ETV Bharat / business

3 ವರ್ಷಗಳಲ್ಲಿ ಶೇ 50 ರಷ್ಟು ನಗದು ರಹಿತವಾಗಲಿದೆ ಭಾರತದ ಆರ್ಥಿಕತೆ: ಸಂಶೋಧನಾ ವರದಿ - ಡಿಜಿಟಲ್ ವಹಿವಾಟುಗಳ ಸಂಖ್ಯೆ

ಭಾರತದಲ್ಲಿ ಯುಪಿಐ ವಹಿವಾಟುಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. 2026ರ ವೇಳೆಗೆ ಗ್ರಾಹಕರ ಒಟ್ಟು ವೆಚ್ಚದ ವಿಷಯದಲ್ಲಿ ಭಾರತವು ಶೇ 50ರಷ್ಟು ನಗದು ರಹಿತ ಆರ್ಥಿಕತೆಯಾಗುವ ನಿರೀಕ್ಷೆಯಿದೆ.

India to become 50% non-cash economy in consumption in 3 years

author img

By

Published : May 4, 2023, 2:56 PM IST

ನವದೆಹಲಿ : 2026 ಹಣಕಾಸು ವರ್ಷಾಂತ್ಯದ ವೇಳೆಗೆ ವ್ಯಕ್ತಿಯಿಂದ ವ್ಯಾಪಾರಿ (person to merchant) ಡಿಜಿಟಲ್ ವಹಿವಾಟುಗಳ ಸಂಖ್ಯೆ 1.5 ಟ್ರಿಲಿಯನ್ ಡಾಲರ್‌ಗೆ ತಲುಪುವ ಸಾಧ್ಯತೆ ಇದ್ದು, ಮುಂದಿನ ಮೂರು ವರ್ಷಗಳಲ್ಲಿ ಭಾರತವು ಬಳಕೆಯಲ್ಲಿ ಶೇಕಡಾ 50 ರಷ್ಟು ನಗದು ರಹಿತ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ವರದಿಯೊಂದು ಗುರುವಾರ ಹೇಳಿದೆ. ಮುಖ್ಯವಾಗಿ ಮೇಲ್ಮಧ್ಯಮ ವರ್ಗ ಹಾಗೂ ಹೆಚ್ಚಿನ ಆದಾಯದ ವರ್ಗದ ಜನತೆಯ ಕಾರಣದಿಂದ ಭಾರತದ ಮನೆ ಬಳಕೆ ಖರ್ಚು ವೆಚ್ಚಗಳು 2026ರ ಹಣಕಾಸು ವರ್ಷದ ವೇಳೆಗೆ 3 ಟ್ರಿಲಿಯನ್ ಡಾಲರ್ ಮೀರುವ ನಿರೀಕ್ಷೆ ಇದೆ. ಇದರಲ್ಲಿ ಸುಮಾರು 1 ಟ್ರಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ವಹಿವಾಟುಗಳು ವ್ಯಕ್ತಿಯಿಂದ ವ್ಯಾಪಾರಿಗೆ ಯುಪಿಐ ಮೂಲಕ ನಡೆಯುವ ಸಾಧ್ಯತೆಗಳಿವೆ ಎಂದು ಬೈನ್ ಆ್ಯಂಡ್ ಕಂಪನಿಯ ವರದಿ ತಿಳಿಸಿದೆ.

ಪ್ರಸ್ತುತ ತಾಂತ್ರಿಕ ಮತ್ತು ಆರ್ಥಿಕ ಚಲನಶೀಲತೆಯೊಂದಿಗೆ ಭಾರತವು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 350 ರಿಂದ 400 ಮಿಲಿಯನ್ ಡಿಜಿಟಲ್ ಗ್ರಾಹಕರೊಂದಿಗೆ ಬಳಕೆಯಲ್ಲಿ ಸುಮಾರು ಶೇಕಡಾ 50 ರಷ್ಟು ನಗದುರಹಿತ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಬೈನ್ ಆ್ಯಂಡ್ ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥ ಸೌರಭ್ ಟ್ರೆಹಾನ್ ಹೇಳಿದ್ದಾರೆ. ಸರ್ಕಾರದ ಉತ್ತೇಜನಕಾರಿ ಕ್ರಮಗಳು ಹಾಗೂ ಯುಪಿಐ 2.0, 123 Lite, ಯುಪಿಐ ಆಧರಿತ ಸಾಲ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಮುಂತಾದುವುಗಳ ಕಾರಣದಿಂದ ನಗದು ರಹಿತ ಆರ್ಥಿಕತೆಯ ಪ್ರಮಾಣವು ಶೇ 60 ರಿಂದ 75ರಷ್ಟು ಬೆಳವಣಿಗೆ ಸಾಧಿಸುವ ಸಾಧ್ಯತೆಗಳೂ ಇವೆ ಎಂದು ಅವರು ಹೇಳಿದರು.

ಯುಪಿಐ ಬಳಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಷ್ಟೋ ಪಟ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಹಣಕಾಸು ವರ್ಷ 2023 ರಲ್ಲಿ ಅದರ ಒಟ್ಟು ವಾರ್ಷಿಕ ವಹಿವಾಟಿನ ಮೌಲ್ಯವು 1.7 ಟ್ರಿಲಿಯನ್‌ ಡಾಲರ್​ಗೆ ತಲುಪಿದೆ ಮತ್ತು ಅದರ P2M ವಹಿವಾಟುಗಳು 380 ಶತಕೋಟಿ ಡಾಲರ್​ಗೆ ಏರಿವೆ. ಇದು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆಯು 40 ರಿಂದ 50 ಪ್ರತಿಶತದಷ್ಟು CAGR ನಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

ಕ್ಷಿಪ್ರವಾಗಿ ವ್ಯಾಪಾರಿಗಳ ಸೇರ್ಪಡೆ, ಶೂನ್ಯ ಅಥವಾ ಅತಿ ಕಡಿಮೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್), ಇಂಟರ್​ನೆಟ್​ ಬಳಕೆಯಲ್ಲಿ ಹೆಚ್ಚಳ ಮತ್ತು ಯುಪಿಐ ಬಳಕೆಯ ಬಗ್ಗೆ ಮೂಡುತ್ತಿರುವ ಹೆಚ್ಚಿನ ಅರಿವುಗಳ ಕಾರಣದಿಂದ ಯುಪಿಐ ಬಳಕೆ ಅಗಾಧ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ಕ್ರೆಡಿಟ್ ಕಾರ್ಡ್ ಮತ್ತು ಬೈ ನೌ ಪೇ ಲೇಟರ್ (BNPL) ವಹಿವಾಟುಗಳ ಕಾರಣದಿಂದ ಎಂಬೆಡೆಡ್ ಫೈನಾನ್ಸ್ ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ಸದ್ಯ ಕ್ರೆಡಿಟ್ ಕಾರ್ಡ್ ಮತ್ತು ಬೈ ನೌ ಪೇ ಲೇಟರ್ ಒಟ್ಟು ವಹಿವಾಟುಗಳ ಶೇ 8 ರಷ್ಟು ಪಾಲು ಹೊಂದಿವೆ. ಇದು 2026ರ ವೇಳೆಗೆ ಶೇಕಡಾ 12 ರಿಂದ 13ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ವಹಿವಾಟುಗಳು ಹಣಕಾಸು ವರ್ಷ 2022 ರಲ್ಲಿ ಇರುವ 100 ರಿಂದ 110 ಶತಕೋಟಿ ಡಾಲರ್​ನಿಂದ 2026 ರ ವೇಳೆಗೆ ಸುಮಾರು 270 ರಿಂದ 280 ಶತಕೋಟಿ ಡಾಲರ್​ಗೆ ತಲುಪುವ ಅಂದಾಜು ಮಾಡಲಾಗಿದೆ.

ಇದನ್ನೂ ಓದಿ : ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಸಿಂಹಪಾಲು: ಐಎಂಎಫ್ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.