ನವದೆಹಲಿ: ಭಾರತೀಯ ಖಾಸಗಿ ವಿಮೆ ಕಂಪನಿಗಳಲ್ಲಿ ವಂಚನೆ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು, ವಿಮೆ ಸಂಬಂಧಿತ ವಂಚನೆ ಮತ್ತು ಅಪಾಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ವಂಚನೆ ಅಪಾಯ ನಿರ್ವಹಣಾ ಚೌಕಟ್ಟನ್ನು ಪರಿಗಣಿಸುವ ಅವಶ್ಯಕತೆಯಿದೆ ಎಂದು ಡೆಲಾಯೆಟ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಜೀವ ಮತ್ತು ಆರೋಗ್ಯ ವಿಮೆಯಲ್ಲಿ ವಂಚನೆ ಪ್ರಕರಣಗಳ ಏರಿಕೆ ಭಾರತದಲ್ಲಿ ಕಂಡು ಹೆಚ್ಚುತ್ತಿದೆ. ಡಿಜಿಟೈಸೆಷನ್ ಹೆಚ್ಚಳ, ಸಾಂಕ್ರಾಮಿಕ ಹಿನ್ನಲೆ ರಿಮೋಟ್ ಪ್ರದೇಶದಲ್ಲಿ ಕೆಲಸ ನಿರ್ವಹಣೆ, ನಿಯಂತ್ರಣ ದುರ್ಬಲತೆಗಳು ಪ್ರಕರಣಗಳು ನಡೆಯಲು ಪ್ರಮುಖ ಕಾರಣವಾಗಿದೆ ಎಂದು ಡೆಲೊಯೈಟಿಸ್ ಇನ್ಸುರೆನ್ಸ್ ಫ್ರಾಡ್ ಸರ್ವೆ 2023 ತಿಳಿಸಿದೆ.
ಈ ಸಂಬಂಧಿತ ನಡೆದ ಸಮೀಕ್ಷೆಯಲ್ಲಿ ಶೇ 60ರಷ್ಟು ಜನರು ವಿಮೆಯಲ್ಲಿ ವಂಚನೆ ಹೆಚ್ಚಳವಾಗುತ್ತಿರುವ ಕುರಿತು ತಿಳಿಸಿದ್ದಾರೆ. ಶೇ 10ರಷ್ಟು ಮಂದಿ ಸುಧಾರಿತ ಮಟ್ಟದ ವಂಚನೆ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಕಂಡುಕೊಂಡಿದೆ. 2023ನೇ ಆರ್ಥಿಕ ಎರಡನೇ ತ್ರೈಮಾಸಿಕದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಭಾರತದ ಪ್ರಮುಖ ವಿಮಾ ಕಂಪನಿಗಳು ಸಂದರ್ಶನದ ಜೊತೆ ಪ್ರಮುಖ ಸಿ ಸ್ಯೂಟ್ ಸ್ಟೇಕ್ ಹೋಲ್ಡರ್ ಮತ್ತು ಹಿರಿಯ ನಿರ್ವಹಣಾ ಮಂಡಳಿಗಳು ಈ ಸಂಬಂಧ ಪ್ರತಿಕ್ರಿಯೆ ನೀಡಿದೆ
ವಿಮೆ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಅನ್ವೇಷಣೆ ವೇಗ, ಉತ್ತಮ ಗ್ರಾಹಕ ಅನುಭವ ಮತ್ತು ಸುಲಭ ಬಳಕೆಯನ್ನು ನೀಡುತ್ತದೆ. ಇದು ಸಂಪೂರ್ಣ ವ್ಯವಸ್ಥೆಯಲ್ಲಿ ದುರ್ಬಲತೆ ಮತ್ತು ಸಂಪೂರ್ಣ ಅಪಾಯಕ್ಕೆ ತಳ್ಳುತ್ತಿದೆ. ಹೊಸ ಮಾದರಿಯ ಈ ವಂಚನೆ ಪ್ರಕರಣದಲ್ಲಿ, ದತ್ತಾಂಶ ಕದಿಯುವಿಕೆ ಮತ್ತು ಮೂರನೇ ವ್ಯಕ್ತಿ ಒಳಸಂಚುಗಳು ಮತ್ತು ತಪ್ಪಾಗಿ ವಿಮಾ ಉತ್ಪನ್ನಗಳ ಮಾರಾಟದಂತಹ ಸಂಪ್ರದಾಯಿಕ ವಂಚನೆ ಕಾಣಬಹುದು. ಈ ರೀತಿಯ ವಂಚನೆಗಳು ಇಂದಿಗೂ ಈ ವಲಯದ ಪ್ರಮುಖ ಕಾಳಜಿ ವಿಷಯವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಡೆಲಾಯೆಟ್ ಇಂಡಿಯಾದ ಪಾಲುದಾರ ಮತ್ತು ಆರ್ಥಿಕ ಸೇವಾ ನಾಯಕ ಸಂಜಯ್ ದತ್ ತಿಳಿಸುವಂತೆ ವಂಚನೆಯನ್ನು ತಗ್ಗಿಸುವಲ್ಲಿ ಸರಿಯಾದ ಕಾರ್ಯತಂತ್ರದ ಅವಶ್ಯಕತೆ ಇದೆ. ಇದನ್ನು ವ್ಯವಸ್ಥೆಯ ಮೇಲಿನಿಂದಲೂ ನಡೆಸಬೇಕು. ಜೊತೆಗೆ ವಿಮೆ ಕಾರ್ಯಾಚರಣೆಯ ವ್ಯವಸ್ಥೆಗಳನ್ನು ಪಡೆಯುವವರು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಕಾಲ ಕಾಲಕ್ಕೆ ತಕ್ಕಂತೆ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡುತ್ತಾರೆ. ಭಾರತೀಯ ವಿಮೆ ವಲಯದಲ್ಲಿ ಬೇರೆ ವಲಯದಂತೆ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು, ಬಹುಬೇಗ ಉದ್ಯಮದಲ್ಲಿ ವೇಗದ ಕಾರ್ಯಾಚರಣೆ ಸಾಗುತ್ತಿದೆ. ತಂತ್ರಜ್ಞಾನ ಮೂಲಕ ಗ್ರಾಹಕರ ಪರಿಶೀಲನೆ ಮತ್ತು ಅನುಭಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ.
ವಿಮೆ ಕಂಪನಿಯ ಮಂಡಳಿ ಮತ್ತು ನಿರ್ವಹಣೆಯಲ್ಲಿ ಜೀವ ವಿಮೆ ಮತ್ತು ಆರೋಗ್ಯ ವಿಮೆಯಲ್ಲಿ ವಂಚನೆ ತಗ್ಗಿಸುವುದು ಪ್ರಧಾನ ಆದ್ಯತೆ ಆಗಿದೆ. ಉಳಿದವುಗಳು ಪ್ರಮುಖ ಅವಶ್ಯಕತೆಗಳಾಗಿವೆ. ಇಂತಹ ಅಪಾಯವನ್ನು ಕಡಿಮೆ ಮಾಡಲು ಭಾರತೀಯ ವಿಮೆಗಳು ಪೂರ್ವಭಾವಿ ವಂಚನೆ ಅಪಾಯ ನಿರ್ವಹಣಾ ಚೌಕಟ್ಟನ್ನು ಪರಿಗಣಿಸುವ ಅವಶ್ಯಕವಾಗಿದೆ ಎಂದರು.
ಡಿಲಾಯೆಟ್ ಇಂಡಿಯಾ ಭಾಗಿದಾರರಾಗಿರುವ ಕೆ.ವಿ.ಕಾರ್ತಿಕ್ ಈ ಕುರಿತು ತಿಳಿಸಿದ್ದು, ಹೊಸ ತಂತ್ರಜ್ಞಾನಗಳ ಅಳವಡಿಕೆ ಕೆಲಸ ಮಾಡುವ ಶೈಲಿಯನ್ನು ಬದಲಾಯಿಸುತ್ತಿದೆ. ವಿಶೇಷವಾಗಿ ಸಾಂಕ್ರಾಮಿಕತೆ ಬಳಿಕ, ನಿಯಂತ್ರಣ ಕಡಿಮೆಯಾಗಿದೆ. ಅವಕಾಶಗಳನ್ನು ಬಳಸಿಕೊಂಡು ವಂಚಕರು ವ್ಯವಸ್ಥೆಯ ದೋಷಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಯುವಕರೇ ಎಚ್ಚರ! ತ್ವರಿತ ಸಾಲಗಳ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ರವರಿಂದ ಮೋಸ ಹೋಗಬೇಡಿ