ETV Bharat / business

ಭಾರತದ ಅಂತರ್ಜಾಲ ಆರ್ಥಿಕತೆ 2030ಕ್ಕೆ $1 ಟ್ರಿಲಿಯನ್ - ಭಾರತದ ಇಂಟರ್​ನೆಟ್​ ಆರ್ಥಿಕತೆ

ಭಾರತದಲ್ಲಿ ಇಂಟರ್ನೆಟ್​​ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಅನೇಕ ವಲಯಗಳು ಅಭಿವೃದ್ಧಿ ಕಾಣುತ್ತಿವೆ. ಇ-ಕಾಮರ್ಸ್​ ವಲಯಕ್ಕೆ ಹೆಚ್ಚು ಪ್ರಯೋಜನವಾಗಿದೆ.

India's internet economy will be 1 trillion dollars by 2030

author img

By

Published : Jun 6, 2023, 5:29 PM IST

ಬೆಂಗಳೂರು: ಭಾರತದಲ್ಲಿ ಇಂಟರ್​​ನೆಟ್​ ವೇಗವಾಗಿ ವಿಸ್ತರಿಸುತ್ತಿದೆ. ದೇಶದ ಇಂಟರ್​ನೆಟ್​ ಆರ್ಥಿಕತೆ 2022ರಲ್ಲಿ 175 ಬಿಲಿಯನ್ ಡಾಲರ್‌ನಿಂದ 2030ರ ವೇಳೆಗೆ 1 ಡಾಲರ್​ ಟ್ರಿಲಿಯನ್​ ತಲುಪಲಿದೆ ಎಂದು ವರದಿ ಅಂದಾಜಿಸಿದೆ.

ಗೂಗಲ್​ ಟೆಮಸೆಕ್​ ಮತ್ತು ಬ್ರೈನ್​ ಆ್ಯಂಡ್​ ಕಂಪನಿಗಳು ಒಟ್ಟಾಗಿ ಬಿಡುಗಡೆ ಮಾಡಿರುವ 'ದಿ ಇ-ಕೊನೊಮಿ ಆಫ್​ ಎ ಬಿಲಿಯನ್​ ಕನೆಕ್ಟೆಡ್​ ಇಂಡಿಯನ್ಸ್'​ ಎಂಬ ವರದಿಯಲ್ಲಿ ಈ ಕುರಿತು ತಿಳಿಸಲಾಗಿದೆ. ಟೈರ್​ 2 ನಗರಗಳಲ್ಲಿ ಇಂಟರ್ನೆಟ್ ಬಳಕೆದಾರರ ಡಿಜಿಟಲ್ ನಡವಳಿಕೆಗಳು, ಆರಂಭಿಕ ಪರಿಸರ ವ್ಯವಸ್ಥೆಗಳು, ಡಿಜಿಟಲೀಕರಣ ಮತ್ತು ಭಾರತದ ಸ್ವದೇಶಿ ಡಿಜಿಟಲ್ ಸಾರ್ವಜನಿಕ ಸರಕುಗಳು ಅಥವಾ ಇಂಡಿಯಾ ಸ್ಟಾಕ್ ಯಶಸ್ಸು ಇಂಟರ್ನೆಟ್ ಆರ್ಥಿಕತೆಯ ಬಲವರ್ಧನೆ ಕಾರಣವಾಗಲಿದೆ.

ಗ್ರಾಹಕರ ಡಿಜಿಟಲ್​ ಒಳಗೊಳ್ಳುವಿಕೆ, ಉದ್ಯಮಿಗಳಿಂದ ತಾಂತ್ರಿಕ ಹೂಡಿಕೆ ಮತ್ತು ಭಾರತದ ಷೇರಿನಲ್ಲಿ ಡಿಜಿಟಲ್​ ಪ್ರಭುತ್ವಗಳು ಮೂರು ಪ್ರಮುಖ ಬಲವಾಗಿದ್ದು, ಇದು ಭಾರತದ ಡಿಜಿಟಲ್​ ಟ್ರಾನ್ಸ್‌ಫಾರ್ಮೆಷನ್​ಗೆ ಪ್ರಮುಖ ತಿರುವು ಎಂದು ಗೂಗಲ್​ ಇಂಡಿಯಾ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್​ ಗುಪ್ತಾ ತಿಳಿಸಿದ್ದಾರೆ.

ಅಂತರ್ಜಾಲ ಆರ್ಥಿಕತೆ ಭಾರತದ ತಾಂತ್ರಿಕ ವಲಯಕ್ಕೆ ಕೊಡುಗೆ ನೀಡುತ್ತಿದ್ದು, 2030ರ ವೇಳೆಗೆ ಶೇ 48ರಿಂದ 62ರಷ್ಟು ಬೆಳವಣಿಗೆ ಕಾಣಲಿದೆ. ಇದು ಭಾರತದ ಜಿಡಿಪಿಯಲ್ಲಿ ಸರಿಸುಮಾರು ಶೇ 4-5 ರಿಂದ 12-13ರಷ್ಟು ಹೆಚ್ಚಳವಾಗಲಿದೆ ಎಂದು ವರದಿ ತಿಳಿಸಿದೆ. 2030ರಲ್ಲಿ 10 ಪ್ರಮುಖ ಗ್ರಾಹಕ ವಲಯಗಳಲ್ಲಿ ಬಳಕೆದಾರರು ಹೆಚ್ಚಿರಲಿದ್ದಾರೆ. ವರದಿ ಅಂದಾಜಿಸುವಂತೆ ಬಿ2ಸಿ ಇ-ಕಾಮರ್ಸ್​ ಡಿಜಿಟಲ್​ ಸೇವೆಯಲ್ಲಿ ಪ್ರಮುಖ ಸ್ಥಾನದಲ್ಲಿ ಮುಂದುವರೆಯಲಿದ್ದು, 2030ರ ವೇಳೆಗೆ ಇದು 5-6 ಪಟ್ಟು ಹೆಚ್ಚಲಿದೆ. ಅಂದರೆ 350 ಯುಎಸ್ ಡಾಲರ್​ನಿಂದ 380 ಬಿಲಿಯನ್​ ಡಾಲರ್​ಗೆ ಆರ್ಥಿಕತೆ ತಲುಪಲಿದೆ.

ಭಾರತದ ಅಂತರ್ಜಾಲ ಆರ್ಥಿಕತೆ ಗಮನಾರ್ಹ ಸಾಮರ್ಥ್ಯ ಹೊಂದಿದ್ದು, ಇದು ಮುಂದಿನ ದಶಕದಲ್ಲಿ 6 ಪಟ್ಟು ಹೆಚ್ಚಲಿದೆ. ಬಿ2ಸಿ ಇ- ಕಾಮರ್ಸ್​​ ಡಿಜಿಟಲ್​ ಜಿಎಂವಿ ಜೊತೆಗೆ ಶೇ 40ರಷ್ಟು ಹೆಚ್ಚಾಗಲಿದೆ. ಬಿ2ಬಿ ವಲಯ ಮತ್ತು ಸ್ಯಾಸ್ ಕೂಡ ಅಭಿವೃದ್ಧಿ ಕಾಣಲಿದೆ ಎಂದು ಬ್ರೈನ್​ ಆ್ಯಂಡ್​ ಕಂಪನಿ (ಭಾರತ) ನಿರ್ವಹಣೆ ಭಾಗಿದಾರ ಪರಿಜಾತ್​ ಘೋಷ್ ಹೇಳಿದ್ದಾರೆ.

ಭಾರತದಲ್ಲಿ 2030ರ ಸುಮಾರಿಗೆ ಆನ್​ಲೈನ್​ ಶಾಪರ್ಸ್​ಗಳು ಹೆಚ್ಚಲಿದ್ದಾರೆ. ಇವರ ಸಂಖ್ಯೆ ಶೇ 60ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸಣ್ಣ ನಗರದಲ್ಲಿ ಇವರ ಸಂಖ್ಯೆ ನಿಧಾನವಾಗಿ ಏರುಗತಿ ಕಾಣುತ್ತಿದೆ. ಆಫರ್​ಗಳು ಮತ್ತು ಲಭ್ಯತೆ ವೈವಿಧ್ಯತೆಯಿಂದ ಡಿ2ಸಿ (ನೇರವಾಗಿ ಗ್ರಾಹಕರಿಗೆ) ಕೂಡ ಹೆಚ್ಚುತ್ತಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಆನ್​ಲೈನ್​ ಪೇಮೆಂಟ್​​, ಕೊಳ್ಳುವಿಕೆ ಮತ್ತು ಹೂಡಿಕೆ ಅಂತರ್ಜಾಲದ ಆರ್ಥಿಕತೆಯಲ್ಲಿ ಪ್ರಮುಖವಾಗಿದೆ. ಟೈರ್​ 2 ಗ್ರಾಹಕರಿಗೆ ಡಿಜಿಟಲ್​ ಹಣಕಾಸಿನ ಸೇವೆ ಅವಿಷ್ಕಾರ ಮತ್ತು ಅಳವಡಿಕೆಯಿಂದ ಸಾಲ ಮತ್ತು ಬಂಡವಾಳ ನೀಡಲಾಗುತ್ತಿದೆ.

ಅಂತರ್ಜಾಲ ಆರ್ಥಿಕತೆ ಪ್ರಸ್ತುತ ಇರುವುದಕ್ಕಿಂತ ಹೆಚ್ಚಾಗುತ್ತಿದೆ. ಭಾರತದ 700 ಮಿಲಿಯನ್ ಇಂಟರ್​ನೆಟ್​ ಬಳಕೆದಾರರು ರಿಯಲ್​ ಟೈಮ್​ ಡಿಜಿಟಲ್​ ಪ್ಲಾಟ್​ಫಾರ್ಮ್​ಗಳ ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ. ಆನ್​ಲೈನ್​ನಲ್ಲಿ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಸಮಯ ಹೆಚ್ಚಳ ಕಂಡಿದೆ. 2030 ರ ವೇಳೆಗೆ ಗ್ರಾಹಕರ ಮನೆಗಳ ಆದಾಯ ಕೂಡ ದ್ವಿಗುಣಗೊಳ್ಳಲಿದ್ದು, ಇದು 2.500 ಡಾಲರ್​ನಿಂದ 5.500 ಡಾಲರ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಡಿಸೆಂಬರ್​ಗೆ ಬಿಎಸ್‌ಇ ಸೆನ್ಸೆಕ್ಸ್​ 68,500 ಅಂಶಕ್ಕೇರುವ ಸಾಧ್ಯತೆ: ಮಾರ್ಗನ್ ಸ್ಟಾನ್ಲಿ ಅಂದಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.