ETV Bharat / business

ಈ ವರ್ಷ ಭಾರತದ ಸಕ್ಕರೆ ಉತ್ಪಾದನೆಯು 13% ಹೆಚ್ಚಳವಾಗುವ ಸಾಧ್ಯತೆ

ಪ್ರಸಕ್ತ ಸಕ್ಕರೆ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆದ ರೈತರಿಗೆ ಒಂದು ಲಕ್ಷ ಕೋಟಿ ರೂ. ಹಣ ನೀಡುವ ನಿರೀಕ್ಷೆ ಇದೆ. ಹೆಚ್ಚುವರಿ ಕಬ್ಬನ್ನು ಪೆಟ್ರೋಲ್‌ನೊಂದಿಗೆ ಬೆರೆಸಿದ ಎಥೆನಾಲ್​ಗೆ ಬಳಸಲು ಸರ್ಕಾರವು ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. ಇದು ಹಸಿರು ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುತ್ತದೆ..

author img

By

Published : Apr 20, 2022, 4:15 PM IST

ಸಕ್ಕರೆ ಉತ್ಪಾದನೆ
ಸಕ್ಕರೆ ಉತ್ಪಾದನೆ

ನವದೆಹಲಿ : ಈ ವರ್ಷ ಸಕ್ಕರೆ ಉತ್ಪಾದನೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪರಿಷ್ಕೃತ ಅಂದಾಜಿನ ಪ್ರಕಾರ, ಎಥೆನಾಲ್ ಉತ್ಪಾದನೆಗೆ 35 ಲಕ್ಷ ಟನ್ ಸಕ್ಕರೆಯನ್ನು ರಿಯಾಯತಿ ಮಾಡಿದ ನಂತರ ಪ್ರಸ್ತುತ ಸಕ್ಕರೆ ಋತುವಿನಲ್ಲಿ ಇದರ ಉತ್ಪಾದನೆಯು ಸುಮಾರು 350 ಲಕ್ಷ ಟನ್‌ಗಳಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ. 278 ಲಕ್ಷ ಟನ್‌ಗಳಷ್ಟು ಸಕ್ಕರೆ ದೇಶೀಯ ಬಳಕೆಗೆ ಪೂರೈಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಸಕ್ಕರೆ ಋತುವಿನ ಆರಂಭದಲ್ಲಿ (ಅಕ್ಟೋಬರ್-ಸೆಪ್ಟೆಂಬರ್ 2022 ಅವಧಿ) ಸುಮಾರು 85 ಲಕ್ಷ ಟನ್‌ಗಳ ಕ್ಯಾರಿ ಓವರ್ ಸ್ಟಾಕ್ ಇತ್ತು. ದೇಶದ ಸುಮಾರು 95 ಲಕ್ಷ ಟನ್ ಸಕ್ಕರೆ ರಫ್ತು ಆಗುತ್ತದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಪ್ರಸಕ್ತ ಸಕ್ಕರೆ ಋತುವಿನ ಮುಕ್ತಾಯದ ಸ್ಟಾಕ್ 60 ಲಕ್ಷ ಟನ್​ಗೂ ಹೆಚ್ಚು ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಸಕ್ಕರೆಯ ಲಭ್ಯತೆಯು ದೇಶೀಯ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಹಾಗಾಗಿ, ಸಕ್ಕರೆಯ ಸುಗಮ ಲಭ್ಯತೆ ಇರುತ್ತದೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.

ಪ್ರಸಕ್ತ ಸಕ್ಕರೆ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆದ ರೈತರಿಗೆ ಒಂದು ಲಕ್ಷ ಕೋಟಿ ರೂ. ಹಣ ನೀಡುವ ನಿರೀಕ್ಷೆ ಇದೆ. ಹೆಚ್ಚುವರಿ ಕಬ್ಬನ್ನು ಪೆಟ್ರೋಲ್‌ನೊಂದಿಗೆ ಬೆರೆಸಿದ ಎಥೆನಾಲ್​ಗೆ ಬಳಸಲು ಸರ್ಕಾರವು ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. ಇದು ಹಸಿರು ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಎರಡು ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್​ಫ್ಲಿಕ್ಸ್​! ಕಾರಣವೇನು?

ಕಳೆದ ಮೂರು ಸಕ್ಕರೆ ಋತುಗಳಲ್ಲಿ 2018-19, 2019-20 ಮತ್ತು 2020-21ರಲ್ಲಿ ಸುಮಾರು 3.37 ಲಕ್ಷ ಟನ್, 9.26 ಲಕ್ಷ ಟನ್ ಮತ್ತು 22 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್‌ಗೆ ಉಪಯೋಗಿಸಲಾಗಿದೆ. ಪ್ರಸಕ್ತ 2021-22ರ ಸಕ್ಕರೆ ಋತುವಿನಲ್ಲಿ ಸುಮಾರು 35 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಇದಕ್ಕೆ ಉಪಯೋಗಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳಿಗೆ, ಎಥೆನಾಲ್ ಮಾರಾಟ ಮಾಡುವ ಮೂಲಕ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳು ಕಳೆದ ಏಳು ವರ್ಷಗಳಲ್ಲಿ ಸುಮಾರು 53,000 ಕೋಟಿ ರೂ. ಆದಾಯ ಗಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.