ETV Bharat / business

ಗೃಹ ಸಾಲ ಹೊರೆ ಕಡಿಮೆ ಮಾಡಲು ವರ್ಗಾವಣೆ ಆಯ್ಕೆ ನೋಡುತ್ತಿದ್ದರೆ, ಈ ಅಂಶಗಳು ನೆನಪಿರಲಿ - ಪ್ರತಿಯೊಬ್ಬರಿಗೂ ಗರಿಷ್ಟ ಮಟ್ಟ ತಲುಪಿದೆ

ಇದೀಗ ಬಡ್ಡಿದರ ಹೆಚ್ಚಳವಾಗಿದ್ದು, ಗೃಹ ಸಾಲದ ಹೊರೆಯಿಂದಾಗಿ ಕಡಿಮೆ ಬಡ್ಡಿದರದ ಬ್ಯಾಂಕ್​ಗಳಿಗೆ ವರ್ಗಾವಣೆಗೆ ನೋಡುತ್ತಿದ್ದರೆ, ಅದಕ್ಕೆ ಮೊದಲು ಈ ಅಂಶಗಳನ್ನು ಅರಿಯಿರಿ.

If you are looking at the transfer option to reduce your home loan burden, keep this point in mind

author img

By

Published : May 30, 2023, 12:43 PM IST

ಕಳೆದ ವರ್ಷಕ್ಕಿಂತ ಗೃಹ ಸಾಲ ಬಡ್ಡಿದರ ಹೆಚ್ಚಿಗೆ ಆಗಿದೆ. ಈ ಬಡ್ಡಿದರದ ಹೊರೆ ಈಗಾಗಲೇ ಪ್ರತಿಯೊಬ್ಬರಿಗೂ ಗರಿಷ್ಟ ಮಟ್ಟ ತಲುಪಿದೆ. ಈ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬೇಕು ಎಂದರೆ, ನೀವು ಕಡಿಮೆ ಬಡ್ಡಿದರ ನೀಡುವ ಬ್ಯಾಂಕ್​ಗಳ ಆಯ್ಕೆ ಮಾಡಬೇಕು. ಆದರೆ, ಇದಕ್ಕೆ ಮೊದಲು ಅದರ ಪ್ರಕ್ರಿಯೆ ಮತ್ತು ಇತರೆ ಶುಲ್ಕಗಳನ್ನು ನೀವು ಗಮನಿಸುವುದು ಅಗತ್ಯ.

ಕಡಿಮೆ ಬಡ್ಡಿದರದ ಪ್ರಯೋಜನಗಳು ಹೊಸ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುವ ವೆಚ್ಚಕ್ಕಿಂತ ಗಣನೀಯವಾಗಿ ಹೆಚ್ಚಿರಬೇಕು ಎಂಬುದು ಮುಖ್ಯ ಅಂಶ. ಇಲ್ಲಿ ಮತ್ತೊಂದು ಪ್ರಮುಖ ಅಂಶ ಎಂದರೆ ಹೊಸ ಬ್ಯಾಂಕ್​ ಹೆಚ್ಚುವರಿಯಾಗಿ 7 ಲಕ್ಷ ರೂ ನೀಡಿದಾಗ ಏನು ಮಾಡಬೇಕು ಎಂಬುದು. ನಿಮಗೆ ಹಣದ ಅವಶ್ಯಕತೆ ಇಲ್ಲ ಎಂದಾಗ ಹೆಚ್ಚಿನ ಸಾಲಕ್ಕೆ ಮುಂದಾಗಬೇಡಿ. ಇದು ಮತ್ತಷ್ಟು ಬಡ್ಡಿದರ ಹೆಚ್ಚಿಸುತ್ತದೆಯೇ ಹೊರತು ಲಾಭ ನೀಡುವುದಿಲ್ಲ.

ನೀವು 35 ಲಕ್ಷಕ್ಕೆ ಗೃಹ ಸಾಲ ಪಡೆದರೆ, ಅರ್ಧಕ್ಕಿಂತ ಕಡಿಮೆ ಬಡ್ಡಿದರ ನೀಡುವ ಬ್ಯಾಂಕ್​ಗಳಿಗೆ ಬದಲಾಗಬಹುದು. ಇದು ಏರುತ್ತಿರುವ ಬಡ್ಡಿದರದ ನಡುವೆ ಇದು ಹೊರೆ ಕಡಿಮೆ ಮಾಡುತ್ತದೆ. ಈ ವೇಳೆ ಮತ್ತೆ 7 ಲಕ್ಷ ಸಾಲವನ್ನು ಹೆಚ್ಚುವರಿಯಾಗಿ ನೀಡುವ ಸಾಧ್ಯತೆ ಇದೆ. ಆದರೆ, ಈ ಹೆಚ್ಚುವರಿ ಸಾಲದ ಆಮಿಷ ಉತ್ತಮ ಮಾರ್ಗವಲ್ಲ. ಇದು ನಿಮ್ಮ ಬಡ್ಡಿ ಹೊರೆ ಕಡಿಮೆ ಮಾಡುವ ಬದಲಾಗಿ ಮತ್ತಷ್ಟು ಹೆಚ್ಚಿಸುತ್ತದೆ.

ಹೀಗಿರಲಿ ಹೂಡಿಕೆ..: ಹೊಸದಾಗಿ ಉದ್ಯೋಗ ಸೇರಿದ ಯುವಕ/ ಯುವತಿ ಮಾಸಿಕ 28 ಸಾವಿರ ವೇತನ ಪಡೆಯುತ್ತಿದ್ದರೆ, 700 ಹೂಡಿಕೆಯಲ್ಲಿ ಏನು ಮಾಡಬೇಕು. ಚಿಕ್ಕ ವಯಸ್ಸಿನಲ್ಲಿ ವಿಮೆ ಮಾಡುವುದರಿಂದ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ರಕ್ಷಣೆ ಸಿಗುತ್ತದೆ. ಇದರಲ್ಲಿ ನೀವು ಅವಲಂಬಿತರಾಗಿದ್ದರೆ, ಜೀವ ವಿಮೆ ಪಾಲಿಸಿ ಪಡೆಯುವುದರಿಂದ ವಾರ್ಷಿಕ ಆದಾಯದ ಕನಿಷ್ಠ 12 ಪಟ್ಟು ಲಾಭ ಪಡೆಯಬಹುದು.

ಇದಲ್ಲದೆ, ಆರೋಗ್ಯ ವಿಮೆ ಮತ್ತು ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳು ಅತ್ಯಗತ್ಯ. ಕನಿಷ್ಠ ಆರು ತಿಂಗಳ ಖರ್ಚುಗಳನ್ನು ಒಳಗೊಂಡ ತುರ್ತು ನಿಧಿ ನಿರ್ಮಿಸಿ. ಇದರ ನಂತರ, ಹೂಡಿಕೆಗಳ ಬಗ್ಗೆ ಯೋಚಿಸಿ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ 7 ಸಾವಿರ ರೂ.ಗಳಲ್ಲಿ 3 ಸಾವಿರ ರೂ. ಉಳಿದ 4 ಸಾವಿರ ರೂ.ಗಳನ್ನು ಈಕ್ವಿಟಿ ಫಂಡ್‌ಗಳಲ್ಲಿ ಹಂತಹಂತವಾಗಿ ಹೂಡಿಕೆ ತಂತ್ರದಲ್ಲಿ ಹೂಡಿಕೆ ಮಾಡಬಹುದು.

12 ವರ್ಷದ ಮಗು ಭವಿಷ್ಯದಲ್ಲಿ ಅಂದರೆ, 9 ವರ್ಷಗಳ ಬಳಿಕ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ನಿರ್ಧರಿಸಿದರೆ, ಈ ಅವಧಿಯಲ್ಲಿ ಮಾಸಿಕ 30 ಸಾವಿರ ಹೂಡಿಕೆ ಮಾಡಬೇಕು. ಇದರಲ್ಲಿ ಏನು ಮಾಡಬೇಕು ಎಂದರೆ ಅಮೆರಿಕ ಹಣದುಬ್ಬರ ಮತ್ತು ಡಾಲರ್​​ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದರ ಅನುಸಾರ ಶೇ 60-70 ರಷ್ಟು ಹಣವನ್ನು ಅಮೆರಿಕ ಮೂಲದ ಮ್ಯೂಚುಯಲ್​ ಫಂಡ್​ನಲ್ಲಿ ಹೂಡಿಕೆ ಮಾಡಬೇಕು. ಉಳಿದ ಶೇ 40ರಷ್ಟನ್ನು ಈಕ್ವಿಟಿ ಫಂಡ್​ಗಳಲ್ಲಿ ಹೂಡಿಕೆ ಮಾಡಬೇಕು. ಹಣ ಬೇಕಾಗುವ ಎರಡು ವರ್ಷಗಳ ಮೊದಲು ಇಕ್ವಿಟಿ ಹೂಡಿಕೆಗಳನ್ನು ಕಡಿಮೆ ಮಾಡಬೇಕು.

ಇದನ್ನೂ ಓದಿ: 2022-23 ಆದಾಯ ತೆರಿಗೆ ಪಾವತಿ ವೇಳೆ ಈ ತಪ್ಪು ಬೇಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.