ETV Bharat / business

73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ

ವಿಶ್ವನಾಯಕರ ಕೂಟವಾದ ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 112 ಘೋಷಣೆಗಳನ್ನು ಅಂಗೀಕರಿಸಿದೆ. ಇದು ಜಿ20 ಶೃಂಗಸಭೆಯ ಇತಿಹಾಸದಲ್ಲಿ ದಾಖಲೆ ಬರೆದಿದೆ.

ಜಿ20 ಶೃಂಗಸಭೆ
ಜಿ20 ಶೃಂಗಸಭೆ
author img

By ETV Bharat Karnataka Team

Published : Sep 9, 2023, 5:59 PM IST

ನವದೆಹಲಿ: ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ-20 ಶೃಂಗಸಭೆಯು ಹಲವು ಮೊದಲುಗಳಿಗೆ ನಾಂದಿ ಹಾಡಿದೆ. ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಶೃಂಗ ಇದಾಗಿದ್ದರೆ, ವಿಶ್ವದಲ್ಲಿನ ಹಲವು ದೈತ್ಯ ಸವಾಲುಗಳು ಮತ್ತು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 73 ಸಂಕಲ್ಪಗಳನ್ನು(ರೆಸಲ್ಯೂಶನ್​) ಅಂಗೀಕರಿಸಲಾಗಿದೆ. ಇದು ಈವರೆಗೂ ಯಾವುದೇ ದೇಶಗಳು ನಡೆಸಿದ ಶೃಂಗಸಭೆಯಲ್ಲಿ ಇಷ್ಟು ಪ್ರಮಾಣದ ಘೋಷಣೆಗಳಿಗೆ ಅಂಗೀಕಾರ ಸಿಕ್ಕಿಲ್ಲ.

  • India’s G20 Presidency has been the most ambitious in history of G-20. 73 outcomes (lines of effort) and 39 annexed documents (presidency documents, not including Working Group outcome documents). With 112 outcomes and presidency documents, we have more than doubled the… pic.twitter.com/1d32f9Kkv7

    — ANI (@ANI) September 9, 2023 " class="align-text-top noRightClick twitterSection" data=" ">

ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗವು ಒಟ್ಟಾರೆ 112 ಘೋಷಣೆಗಳನ್ನು ಹೊರಡಿಸಿದೆ. ಅವುಗಳಲ್ಲಿ 73 ಘೋಷಣೆಗಳನ್ನು ವಿಶ್ವದ ಎಲ್ಲ ನಾಯಕರು ಅಂಗೀಕರಿಸಿದ್ದರೆ, 39 ಘೋಷಣೆಗಳನ್ನು ದಾಖಲೆಯಲ್ಲಿ ಲಗತ್ತಿಸಿ ಮಂಡಿಸಲಾಗಿದೆ. ಇವೆಲ್ಲವೂ ಮಾನ್ಯತೆ ಪಡೆದಿವೆ ಎಂಬುದು ಗಮನಾರ್ಹ. ಇದೆಲ್ಲವನ್ನೂ ಗಮನಿಸಿದರೆ, ಒಂದು ವರ್ಷದಿಂದ ಭಾರತದಲ್ಲಿ ನಡೆಯುತ್ತಿರುವ ಹಲವು ಸಭೆಗಳು ಸಾರ್ಥಕತೆ ಪಡೆದಿವೆ ಎಂದು ಸಾರುತ್ತವೆ.

ಇಟಲಿಯಲ್ಲಿ 2ನೇ ಅತ್ಯಧಿಕ ಘೋಷಣೆ: ಕಳೆದ ವರ್ಷ (2022)ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 27 ಘೋಷಣೆಗಳು, 23 ದಾಖಲೆ ಸಹಿತ ರೆಸಲ್ಯೂಶನ್​ಗಳಿಗೆ ಅಂಗೀಕಾರ ಸಿಕ್ಕಿತ್ತು. 2021 ರಲ್ಲಿ ಇಟಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ 36 ಸಂಕಲ್ಪಗಳಿಗೆ ಅಂಗೀಕಾರ, 29 ದಾಖಲೆಗಳ ಪ್ರಸ್ತುತಿ ಸೇರಿದಂತೆ 65 ಘೋಷಣೆಗಳನ್ನು ಮಾಡಲಾಗಿತ್ತು. ಇದು ಜಿ20 ಶೃಂಗದ ಇತಿಹಾಸದಲ್ಲೇ ಅತ್ಯಧಿಕವಾಗಿತ್ತು. ಇದೀಗ ಭಾರತ ಅಧ್ಯಕ್ಷತೆಯ ಶೃಂಗವು 112 ಘೋಷಣೆಗಳನ್ನು ಹೊರಡಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ.

2020 ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಶೃಂಗದಲ್ಲಿ 30 ಘೋಷಣೆಗಳು, 2016 ರ ಜಪಾನ್​ ಶೃಂಗದಲ್ಲಿ 29, 2018 ರಲ್ಲಿ ಅರ್ಜೇಂಟೀನಾದಲ್ಲಿನ ಶೃಂಗದಲ್ಲಿ 33, 2017 ರಲ್ಲಿ ಜರ್ಮನಿಯ ಶೃಂಗದಲ್ಲಿ 22 ಘೋಷಣೆಗಳನ್ನು ಹೊರಡಿಸಲಾಗಿತ್ತು.

ಶೆರ್ಪಾ ಸಭೆಗಳು : ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡು ಬಳಿಕ ದೇಶದ ಹಲವು ನಗರಗಳಲ್ಲಿ 200 ಕ್ಕೂ ಅಧಿಕ ಸಭೆಗಳನ್ನು ನಡೆಸಿದೆ. ಹಣಕಾಸು, ವಿದೇಶಾಂಗ, ಪರಿಸರ ಇಲಾಖೆ ಸಚಿವರ ಸಭೆಗಳು ಇದರಲ್ಲಿವೆ. ಈ ಎಲ್ಲ ಸಭೆಗಳಲ್ಲಿ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಅದೆಲ್ಲದಕ್ಕೂ ಇಂದಿನಿಂದ ಆರಂಭವಾಗಿರುವ ವಿಶ್ವನಾಯಕರ ಜಿ20 ಶೃಂಗಸಭೆಯಲ್ಲಿ ಅಂತಿಮ ಮುದ್ರೆ ಬಿದ್ದಿದೆ.

ನವದೆಹಲಿಯಲ್ಲಿ ಶೃಂಗಸಭೆಯ ಮೊದಲ ದಿನದ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಜಿ20 ಕಾಯಂ ಸದಸ್ಯರಾಗಿ ಘೋಷಿಸಿದರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಜಿ20 ಯ ಕಾಯಂ ಸದಸ್ಯ ಸ್ಥಾನ ಅಲಂಕರಿಸಿದರು.

ಇದನ್ನೂ ಓದಿ: ಒಂದು ಭೂಮಿ 'ನವದೆಹಲಿ ಘೋಷಣೆ'ಗಳಿಗೆ ವಿಶ್ವ ನಾಯಕರ ಒಮ್ಮತ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.