ETV Bharat / business

ಭಾರತೀಯ ಉದ್ಯಮಿಗಳಿಂದ ಸಿಂಗಾಪುರದಲ್ಲಿ ಪೇಟಿಯಂ ಮಾದರಿ ಇನಿಪೇ ಆರಂಭ

author img

By

Published : Jan 16, 2023, 3:50 PM IST

ಪೇಟಿಂ ಮಾದರಿಯ ಇನಿಪೇಯನ್ನು ಸಿಂಗಾಪುರದಲ್ಲಿ ಆರಂಭಿಸಲು ಭಾರತೀಯ ಮೂಲದ ಉದ್ಯಮಿಗಳು ಯೋಜಿಸಿದ್ದು, ಇದೇ ವರ್ಷದ ಹಣಕಾಸಿನ ತ್ರೈಮಾಸಿಕದ ಹೊತ್ತಿಗೆ ಶುಭಾರಂಭ ಕಾಣಲಿದೆ ಎಂದು ಘೋಷಿಸಿದ್ದಾರೆ. ಇದು ಶೈಕ್ಷಣಿಕ, ತುರ್ತು ಮತ್ತು ವೈದ್ಯಕೀಯ ನೆರವನ್ನು ಒಳಗೊಂಡಿರುತ್ತದೆ.

neobank-in-southeast-asia
ಭಾರತೀಯ ಉದ್ಯಮಿಗಳಿಂದ ಸಿಂಗಾಪುರದಲ್ಲಿ ಪೇಟಿಂ ಮಾದರಿ ಇನಿಪೇ ಆರಂಭ

ಸಿಂಗಾಪುರ: ಭಾರತೀಯ ಮೂಲದ ಉದ್ಯಮಿಗಳು ಸಿಂಗಾಪುರದಲ್ಲಿ ಪೇಟಿಂ ಮಾದರಿಯ ಇನಿಪೇ(ಇಂಟರ್​ನ್ಯಾಷನಲ್​ ಪೇಮೆಂಟ್​ ಸೊಲ್ಯೂಷನ್​) ಆರಂಭಿಸಲು ಸಜ್ಜಾಗಿದ್ದಾರೆ. ಆಗ್ನೇಯ ಏಷ್ಯಾದಲ್ಲಿ ಎರಡನೇ ತ್ರೈಮಾಸಿಕದ ಹೊತ್ತಿಗೆ 1 ಮಿಲಿಯನ್​ ಅಮೆರಿಕದ ಡಾಲರ್​ನಷ್ಟು ಹೂಡಿಕೆಯಲ್ಲಿ ನಿಯೋಬ್ಯಾಂಕ್​ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಆಗ್ನೇಯ ಏಷ್ಯಾದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗುವ ನಿಯೋಬ್ಯಾಂಕ್ ಮೂಲಕ ಮೈಕ್ರೋ ಲೆಂಡಿಂಗ್, ದೇಶೀಯ ಪಾವತಿಗಳು, ಇ-ವ್ಯಾಲೆಟ್‌ಗಳು, ವೈಯಕ್ತಿಕ ಮತ್ತು ಸಾಮೂಹಿಕ ಉಳಿತಾಯ ಖಾತೆಗಳು ತೆರೆಯಲಿವೆ. ಇದು ಪ್ರಮುಖವಾಗಿ ಶ್ರಮಿಕ ವರ್ಗ, ವಿದೇಶಿ ಕಾರ್ಮಿಕರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡಿರಲಿದೆ. ಇದಕ್ಕಾಗಿ ಫಿನ್‌ಟೆಕ್ ಸ್ಟಾರ್ಟಪ್ ಸಿಂಗಾಪುರ, ಭಾರತ ಮತ್ತು ವಿಯೆಟ್ನಾಂನಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಐದು ದೇಶಗಳಲ್ಲಿ ಇದನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

ಇದರ ಪ್ರಮುಖ ಸಂಸ್ಥಾಪಕರು ಭಾರತೀಯರಾಗಿದ್ದು, ಅಲ್ಲಿಯೇ ಅವರು ಶಿಕ್ಷಣವನ್ನು ಪಡೆದಿದ್ದಾರೆ. ಬ್ಯಾಂಕಿಂಗ್​ ವಲಯದಲ್ಲಿ ವ್ಯಾಪಕವಾದ ಅನುಭವವನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಆರ್‌ಎಚ್‌ಬಿ ಬ್ಯಾಂಕಿಂಗ್ ಗ್ರೂಪ್, ಕ್ಯಾಪ್‌ಜೆಮಿನಿ, ಡಿಬಿಎಸ್ ಬ್ಯಾಂಕ್ ಮತ್ತು ಫಿಲಿಪೈನ್ಸ್‌ನಲ್ಲಿ ಪ್ರಾರಂಭಿಸಲಾದ ಡಿಜಿಟಲ್ ಬ್ಯಾಂಕ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಹಣ ಸಂಗ್ರಹಣೆಯೇ ಸವಾಲಿನ ಕೆಲಸ: ಸದ್ಯದ ವಹಿವಾಟಿನಲ್ಲಿ ಹೂಡಿಕೆಯು ಅಧಿಕ ಸವಾಲಿನದ್ದಾಗಿದೆ. ಹೂಡಿಕೆದಾರರು ಹೆಚ್ಚಿನ ಲಾಭ ಮತ್ತು ಹೂಡಿಕೆಯ ನಿಖರತೆಯನ್ನು ಹೊಂದಿರುವ ಕಾರಣದಿಂದಾಗಿ, ಹೆಚ್ಚಿನ ಬಡ್ಡಿ ದರಗಳು, ಮಾರುಕಟ್ಟೆ ಕುಸಿತದ ಭಯದಿಂದಾಗಿ ಧಾರಾಳ ಹೂಡಿಕೆಗೆ ಮುಂದಾಗುತ್ತಿಲ್ಲ. ಮಾರುಕಟ್ಟೆಯ ದುರ್ಬಲತೆಯಿಂದಾಗಿ ನಿಖರ ಗುರಿ ಸಾಧನೆ ಕಷ್ಟವಾಗುತ್ತಿದೆ.

ಕಳೆದ ವರ್ಷ ನಾಸ್ಡಾಕ್ ಶೇಕಡಾ 33 ರಷ್ಟು ಕುಸಿತ ಕಂಡಿದ್ದರಿಂದ ಟೆಕ್ ಸ್ಟಾಕ್‌ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಡೇಟಾ ಫರ್ಮ್ ಕ್ರಂಚ್‌ಬೇಸ್ ಪ್ರಕಾರ, ಸಾಹಸೋದ್ಯಮ ಬಂಡವಾಳ ಬೆಂಬಲಿತ ಕಂಪನಿಗಳು 2022 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 369 ಮಿಲಿಯನ್​ ಅಮೆರಿಕನ್​ ಡಾಲರ್​ ಸಂಗ್ರಹಿಸಿವೆ. ಇದು 2021 ರ ಸಾಲಿಗಿಂತಲೂ ಕಡಿಮೆಯಾಗಿದೆ. ಈಗ ಜಾಗತಿಕವಾಗಿ 679.4 ಶತಕೋಟಿ ಹೂಡಿಕೆ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 98 ಪ್ರತಿಶತ ಹೆಚ್ಚಳವಾಗಿದೆ ಎಂಬುದು ವಿಶೇಷವಾಗಿದೆ.

ಹೂಡಿಕೆಯಲ್ಲಿ ಸಿಂಗಾಪುರಕ್ಕೆ ಈ ವರ್ಷ ಲಕ್​: ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಟೆಕ್ ಹೂಡಿಕೆ ಸಂಸ್ಥೆಯಾದ ಎಸ್​ಜಿಐ ಇನ್ನೋವೇಟಿವ್​ ಪ್ರಕಾರ, ಬಂಡವಾಳವನ್ನು ಹುಡುಕುತ್ತಿರುವ ಸ್ಟಾರ್ಟ್‌ ಅಪ್‌ಗಳಿಗೆ ಇದು ಉತ್ತಮ ವರ್ಷವಾಗಿದೆ. 2023 ಬಹುಶಃ ಸಿಂಗಾಪುರದಲ್ಲಿ ಸಾಹಸೋದ್ಯಮ ಬಂಡವಾಳಕ್ಕೆ ಸಾಕಷ್ಟು ಯೋಗ್ಯವಾದ ವರ್ಷವಾಗಲಿದೆ ಎಂದು ಎಸ್​ಜಿ ಇನ್ನೋವೇಟಿವ್​, ಸೈನ್​ ಹುಯಿ ಟಾಂಗ್​ ಸಂಸ್ಥೆಯ ಹೂಡಿಕೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ತಂತ್ರಜ್ಞಾನದ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿರುವ ಉದ್ಯಮವನ್ನು ಬೆಂಬಲಿಸಲು ಸಿಂಗಾಪುರದಲ್ಲಿ ಇನ್ನೋವೇಶನ್ ಪ್ಲಾಟ್‌ಫಾರ್ಮ್ ಎಸ್​ಜಿ ಇನ್ನೋವೇಟಿವ್​ ಕಂಪನಿಯನ್ನು 2016 ರಲ್ಲಿ ಸ್ಥಾಪಿಸಲಾಯಿತು. ವೈಜ್ಞಾನಿಕ ತಳಹದಿಯ ಮೇಲೆ ಹೊರಹೊಮ್ಮಿದ ತಂತ್ರಜ್ಞಾನವು ದೊಡ್ಡ ಜಾಗತಿಕ ಸವಾಲುಗಳನ್ನು ನಿಭಾಯಿಸಬಲ್ಲದು ಎಂಬ ನಂಬಿಕೆಯ ಮೇಲೆ ಇದನ್ನು ಸ್ಥಾಪಿಸಲಾಗಿದೆ.

ವಿಪೋ ಪ್ರಕಟಿಸಿದ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನ 2022 ರ ಪ್ರಕಾರ, ಹೂಡಿಕೆಯಲ್ಲಿ ಸಿಂಗಾಪುರವು ವಿಶ್ವದಲ್ಲಿ 7 ನೇ ಮತ್ತು ಏಷ್ಯಾದಲ್ಲಿ 2 ನೇ ಸ್ಥಾನದಲ್ಲಿದೆ. ಸ್ವಿಟ್ಜರ್ಲೆಂಡ್, ಅಮೆರಿಕಾ ಮತ್ತು ಸ್ವೀಡನ್ ಕೂಡ ಈ ಪಟ್ಟಿಯಲ್ಲಿವೆ. ಹೂಡಿಕೆಯಲ್ಲಿ ಭಾರತ 40 ನೇ ಸ್ಥಾನದಲ್ಲಿದೆ. ವ್ಯಾಪಾರ ಸುಲಭತೆಯಲ್ಲಿ ಸಿಂಗಾಪುರ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ಸ್ಥಾನದಲ್ಲಿದೆ. 2019 ರಲ್ಲಿ ಪ್ರಕಟವಾದ ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ವರದಿಯಲ್ಲೂ ಇದು ಮೊದಲ ಪಡೆದರೆ, ವಿಶ್ವ ಬ್ಯಾಂಕ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ.

ಇನಿಪೇಗೆ ಈ ಅಂಶಗಳೇ ನೆರವು: ಸಿಂಗಾಪುರ ಹೆಚ್ಚಿನ ಹೂಡಿಕೆ ಕಾಣುತ್ತಿರುವ ಕಾರಣ ಭಾರತೀಯ ಉದ್ಯಮಿಗಳು ಆರಂಭಿಸುತ್ತಿರುವ ನಿಯೋಬ್ಯಾಂಕ್​ಗೆ ಈ ಎಲ್ಲ ಅಂಶಗಳೇ ನೆರವು ನೀಡಲಿವೆ. ಬಳಕೆದಾರರ ಆಕರ್ಷಿಸಲು, ಡೇಟಾ ಚಾಲಿತ ತಂತ್ರಜ್ಞಾನ ವಿನ್ಯಾಸವನ್ನು ಬಳಸಲು ಯೋಜಿಸಿರುವ Inypay ಗೆ ಇದು ಸಕಾಲವಾಗಿದೆ. 2026 ರ ವೇಳೆಗೆ 2 ಮಿಲಿಯನ್​ ಅಮೆರಿಕನ್​ ಡಾಲರ್​ ಮೌಲ್ಯದೊಂದಿಗೆ ಆಗ್ನೇಯ ಏಷ್ಯಾದಲ್ಲಿ ಹಣಕಾಸು ಸಂಸ್ಥೆಯನ್ನು ವೃದ್ಧಿಸುವ ಮೂಲಕ ಹಿಂದುಳಿದ ಮತ್ತು ಬ್ಯಾಂಕ್​ಯೇತರ ವ್ಯವಸ್ಥೆಯನ್ನು ಸುಧಾರಿಸುವ ಗುರಿ ಇದೆ ಎಂದು Inypay ನ ಸಂಸ್ಥಾಪಕ ಮತ್ತು ಸಿಇಒ ಅರಿವುವೆಲ್ ರಾಮು ಹೇಳಿದರು.

ಓದಿ: 2 ವಾರಗಳಲ್ಲಿ ಷೇರು ಮಾರುಕಟ್ಟೆಯಿಂದ 15 ಸಾವಿರ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.