ಹೈದರಾಬಾದ್ (ತೆಲಂಗಾಣ): ಈ ಬೇಸಿಗೆ ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುತ್ತಿದ್ದೀರಾ?, ನೀವು ಸಮುದ್ರದ ಸೊಬಗು.. ಮರಳಿನ ದಿಬ್ಬಗಳು.. ಹಸಿರು ಮರಗಳ ಮಧ್ಯೆ ವಿಶ್ರಮಿಸಲು ನೋಡುತ್ತಿದ್ದೀರಾ?, ಆಗಾದ್ರೆ ನೀವು IRCTC ಅಂಡಮಾನ್ ಪ್ರವಾಸದ ಪ್ಯಾಕೇಜ್ ಬಗ್ಗೆ ತಿಳಿದುಕೊಳ್ಳಲೇ ಬೇಕು.
ಹೈದರಾಬಾದಿನಿಂದ ವಿಮಾನದಲ್ಲಿ ಹೊರಟು, ಪೋರ್ಟ್ ಬ್ಲೇರ್‌ಗೆ ಹೋಗಿ.. ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡು ವಿಮಾನದಲ್ಲಿ ಹೈದರಾಬಾದ್‌ಗೆ ವಾಪಸಾಗುವ ಮೂಲಕ ಈ ಪ್ರವಾಸ ಮುಗಿಯುತ್ತದೆ. ಈ ಪ್ಯಾಕೇಜ್ ಮೇ 26 ರಂದು ಪ್ರಾರಂಭವಾಗಲಿದ್ದು, ಐದು ರಾತ್ರಿ ಮತ್ತು ಆರು ಹಗಲು ಒಳಗೊಂಡಿರುತ್ತದೆ.
ದಿನ 1: ಪ್ರಯಾಣವು ಮೇ 26 ರಂದು ಹೈದರಾಬಾದ್‌ನಿಂದ ಮುಂಜಾನೆ ವಿಮಾನದೊಂದಿಗೆ ಪ್ರಾರಂಭವಾಗುತ್ತದೆ. ಎಲ್ಲಾ ಪ್ರಯಾಣಿಕರು ಬೆಳಗ್ಗೆ 4.35 ರೊಳಗೆ ವಿಮಾನ ನಿಲ್ದಾಣವನ್ನು ತಲುಪಬೇಕು. ವಿಮಾನವು ಹೈದರಾಬಾದ್‌ನಿಂದ 6.35 ಕ್ಕೆ ಹೊರಡುತ್ತದೆ ಮತ್ತು 9.15 ಕ್ಕೆ ಪೋರ್ಟ್ ಬ್ಲೇರ್ ತಲುಪುತ್ತದೆ. ಮುಂಚಿತವಾಗಿ ಕಾಯ್ದಿರಿಸಿದ ಹೋಟೆಲ್‌ನಲ್ಲಿ ವಸತಿ ಇರುತ್ತದೆ. ಊಟದ ವಿರಾಮದ ನಂತರ ಸೆಲ್ಯುಲರ್ ಜೈಲ್ ಮ್ಯೂಸಿಯಂ ಮತ್ತು ಕೊರ್ಬಿಕೋವ್ ಬೀಚ್‌ಗೆ ಭೇಟಿ ನೀಡಲಾಗುವುದು. ರಾತ್ರಿ ಸೆಲ್ಯುಲಾರ್ ಜೈಲಿನಲ್ಲಿ ಆಯೋಜಿಸಿರುವ ಲೈಟ್ ಅಂಡ್ ಸೌಂಡ್ ಶೋ ವೀಕ್ಷಿಸಬಹುದು. ಪೋರ್ಟ್ ಬ್ಲೇರ್‌ನಲ್ಲಿ ರಾತ್ರಿಯ ತಂಗುವಿಕೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.
ದಿನ 2: ಎರಡನೇ ದಿನದ ಬೆಳಗ್ಗೆ ಹ್ಯಾವ್ಲಾಕ್ ದ್ವೀಪಕ್ಕೆ ದೋಣಿ ವಿಹಾರ ಇರುತ್ತದೆ. ಬೆಳಗಿನ ಉಪಾಹಾರವನ್ನು ಪ್ಯಾಕ್ ಮಾಡಿ ಬಡಿಸಲಾಗುತ್ತದೆ. ಹ್ಯಾವ್ಲಾಕ್ ತಲುಪಿದ ನಂತರ, ಹೋಟೆಲ್ ಕೋಣೆಯಲ್ಲಿ ತಂಗಬೇಕಾಗುತ್ತದೆ. ಊಟದ ವಿರಾಮದ ನಂತರ ರಾಧಾನಗರ ಬೀಚ್‌ಗೆ ಭೇಟಿ ನೀಡಲಾಗುವುದು. ಹ್ಯಾವ್ಲಾಕ್ ದ್ವೀಪದಲ್ಲಿ ರಾತ್ರಿಯ ತಂಗುವಿಕೆಗೆ ವ್ಯವಸ್ಥೆ ಇರುತ್ತದೆ.
ದಿನ 3: ಮೂರನೇ ದಿನ ನೀವು ಹ್ಯಾವ್ಲಾಕ್ನಿಂದ ನೀಲ್ ದ್ವೀಪಕ್ಕೆ ಹೊರಡಬೇಕು. ಬೆಳಗಿನ ಉಪಾಹಾರದ ನಂತರ ಕಾಲಾಪತ್ತರ್ ಬೀಚ್‌ಗೆ ಹೋಗಿ ಅಲ್ಲಿಂದ ನೈಲ್ ದ್ವೀಪಕ್ಕೆ ದೋಣಿಯಲ್ಲಿ ಪ್ರಯಾಣ ಇರುತ್ತದೆ. ಅಲ್ಲಿ ಮತ್ತೆ ಹೋಟೆಲ್‌ನಲ್ಲಿ ತಂಗಬೇಕಾಗುತ್ತದೆ. ಸಂಜೆ ನೀವು ಲಕ್ಷ್ಮಣಪುರದಲ್ಲಿ ಸೂರ್ಯಾಸ್ತವನ್ನು ನೋಡಬಹುದು. ಬಳಿಕ ರಾತ್ರಿ ಅದೇ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಬೇಕಾಗುತ್ತದೆ.
ದಿನ 4: ನಾಲ್ಕನೇ ದಿನ ನೀವು ನೈಲ್ ಐಲ್ಯಾಂಡ್‌ನಿಂದ ಪೋರ್ಟ್ ಬ್ಲೇರ್‌ಗೆ ಪ್ರಯಾಣಿಸಬೇಕು. ಬೆಳಗಿನ ಉಪಾಹಾರದ ನಂತರ ಭಾರತನಗರ ಬೀಚ್‌ಗೆ ಭೇಟಿ ನೀಡಲಾಗುವುದು. ಅಲ್ಲಿ ನೀವು ಈಜು, ಗ್ಲಾಸ್ ಬಾಟಮ್ ಬೋಟ್ ರೈಡ್ ಮತ್ತು ಇತರ ಜಲ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಅದರ ನಂತರ ಪೋರ್ಟ್ ಬ್ಲೇರ್‌ಗೆ ಮರಳುತ್ತೇವೆ. ಮತ್ತೆ ಪೋರ್ಟ್ ಬ್ಲೇರ್‌ನಲ್ಲಿ ರಾತ್ರಿ ತಂಗುವುದು.
ದಿನ 5: ಐದನೇ ದಿನದ ಉಪಹಾರದ ನಂತರ, ರಾಸ್ ದ್ವೀಪದಲ್ಲಿ ಸ್ವಲ್ಪ ಸಮಯ ಕಳೆದ ನಂತರ, ನಿಮ್ಮನ್ನು ಉತ್ತರ ಬೇ ದ್ವೀಪಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನೀವು ಜಲ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಪೋರ್ಟ್ ಬ್ಲೇರ್‌ನಲ್ಲಿಯೇ ಊಟದ ವ್ಯವಸ್ಥೆ ಇರುತ್ತದೆ. ಮುಂದಿನದು ಸಾಗರ ವಸ್ತುಸಂಗ್ರಹಾಲಯಕ್ಕೆ ಭೇಟಿ. ಸಂಜೆ ಶಾಪಿಂಗ್ ಸಾಧ್ಯ. ಮತ್ತೆ ಪೋರ್ಟ್ ಬ್ಲೇರ್‌ನ ಹೋಟೆಲ್‌ನಲ್ಲಿ ರಾತ್ರಿ ತಂಗಲು ವ್ಯವಸ್ಥೆ.
ದಿನ 6: ಪೋರ್ಟ್ ಬ್ಲೇರ್‌ನಿಂದ ಬೆಳಗ್ಗೆ 7.55 ಕ್ಕೆ ವಿಮಾನ ನಿಲ್ದಾಣವನ್ನು ತಲುಪಿ, ವಿಮಾನವು 9.55 ಕ್ಕೆ ಹೊರಡುತ್ತದೆ. ಮಧ್ಯಾಹ್ನ 12.10ಕ್ಕೆ ಹೈದರಾಬಾದ್ ತಲುಪುವ ಮೂಲಕ ಪ್ರವಾಸ ಕೊನೆಗೊಳ್ಳಲಿದೆ.
ಪ್ಯಾಕೇಜ್ ಬೆಲೆಗಳ ವಿವರ ಹೀಗಿದೆ:
* ಒನ್ ಆಕ್ಯುಪೆನ್ಸಿ: ರೂ.55,780
* ಡಬಲ್ ಆಕ್ಯುಪೆನ್ಸಿ: ರೂ.43,170
* ಟ್ರಿಪಲ್ ಆಕ್ಯುಪೆನ್ಸಿ: ರೂ.42,885
* ಹಾಸಿಗೆಯೊಂದಿಗೆ ಮಗುವಿಗೆ (5-11 ವರ್ಷ): 38,600 ರೂ.
* ಹಾಸಿಗೆ ಇರುವ ಅಥವಾ ಇಲ್ಲದ ಮಗುವಿಗೆ (2-11 ವರ್ಷಗಳು): 35,200 ರೂ.
* ಎರಡು ವರ್ಷದೊಳಗಿನ ಮಕ್ಕಳಿಗೆ ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ರೂ.1500 ವರೆಗೆ ಶುಲ್ಕವನ್ನು ಪಾವತಿಸಬೇಕು.
ಪ್ಯಾಕೇಜ್‌ನಲ್ಲಿ ಏನುಂಟು..:
* ಹೈದರಾಬಾದ್‌ನಿಂದ ಪೋರ್ಟ್ ಬ್ಲೇರ್‌ಗೆ.. ಪೋರ್ಟ್ ಬ್ಲೇರ್‌ನಿಂದ ಹೈದರಾಬಾದ್‌ಗೆ ವಿಮಾನ ಟಿಕೆಟ್‌ಗಳು
* ಎಸಿ ಕೊಠಡಿಗಳು
* ಪ್ರವಾಸದ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಎಸಿ ವಾಹನಗಳಲ್ಲಿ ಪ್ರಯಾಣ
* ನೇಲ್, ಹ್ಯಾವ್‌ಲಾಕ್ ಮತ್ತು ನಾರ್ತ್‌ಬೇ ದ್ವೀಪಕ್ಕೆ ನೌಕಾಯಾನದ ವೆಚ್ಚಗಳು
* ಪ್ಯಾಕೇಜ್‌ನ ಭಾಗವಾಗಿ 4 ದಿನಗಳವರೆಗೆ ಬೆಳಗ್ಗೆ ಟಿಫಿನ್ ಮತ್ತು 5 ದಿನಗಳವರೆಗೆ ರಾತ್ರಿಯ ಊಟವನ್ನು ನೀಡಲಾಗುತ್ತದೆ.
* IRCTC ಟೂರ್ ಎಸ್ಕಾರ್ಟ್ ಇರುತ್ತದೆ..
ಇದಕ್ಕೆ ಪ್ರಯಾಣಿಕರೇ ಹೊಣೆ:
* ವಿಮಾನ ಟಿಕೆಟ್ ದರದಲ್ಲಿ ಬದಲಾವಣೆಯಾದರೆ ಪ್ರಯಾಣಿಕರು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ..
* ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣದ ವ್ಯವಸ್ಥೆಯನ್ನು ಪ್ರಯಾಣಿಕರೇ ಮಾಡಿಕೊಳ್ಳಬೇಕು..
* ಮಧ್ಯಾಹ್ನದ ಊಟವು ಯಾತ್ರಿಕರ ವೆಚ್ಚದಲ್ಲಿರುತ್ತೆ..
* ವಿಮಾನದ ಪ್ಯಾಕೇಜ್‌ನ ವೆಚ್ಚದಲ್ಲಿ ಮಧ್ಯಾಹ್ನದ ಊಟವನ್ನು ಸೇರಿಸಲಾಗಿಲ್ಲ.
* ಜಲಕ್ರೀಡೆ ಮತ್ತು ಇತರ ಪ್ರೇಕ್ಷಣೀಯ ಸ್ಥಳಗಳ ಟಿಕೆಟ್‌ಗಳ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.
ಇತರೆ ವಿವರಗಳು..
* ಪ್ರಯಾಣದ ಸಮಯದಲ್ಲಿ ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ವೈಯಕ್ತಿಕ ಗುರುತಿನ ಚೀಟಿಯನ್ನು ಹೊಂದಿರಬೇಕು..
* ಭೇಟಿ ನೀಡುವ ಸ್ಥಳಗಳು ಸಮಯವನ್ನು ಅವಲಂಬಿಸಿ ಬದಲಾಗಬಹುದು..
* ಯಾವುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ IRCTC ಜವಾಬ್ದಾರಿ ಆಗಿರುವುದಿಲ್ಲ..
* ಯಾವುದೇ ಕಾರಣಕ್ಕಾಗಿ ಟಿಕೆಟ್ ರದ್ದುಗೊಂಡರೆ.. 7 ದಿನಗಳ ಮೊದಲು ಮರುಪಾವತಿ ನೀಡಲಾಗುತ್ತದೆ. ಒಂದು ವಾರದೊಳಗೆ ಒಂದು ರೂಪಾಯಿಯೂ ವಾಪಸ್ ಬರುವುದಿಲ್ಲ.
* ಹೆಚ್ಚಿನ ವಿವರಗಳಿಗಾಗಿ IRCTC ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿ..
ಓದಿ: ಐಆರ್ಸಿಟಿಸಿಯಿಂದ ಕಾಶ್ಮೀರ್ ಏರ್ ಟೂರ್ ಪ್ಯಾಕೇಜ್.. ಏನೆಂಟೂ, ಏನಿಲ್ಲ.. ಒಮ್ಮೆ ನೋಡಿ!!