ETV Bharat / business

2047ರ ವೇಳೆಗೆ ಭಾರತ 40 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ : ಮುಖೇಶ್ ಅಂಬಾನಿ - India will be a 40 trillion dollar economy

ಭಾರತವು 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ.

Mukesh Ambani
ಮುಕೇಶ್ ಅಂಬಾನಿ
author img

By

Published : Nov 22, 2022, 11:00 PM IST

ಗಾಂಧಿನಗರ(ಗುಜರಾತ್): ಭಾರತವು 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು. ಶುದ್ಧ ಇಂಧನ ಕ್ರಾಂತಿ, ಜೈವಿಕ ಇಂಧನ ಕ್ರಾಂತಿ ಮತ್ತು ಡಿಜಿಟಲ್ ಕ್ರಾಂತಿಯನ್ನು ಮುಂದಿನ ದಶಕಗಳಲ್ಲಿ ಭಾರತದ ಬೆಳವಣಿಗೆಯನ್ನು ನಿರ್ಧರಿಸುವ "ಮೂರು ಗೇಮ್-ಚೇಂಜಿಂಗ್ ಕ್ರಾಂತಿಗಳು" ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಬೆಳವಣಿಗೆ: ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಇಯು)ಯ ಘಟಿಕೋತ್ಸವದಲ್ಲಿ ಮಂಗಳವಾರ ಮಾತನಾಡಿದ ಮುಕೇಶ್ ಅಂಬಾನಿ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿರುವ 25 ವರ್ಷಗಳ ಅವಧಿಯ ಅಮೃತ್ ಕಾಲ್ ಸಮಯದಲ್ಲಿ "ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಬೆಳವಣಿಗೆಗೆ ಸಜ್ಜಾಗಿದೆ ಎಂದು ಹೇಳಿದರು.

ಈ ಮೂರು ಕ್ರಾಂತಿಗಳು ಒಟ್ಟಾಗಿ ಊಹೆಗೂ ನಿಲುಕದ ರೀತಿಯಲ್ಲಿ ಜೀವನವನ್ನು ಪರಿವರ್ತಿಸುತ್ತವೆ ಎಂದು ಅವರು ಹೇಳಿದರು. ಶುದ್ಧ ಇಂಧನ ಕ್ರಾಂತಿ ಮತ್ತು ಜೈವಿಕ ಇಂಧನ ಕ್ರಾಂತಿಯು ಸುಸ್ಥಿರವಾಗಿ ಇಂಧನವನ್ನು ಉತ್ಪಾದಿಸಿದರೆ, ಡಿಜಿಟಲ್ ಕ್ರಾಂತಿಯು ಇಂಧನವನ್ನು ಸಮರ್ಥವಾಗಿ ಬಳಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. ಎಲ್ಲ ಮೂರು ಕ್ರಾಂತಿಗಳು ಒಟ್ಟಾಗಿ ಹವಾಮಾನ ಬಿಕ್ಕಟ್ಟಿನಿಂದ ನಮ್ಮ ಸುಂದರ ಗ್ರಹವನ್ನು ಉಳಿಸಲು ಭಾರತವು ಜಗತ್ತಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

"ಪಿಡಿಇಯುನ ವಿದ್ಯಾರ್ಥಿಗಳಾದ ನೀವು ಮತ್ತು ರಾಷ್ಟ್ರದಾದ್ಯಂತದ ಇರುವ ಲಕ್ಷಾಂತರ ಪ್ರತಿಭಾವಂತ ಯುವ ಮನಸುಗಳು, ಭಾರತವು ತನ್ನ ಇಂಧನ ಗುರಿಗಳನ್ನು ತಲುಪಲು ಅನುವು ಮಾಡಿಕೊಡಲು ಈ ಕ್ರಾಂತಿಗಳನ್ನು ಬಳಸಿಕೊಳ್ಳುತ್ತೀರಿ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.

ಅಮೃತ್ ಕಾಲ ಹೊಸದನ್ನು ಪ್ರಾರಂಭಿಸಲು ಅತ್ಯಂತ ಶುಭ ಸಮಯ:ಪಿಡಿಇಯುನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಮುಖೇಶ್​ ಅಂಬಾನಿ ಅವರು ಘಟಿಕೋತ್ಸವ ಸಮಾರಂಭದ ಬಗ್ಗೆ ಉತ್ಸುಕರಾಗಿ ಮಾತನಾಡಿದರು. ಪಿಡಿಇಯುನ ಈ ಬ್ಯಾಚ್ ಭಾರತದ ಅಮೃತ್ ಕಾಲ್ ನ ಆರಂಭವನ್ನು ಸೂಚಿಸುವ ಒಂದು ವರ್ಷದಲ್ಲಿ ಪದವಿ ಪಡೆಯುತ್ತಿದೆ ಎಂದು ಗುಣಗಾನ ಮಾಡಿದರು.

ನಮ್ಮ ಸಂಪ್ರದಾಯದಲ್ಲಿ, ಅಮೃತ್ ಕಾಲವನ್ನು ಹೊಸದನ್ನು ಪ್ರಾರಂಭಿಸಲು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಅವಧಿಯಲ್ಲಿ ನಿಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೀರಿ. ಅಮೃತ್ ಕಾಲ್ ಅನಾವರಣಗೊಳ್ಳುತ್ತಿದ್ದಂತೆ ಭಾರತವು ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಲಿದೆ" ಎಂದು ಅಂಬಾನಿ ಹೇಳಿದರು.

ಇದನ್ನೂ ಓದಿ:ಆಸ್ತಿ ಉತ್ತರಾಧಿಕಾರಿಗೆ ವರ್ಗಾಯಿಸುವುದು ಹೇಗೆ?; ನಾಮಿನಿ ಪ್ರಕ್ರಿಯೆ ವಿಧಾನದ ಅರಿವು ಅತ್ಯವಶ್ಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.