ETV Bharat / business

ದೇಶದ ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ.. ಒಮ್ಮೆ ಚಾರ್ಜ್​ ಮಾಡಿ 200 ಕಿಮೀ ದೂರ ಕ್ರಮಿಸಿ

ಮುಂಬೈ ಮೂಲದ ಸ್ಟಾರ್ಟಪ್​ ಕಂಪನಿಯಾದ ಪಿಎಂವಿ ಎಲೆಕ್ಟ್ರಿಕ್​ ದೇಶದ ಅಗ್ಗದ ವಿದ್ಯುತ್​ಚ್ಛಾಲಿತ ಕಾರನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಚಿಕ್ಕ ಗಾತ್ರದ ಕಾರನ್ನು ಮೊಬೈಲ್​ ಮೂಲಕವೂ ನಿಯಂತ್ರಿಸಬಹುದಾಗಿದೆ.

author img

By

Published : Nov 16, 2022, 6:18 PM IST

India's cheapest electric car launched
ದೇಶದ ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ

ಸುಸ್ಥಿರ ಮತ್ತು ಪರಿಸರ ಸ್ನೇಹಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಮುಂಬೈ ಮೂಲದ ಸ್ಟಾರ್ಟಪ್​ ಕಂಪನಿಯಾದ ಪಿಎಂವಿ ಎಲೆಕ್ಟ್ರಿಕ್​ ದೇಶದ ಮೊದಲ ಅಗ್ಗದ ಎಲೆಕ್ಟ್ರಿಕ್​​ ಕಾರನ್ನು ಬಿಡುಗಡೆ ಮಾಡಿದೆ. ಇದು 2 ಸೀಟರ್​ ಹೊಂದಿದ್ದು, ಮೊಬೈಲ್​ ಮೂಲಕ ನಿಯಂತ್ರಿಸಬಹುದಾಗಿದೆ. ಇದು ಮೈಕ್ರೋ ಎಲೆಕ್ಟ್ರಿಕ್​ ಕಾರಾಗಿದ್ದು, EAS-E ಎಂದು ಹೆಸರಿಸಲಾಗಿದೆ.

Eas-E ಮೈಕ್ರೋ ಕಾರು PMSM ಮೋಟಾರ್ ಅನ್ನು ಹೊಂದಿದ್ದು, 10 kW ಪವರ್ ಮತ್ತು 50 Nm ಟಾರ್ಕ್ ಅನ್ನು ಇದು ಉತ್ಪಾದಿಸುತ್ತದೆ. ಗಂಟೆಗೆ 70 ಕಿಮೀ ವೇಗದ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಮೂರು ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. 120 ಕಿಮೀ, 160 ಕಿಮೀ ಮತ್ತು 200 ಕಿಮೀ ವರೆಗಿನ ಸಾಮರ್ಥ್ಯದ ಮೂರು ಶ್ರೇಣಿಯ ಕಾರುಗಳನ್ನು ಕಂಪನಿ ಪರಿಚಯಿಸಿದೆ.

4 ಗಂಟೆಯಲ್ಲಿ ಬ್ಯಾಟರಿ ಫುಲ್​: ಎಲೆಕ್ಟ್ರಿಕ್​ ಕಾರಿನ ಬ್ಯಾಟರಿ 3 ರಿಂದ 4 ಗಂಟೆಯಲ್ಲಿ ಪೂರ್ತಿ ಚಾರ್ಜ್​ ಆಗುತ್ತದೆ. ದೇಶದ ಅತಿ ಚಿಕ್ಕ ಎಲೆಕ್ಟ್ರಿಕ್​ ಕಾರು ಎಂದೇ ಹೆಸರಾದ ಇದು, ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದೆ. ಕಾರಿನ ನಿರ್ವಹಣಾ ವೆಚ್ಚ ಪ್ರತಿ ಕಿಮೀಗೆ 75 ಪೈಸೆಗಿಂತ ಕಡಿಮೆಯಿದೆ. ಕ್ರೂಸ್​ ಕಂಟ್ರೋಲ್​, ರಿಮೋಟ್​ ಕಂಟ್ರೋಲ್​, ರಿಮೋಟ್ ಹಾರ್ನ್, ಫಾಲೋ ಮಿ ಹೋಮ್ ಲೈಟ್‌ಗಳು, ಮತ್ತು ದೈತ್ಯ ಬ್ರೇಕಿಂಗ್‌ ವ್ಯವಸ್ಥೆಯ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸಣ್ಣ ಗಾತ್ರದ ಕಾರು IP67 ರೇಟಿಂಗ್​ನೊಂದಿಗೆ ಲೀಥಿಯಂ ಐರನ್​ ಫಾಸ್ಫೇಟ್​ ಬ್ಯಾಟರಿ ಪ್ಯಾಕ್​ ಹೊಂದಿದೆ. ಹೆಚ್ಚಿನ ಸಾಮರ್ಥ್ಯದ ಶೀಟ್​​ ಮೆಟಲ್​ನೊಂದಿಗೆ ಏರ್​ಬ್ಯಾಗ್​ಗಳು, ಸೀಟ್​ಬೆಲ್ಟ್​ಗಳು ಇದು ಹೊಂದಿದೆ. ಕಾರಿನ ಸುರಕ್ಷತೆಯಲ್ಲಿ ಯಾವುದೇ ರಾಜೀ ಇಲ್ಲ ಎಂದು ಕಂಪನಿ ಹೇಳಿದೆ. ಈ ಕಾರು ಪ್ರಸ್ತುತ 11 ಬಣ್ಣಗಳಲ್ಲಿ ಲಭ್ಯವಿದೆ.

ಕಾರಿನ ಬೆಲೆ ಭಾರೀ ಅಗ್ಗ: ದೇಶದ ಅತ್ಯಂತ ಅಗ್ಗದ ಕಾರಾದ ಈಸ್​-ಇ ಕಾರಿನ ಬೆಲೆ 4.79 ಲಕ್ಷ ರೂಪಾಯಿ (ಎಕ್ಸ್​ ಶೋ ರೂಂ) ನಿಗದಿ ಮಾಡಲಾಗಿದೆ. ಇದು ಮೊದಲ 10 ಸಾವಿರ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ. ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳ ಸಮೇತ ಇದು 6.79 ಲಕ್ಷ, 7.79 ಲಕ್ಷ ರೂಪಾಯಿಗಳಲ್ಲಿ ಸಿಗಲಿದೆ. ಬಿಡುಗಡೆಗೂ ಮೊದಲೇ ವಿಶ್ವದಾದ್ಯಂತ 6 ಸಾವಿರ ಬುಕ್ಕಿಂಗ್​ಗಳು ಬಂದಿವೆ ಎಂದು ಕಂಪನಿ ಹೇಳಿದೆ.

ಓದಿ: ಮಾರ್ಕೆಟ್​ ಬಾಕ್ಸ್​ ​ಹಗರಣಕ್ಕೆ ಹೈದರಾಬಾದ್​ ನಂಟು.. ಆ್ಯಪ್​ ರೂಪಿಸಿಕೊಟ್ಟವ ಹೈದರಾಬಾದಿಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.