ETV Bharat / business

ಮಾರ್ಚ್‌ನಲ್ಲಿ ಉತ್ಪಾದನಾ ಚಟುವಟಿಕೆಯಲ್ಲಿ ನಿರುತ್ಸಾಹ: 6 ತಿಂಗಳಿಂದ ನಿಧಾನಗತಿಯಲ್ಲಿ ಉತ್ಪಾದನೆ, ಮಾರಾಟ - ಮಾರ್ಚ್‌ನಲ್ಲಿ ಮಧ್ಯಮವಾಗಿರುವ ಭಾರತದ ಉತ್ಪಾದನಾ ಚಟುವಟಿಕೆ

ಮಾಸಿಕ ಸಮೀಕ್ಷೆಯ ಪ್ರಕಾರ, ಹೊಸ ಆರ್ಡರ್‌ಗಳು ಮತ್ತು ಉತ್ಪಾದನೆಯಲ್ಲಿ ಕಂಪನಿಗಳು ಮೃಧುವಾದ ವಿಸ್ತರಣೆಗಳನ್ನು ವರದಿ ಮಾಡುವುದರೊಂದಿಗೆ ಭಾರತದ ಉತ್ಪಾದನಾ ವಲಯದ ಚಟುವಟಿಕೆಗಳು ಮಾರ್ಚ್‌ನಲ್ಲಿ ಮಾಡರೇಟ್ ಆಗಿವೆ.

India's manufacturing activities moderate in March
ಭಾರತದ ಉತ್ಪಾದನಾ ವಲಯದ ಚಟುವಟಿಕೆ
author img

By

Published : Apr 4, 2022, 3:55 PM IST

ನವದೆಹಲಿ: ಭಾರತದ ಉತ್ಪಾದನಾ ವಲಯದ ಚಟುವಟಿಕೆ ಮಾರ್ಚ್‌ನಲ್ಲಿ ಮಧ್ಯಮವಾಗಿತ್ತು. ಈ ಸಮಯದಲ್ಲಿ ಕಂಪನಿಗಳ ಹೊಸ ಆರ್ಡರ್‌ ಮತ್ತು ಉತ್ಪಾದನೆ ಸ್ವಲ್ಪ ಹೆಚ್ಚಾಗಿತ್ತು. ಆದ್ರೆ ಹಣದುಬ್ಬರ ಎಂಬುದು ವ್ಯಾಪಾರ ಕುಂಠಿತಗೊಳಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ಸೋಮವಾರ ಹೇಳಿದೆ.

ಮಾರ್ಚ್‌ನಲ್ಲಿ ಭಾರತದ ಉತ್ಪಾದನಾ ಚಟುವಟಿಕೆ ಶೇ 54.0ರಷ್ಟಿದ್ದು, ಇದು ಫೆಬ್ರವರಿಯಲ್ಲಿ 54.9ರಷ್ಟಾಗಿದೆ. ಸೆಪ್ಟೆಂಬರ್ 2021 ರಿಂದ ಉತ್ಪಾದನೆ ಮತ್ತು ಮಾರಾಟದ ವಲಯದಲ್ಲಿ ಬೆಳವಣಿಗೆಯೂ ದುರ್ಬಲ ದರವನ್ನು ಎತ್ತಿ ತೋರಿಸುತ್ತಿದೆ ಎಂದು ಎಸ್ & ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಹೇಳಿದೆ.

ಸತತ ಒಂಬತ್ತು ತಿಂಗಳ ಒಟ್ಟಾರೆ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಸುಧಾರಣೆಯಾಗಿದೆ ಎಂದು ಮಾರ್ಚ್ PMI ಡೇಟಾವು ಸೂಚಿಸಿದೆ. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಿದ್ದರೂ, ಇತ್ತೀಚಿನ ಫಲಿತಾಂಶಗಳು ಕಾರ್ಖಾನೆಯ ಆರ್ಡರ್‌ಗಳು ಮತ್ತು ಉತ್ಪಾದನೆಯಲ್ಲಿ ನಿಧಾನವಾದ ವಿಸ್ತರಣೆಗಳನ್ನು ತೋರಿಸಿದೆ ಹಾಗೂ ಹೊಸ ರಫ್ತು ಆರ್ಡರ್‌ಗಳಲ್ಲಿ ನವೀಕೃತ ಕುಸಿತ ತೋರಿಸಿದೆ ಎಂದು ವರದಿ ಹೇಳಿದೆ. ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ವ್ಯಾಪಾರ ಕುಸಿದಿದೆ. ರಾಸಾಯನಿಕ, ಶಕ್ತಿ, ಬಟ್ಟೆ, ಆಹಾರ ಪದಾರ್ಥಗಳು ಮತ್ತು ಲೋಹದ ವೆಚ್ಚಗಳು ಫೆಬ್ರವರಿಗಿಂತ ಹೆಚ್ಚಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: 1300 ಅಂಕ ಏರಿಕೆ ಕಂಡು 60 ಸಾವಿರ ಗಡಿ ತಲುಪಿದ ಸೆನ್ಸೆಕ್ಸ್​.. ಹೆಚ್​ಡಿಎಫ್​ಸಿ ಷೇರುಗಳಿಗೆ ಭಾರಿ ಲಾಭ

ಸದ್ಯಕ್ಕೆ ಬೇಡಿಕೆಯೂ ಹೆಚ್ಚಿದ್ದು, ಬೆಲೆ ಏರಿಕೆಯೂ ಜಾಸ್ತಿ ಇದೆ. ಆದರೆ, ಹಣದುಬ್ಬರ ಮಾತ್ರ ಜಾಸ್ತಿಯಾಗುತ್ತಲೇ ಇದೆ. ಇದನ್ನ ನಾವು ಕಡಿಮೆ ಮಾಡುವ ಕಡೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಎಸ್ & ಪಿ ಗ್ಲೋಬಲ್‌ನ ಎಕನಾಮಿಕ್ಸ್ ಅಸೋಸಿಯೇಟ್ ಡೈರೆಕ್ಟರ್ ಪೊಲಿಯಾನ್ನಾ ಡಿ ಲಿಮಾ ಹೇಳಿದ್ದಾರೆ.

ಹೊಸ ಆರ್ಡರ್‌ಗಳು ಹೆಚ್ಚಾಗುತ್ತಲೇ ಇದ್ದರೂ, ವಿಸ್ತರಣೆಯ ದರವು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಪ್ರಿ-ಪ್ರೊಡಕ್ಷನ್ ಇನ್ವೆಂಟರಿಗಳು ಮಾರ್ಚ್‌ನಲ್ಲಿ ಏರಿಕೆಯಾಗುತ್ತಲೇ ಇದ್ದವು, ಇದು ಒಂಬತ್ತು ತಿಂಗಳ ಶೇಖರಣೆ ಅನುಕ್ರಮವನ್ನು ಗುರುತಿಸುತ್ತದೆ. ಫೆಬ್ರವರಿಯಲ್ಲಿ ಕಂಡು ಬಂದದ್ದಕ್ಕಿಂತ ಏರಿಕೆ ವೇಗವಾಗಿತ್ತು. ಅಂತಿಮವಾಗಿ, ಭಾರತೀಯ ಸರಕು ಉತ್ಪಾದಕರಿಂದ ಪಡೆದ ಹೊಸ ರಫ್ತು ಆದೇಶಗಳಲ್ಲಿ ಹೊಸ ಕುಸಿತ ಕಂಡು ಬಂದಿದೆ., ಇದು ಎಂಟು ತಿಂಗಳ ಬೆಳವಣಿಗೆಯ ಅನುಕ್ರಮವನ್ನು ಕೊನೆಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.