿಕದಲ್ಲಿ ಸಂಸ್ಥೆಯು 5,076 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕಾರ್ಯಾಚರಣೆಯ ಭಾಗವಾಗಿ ಸಂಸ್ಥೆ ಪಡೆದ ಆದಾಯವು 32,276 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 26,311 ಕೋಟಿ ರೂಪಾಯಿ ಆದಾಯ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಶೇ.23ರಷ್ಟು ಹೆಚ್ಚಾಗಿದೆ.

ಇನ್ಫೋಸಿಸ್ ಒಂದು ದಶಕದಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ವಿಭಿನ್ನವಾದ ಡಿಜಿಟಲ್ ಮತ್ತು ಇನ್ಫೋಸಿಸ್ ಕೋಬಾಲ್ಟ್ ನೇತೃತ್ವದ ಕ್ಲೌಡ್ ಸೇವೆಯಿಂದಾಗಿ ಸಂಸ್ಥೆ ಲಾಭ ಗಳಿಸಿದೆ. ನಮ್ಮ ಗ್ರಾಹಕರ ವಿಶ್ವಾಸ ಮತ್ತು ತಂತ್ರಜ್ಞಾನದ ಸಹಾಯದಿಂದ ಮಾರುಕಟ್ಟೆಯಲ್ಲಿ ಲಾಭವನ್ನು ಮುಂದುವರಿಸಲಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಹೇಳಿದ್ದಾರೆ.

ಓದಿ: ಐದು ದಿನಗಳಿಂದ ವ್ಯತ್ಯಾಸ ಕಾಣದ ಪೆಟ್ರೋಲ್, ಡಿಸೇಲ್ ದರ.. ಹೀಗಿದೆ ತೈಲ ಬೆಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.