ಜಗತ್ತಿನಾದ್ಯಂತ ಕೇವಲ ಐಟಿ ವಲಯದಲ್ಲಿ ಮಾತ್ರವಲ್ಲದೇ ಬಹುತೇಕ ಉದ್ಯಮದಲ್ಲಿ ಉದ್ಯೋಗ ಅಭದ್ರತೆ ಕಾಡುತ್ತಿದೆ. ಯಾವಾಗ ಪಿಂಕ್ ಸ್ಲಿಪ್ ಬರುತ್ತದೆ ಎಂಬ ಆತಂಕ ಅನೇಕರನ್ನು ಕಾಡುತ್ತಿದೆ. ಈಗಾಗಲೇ ನಿತ್ಯ ಅನೇಕ ಕಂಪನಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳ ವಜಾಗೊಳಿಸಿರುವ ಸುದ್ದಿ ಅನೇಕರಲ್ಲಿ ದಿಗಿಲು ಹುಟ್ಟಿಸಿರುವುದು ಸುಳ್ಳಲ್ಲ. ಆದರೆ, ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಭಾರತೀಯರು ಆನ್ಲೈನ್ ವಿಮಾನ ಬುಕ್ಕಿಂಗ್, ಸಿನಿಮಾ ಟಿಕೆಟ್ ಜೊತೆಗೆ ಕುಟುಂಬದೊಂದಿಗೆ ಹೊರಗಿನ ಔತಣ ಕೂಡದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕೋವಿಡ್ ನಂತರ ಜನರ ಹೊರಗಿನ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರವಾಸ, ಮೋಜು- ಮಸ್ತಿ, ಔತಣ ಕೂಟಗಳಿಗೆ ಹೆಚ್ಚು ಸಮಯ ಕಳೆಯುತ್ತಿದ್ದು, ಇದರಿಂದ ಈ ಕ್ಷೇತ್ರದಲ್ಲಿ ಬುಕ್ಕಿಂಗ್ಗಳು ದುಪ್ಪಟುಗೊಂಡಿದೆ ಎಂದು ತಿಳಿಸಿದ್ದಾರೆ.
2023ರ ಆರ್ಥಿಕ ವರ್ಷದಲ್ಲಿ ಗ್ರಾಹಕರು ವಿಮಾನದ ಟಿಕೆಟ್ ಬುಕ್ಕಿಂಗ್ ಮೊರೆ ಹೋಗುತ್ತಿರುವ ಸಂಖ್ಯೆ ಹೆಚ್ಚಿದ್ದು, ಶೇ 83ರಷ್ಟು ಏರಿಕೆ ಕಂಡಿದ್ದು, ದುಬಾರಿ ಹೊಟೇಲ್ ಬುಕ್ಕಿಂಗ್ ಅಲ್ಲೂ ಅಂಕಿ ಸಂಖ್ಯೆ ದುಪ್ಪಟ್ಟು ಗೊಂಡಿದೆ. ಜನರು ದೂರದ ಪ್ರಯಾಣಕ್ಕೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ವಿಮಾನ ಪ್ರಯಾಣವೂ ಜನರು ದುಬಾರಿ ಎಂದು ಭಾವಿಸಿಲ್ಲ ಎಂಬುದನ್ನ ವರದಿ ತೋರಿಸಿದೆ. ಫುಲ್ ಸ್ಟಾಕ್ ಪೇಮೆಂಟ್ ಮತ್ತು ಬ್ಯಾಂಕಿಂಗ್ ಫ್ಲಾಟ್ ಫಾರ್ಮ್ ಆಗಿರುವ ರೋಜರ್ಪೇ ಪ್ರಕಾರ, ಕಳೆದ ಏಪ್ರಿಲ್ 2022- ಮಾರ್ಚ್ 2023ರ ಅವಧಿಯಲ್ಲಿ ಆನ್ಲೈನ್ ಟ್ರಾವೆಲಿಂಗ್ ಅಗ್ರಿಗೇಟರ್ಗಳ ವಹಿವಾಟಿನ ಮೌಲ್ಯದಲ್ಲಿ ಶೇ 224ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕತೆ ಭಯ ಜನರಲ್ಲಿ ಕಡಿಮೆಯಾಗಿದ್ದು, ಸಹ - ಕೆಲಸದ ಸ್ಥಳಗಳು ವಹಿವಾಟಿನಲ್ಲಿ 245 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿವೆ. ಅದರಲ್ಲೂ ಕ್ಯಾಬ್ ಸೇವೆಗಳಿಗೆ ಮಾಡಿದ ಪಾವತಿಗಳ ಸಂಖ್ಯೆ ಏಳು ಪಟ್ಟು ಹೆಚ್ಚಾಗಿದೆ. ಜನರು ಮುಕ್ತವಾಗಿ ಕ್ಯಾಬ್ ಸೇವೆ ಬಳಕೆಗೆ ಮುಂದಾಗುತ್ತಿದ್ದಾರೆ. 2023ರ ಆರ್ಥಿಕ ವರ್ಷ ಭಾರತದಲ್ಲಿ ಭರವಸೆ, ಸ್ಥಿತಿಸ್ಥಾಪಕತ್ವದ ಜೊತೆಗೆ ಎಲ್ಲಾ ವಲಯಗಳಲ್ಲಿ ವಹಿವಾಟಿನಲ್ಲಿ ಶೀಘ್ರ ಬೆಳವಣಿಗೆ ಕಾಣಬಹುದಾಗಿದೆ. ಅದರಲ್ಲೂ ಭಾರತೀಯರು ಡಿಜಿಟಲ್ ಯುಗವನ್ನು ಹೆಚ್ಚು ಒಪ್ಪಿಕೊಂಡಿದ್ದು, ಈ ಬುಕ್ಕಿಂಗ್ ಅಂಕಿ ಅಂಶಗಳು ಅವರು ಅದನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಸಹ ಇದು ತೋರಿಸಿದೆ ಎಂದಿದ್ದಾರೆ ರೋಜರ್ಪೇ ಮುಖ್ಯ ವಾಣಿಜ್ಯ ಅಧಿಕಾರಿ ರಾಹುಲ್ ಕೊಥಾರಿ.
ಆದಾಗ್ಯೂ, ಭಾರತದಲ್ಲಿ ಬ್ರಾಂಡ್ಬ್ಯಾಡ್ ಮೇಲಿನ ಕಾಲ ಕಳೆಯುವಿಕೆ ಸಮಯ ಶೇ 80ರಷ್ಟು ಇಳಿಕೆಯಾಗಿದೆ. ಹೊರಗಿನ ಊಟದ ವೆಚ್ಚ ಅಧಿಕವಾಗುತ್ತಿದೆ. ಜನರು ಹೋಟೆಲ್, ರೆಸ್ಟೊರೆಂಟ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಊಟದ ವೆಚ್ಚವು 2.5 ಪಟ್ಟು ಹೆಚ್ಚಾಗಿದೆ. ಇದರ ವಹಿವಾಟಿನ ಪ್ರಮಾಣವು 162 ಪ್ರತಿಶತದಷ್ಟು ಹೆಚ್ಚಾಗಿದೆ. ಎಸ್ಸೆಟಾಪ್ನಲ್ಲಿ ನಡೆದ ವಹಿವಾಟಿನ ಪ್ರಕಾರ, ಅಂಗಡಿಯಲ್ಲಿನ ಪಾವತಿಗಳು ಮೌಲ್ಯ 88 ಪ್ರತಿಶತದಷ್ಟು ಬೆಳೆದಿದೆ. ಮೆಟ್ರೋ ನಗರದಲ್ಲಿ ವಹಿವಾಟುಗಳು ದ್ವಿಗುಣಗೊಂಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: 4 ಬಿಲಿಯನ್ಗೆ ತಲುಪಿದ ಇ-ಕಾಮರ್ಸ್ ಶಿಪ್ಮೆಂಟ್ಸ್: 2028ಕ್ಕೆ 10 ಬಿಲಿಯನ್ಗೆ ತಲುಪುವ ಸಾಧ್ಯತೆ