ETV Bharat / business

2023ರಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು $58 ಶತಕೋಟಿ ಏರಿಕೆ - ರೂಪಾಯಿ

ಭಾರತದ ವಿದೇಶಿ ವಿನಿಮಯ ಮೀಸಲು 4.471 ಬಿಲಿಯನ್ ಡಾಲರ್ ಏರಿಕೆಯಾಗಿ 620.441 ಬಿಲಿಯನ್ ಡಾಲರ್​ಗೆ ತಲುಪಿದೆ.

India's forex reserves rose by USD 58 billion cumulatively in 2023

author img

By ANI

Published : Dec 31, 2023, 3:47 PM IST

ನವದೆಹಲಿ: ಡಿಸೆಂಬರ್ 22, 2023 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 4.471 ಬಿಲಿಯನ್ ಡಾಲರ್ ಏರಿಕೆಯಾಗಿ 620.441 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2023 ರ ಕ್ಯಾಲೆಂಡರ್ ವರ್ಷದಲ್ಲಿ ಆರ್​ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹಕ್ಕೆ ಸುಮಾರು 58 ಬಿಲಿಯನ್ ಡಾಲರ್ ಸೇರಿಸಿದೆ.

ಕಳೆದ ವಾರ, ವಿದೇಶಿ ವಿನಿಮಯ ಮೀಸಲುಗಳ ಅತಿದೊಡ್ಡ ಅಂಶವಾದ ಭಾರತದ ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್​ಸಿಎ) 4.698 ಬಿಲಿಯನ್ ಡಾಲರ್​ನಷ್ಟು ಏರಿಕೆಯಾಗಿ 549.747 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಆರ್​ಬಿಐನ ಸಾಪ್ತಾಹಿಕ ಅಂಕಿ ಅಂಶಗಳು ತಿಳಿಸಿವೆ. ವಾರದಲ್ಲಿ ಚಿನ್ನದ ಮೀಸಲು 102 ಮಿಲಿಯನ್ ಡಾಲರ್ ಇಳಿದು 474.74 ಬಿಲಿಯನ್ ಡಾಲರ್​ಗೆ ತಲುಪಿದೆ. 2022 ರಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ ಒಟ್ಟಾರೆಯಾಗಿ 71 ಬಿಲಿಯನ್ ಡಾಲರ್ ಕುಸಿದಿತ್ತು ಎಂಬುದು ಗಮನಾರ್ಹ.

ವಿದೇಶಿ ವಿನಿಮಯ ಮೀಸಲು (ಎಫ್ಎಕ್ಸ್ ಮೀಸಲುಗಳು) ರಾಷ್ಟ್ರದ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರವು ಹೊಂದಿರುವ ಸ್ವತ್ತುಗಳಾಗಿವೆ. ಇದನ್ನು ಸಾಮಾನ್ಯವಾಗಿ ಮೀಸಲು ಕರೆನ್ಸಿಗಳಲ್ಲಿ ಇರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಯುಎಸ್ ಡಾಲರ್ ಮತ್ತು ಸ್ವಲ್ಪ ಮಟ್ಟಿಗೆ ಯುರೋ, ಜಪಾನೀಸ್ ಯೆನ್ ಮತ್ತು ಪೌಂಡ್ ಸ್ಟರ್ಲಿಂಗ್​ ಕರೆನ್ಸಿಗಳ ರೂಪದಲ್ಲಿರುತ್ತವೆ. ಅಂತರರಾಷ್ಟ್ರೀಯ ಬಾಕಿ ಪಾವತಿ ಮಾಡಲು ಮತ್ತು ವಿನಿಮಯ ದರದ ಅಪಾಯಗಳ ವಿರುದ್ಧ ರಕ್ಷಣೆ ಪಡೆಯುವುದಕ್ಕಾಗಿ ವಿದೇಶಿ ವಿನಿಮಯ ಮೀಸಲುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.

ಡಿಸೆಂಬರ್ 15 ಕ್ಕೆ ಕೊನೆಗೊಂಡ ಕಳೆದ ವಾರದಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು 9.112 ಬಿಲಿಯನ್ ಡಾಲರ್ ಏರಿಕೆಯಾಗಿ 615.971 ಬಿಲಿಯನ್ ಡಾಲರ್​ಗೆ ತಲುಪಿತ್ತು. ಅಕ್ಟೋಬರ್ 2021 ರಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ 645 ಬಿಲಿಯನ್ ಡಾಲರ್ ತಲುಪಿತ್ತು.

ಸಾಮಾನ್ಯವಾಗಿ ಆರ್​ಬಿಐ ಕಾಲಕಾಲಕ್ಕೆ ರೂಪಾಯಿಯಲ್ಲಿ ತೀವ್ರ ಅಪಮೌಲ್ಯವನ್ನು ತಡೆಗಟ್ಟುವ ಉದ್ದೇಶದಿಂದ ಡಾಲರ್​ಗಳ ಮಾರಾಟ ಸೇರಿದಂತೆ ನಗದು ನಿರ್ವಹಣೆಯ ಮೂಲಕ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ. ಆರ್​ಬಿಐ ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತದೆ ಮತ್ತು ಯಾವುದೇ ಪೂರ್ವನಿರ್ಧರಿತ ಮಟ್ಟ ಅಥವಾ ಬ್ಯಾಂಡ್ ಅನ್ನು ಉಲ್ಲೇಖಿಸದೆ, ವಿನಿಮಯ ದರದಲ್ಲಿ ಅತಿಯಾದ ಚಂಚಲತೆಯನ್ನು ನಿಯಂತ್ರಿಸುವ ಮೂಲಕ ಕ್ರಮಬದ್ಧ ಮಾರುಕಟ್ಟೆ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳಲು ಮಾತ್ರ ಮಧ್ಯಪ್ರವೇಶಿಸುತ್ತದೆ.

ಇದನ್ನೂ ಓದಿ : ಭಾರತದ ಆರ್ಥಿಕತೆಗೆ ಉತ್ತೇಜನ ನೀಡಿದ ಕಚ್ಚಾ ತೈಲ ಬೆಲೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.